ರಾಜಮಹಾರಾಜರ ಕಾಲದಿಂದ ಹಿಡಿದು ರೇಸ್ ಕೋರ್ಸ್ ವರೆಗೆ ಕುದುರೆ ಸವಾರಿ ಚಾಲ್ತಿಯಲ್ಲಿದೆ. ಭಿನ್ನವಿಭಿನ್ನವಾಗಿ ಕುದುರೆ ಸವಾರಿ ಮಾಡುವುದನ್ನು ನಾವು ಕಂಡಿದ್ದೇವೆ. ಆದರೆ ಇಲ್ಲೊಬ್ಬ ಇದ್ದಾನೆ ನೋಡಿ, ಈತ ಕುದುರೆ ಸವಾರಿ ಮಾಡುವ ಬದಲು ಕುದುರೆಯನ್ನೇ ತನ್ನ ಹೆಗಲ ಮೇಲೆ ಹೊತ್ತು ತಿರುಗುತ್ತಾನೆ! ಕಾರಣ : ಶಕ್ತಿ ಪ್ರದರ್ಶನ!

ಈತ ಉಕ್ರೇನ್ ಮೂಲದ ದಿಮಿತ್ರಿ ಖಲಾಡ್ಜಿ ಅಂತ (Dmitriy Khaladzhi), ಬೆರಗುಗೊಳಿಸುವ ಸಾಹಸಗಳಿಂದಾಗಿ ಅವರು ಹೆಚ್ಚು ಚರ್ಚೆಯಲ್ಲಿರುತ್ತಾರೆ. ಅವರನ್ನು ಜಗತ್ತಿನ ಅತ್ಯಂತ ಶಕ್ತಿಶಾಲಿ ವ್ಯಕ್ತಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗುತ್ತಿದೆ. ಆಗಾಗ ಇವರ ಸಾಹಸದ ವಿಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ‌.

ಇವರ ಹೆಸರು ಗಿನ್ನೇಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲೂ ದಾಖಲಾಗಿದೆ. ಅದೂ ಒಂದು ಸಲವಲ್ಲ, ಬರೊಬ್ಬರಿ ಅರವತ್ತು ಸಲ. ಮೊದಲು ಡಿಮಿಟ್ರಿ ಸರ್ಕಸ್ ನಲ್ಲಿ ಕೆಲಸ ಮಾಡುತ್ತಿದ್ದರು‌, ಕಬ್ಬಿಣದ ರಾಡ್ ಅನ್ನು ಬಾಯಿಂದ ಬಾಗಿಸುವುದು, 150 ಕೆ.ಜಿ ತೂಕವನ್ನು ಒಂದೇ ಕೈಯಲ್ಲಿ ಎತ್ತುವುದು ಇವರ ಸಾಹಸಗಳಲ್ಲಿ ಪ್ರಮುಖವಾದುವು.

ನಂಬೋಕೂ ಸಾಧ್ಯವಿಲ್ಲದ ಹಾಗೆ ಜನರಿರುವ ಎಸ್.ಯು.ವಿ ಕಾರನ್ನು ಮೈಮೇಲೆ ಹರಿಸಿಕೊಳ್ಳುವುದು, ಮೂರು ಮೂರು ಜನರನ್ನು ಹೊತ್ತುಕೊಳ್ಳುವುದು ಅವರ ಅದ್ಭುತ ಶಕ್ತಿಗೆ ಉದಾಹರಣೆಗಳು. ಹಾಗೆಯೇ ಕುದುರೆ ಹೊತ್ತು ತಿರುಗುವುದು ಅವರ ಹುಚ್ಚು ಸಾಹಸಗಳಲ್ಲಿ ಒಂದು. ಉಳಿದಿದ್ದೆಲ್ಲ ವಿಡಿಯೊದಲ್ಲಿದೆ ನೋಡಿ…

 

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •