ರೈತರು ಅನೇಕ ಬೆಳೆಗಳನ್ನು ತಮ್ಮ ಜಮೀನಿನಲ್ಲಿ ಬೆಳೆಯುತ್ತಾರೆ ಕೆಲವೊಮ್ಮೆ ಹಳೆಯ ಪದ್ಧತಿ, ಹಳೆಯ ತಳಿಗಳಿಂದ ನಷ್ಟವನ್ನು ಪಡೆಯುತ್ತಾರೆ. ನಾವು ಬಳಸುವ ಪ್ರಮುಖ ತರಕಾರಿಯಾದ ಹೀರೆಕಾಯಿ ಬೆಳೆಯನ್ನು ಬೆಳೆಯುವ ಹೊಸ ಮಾದರಿಯನ್ನು, ತಳಿಗಳು ಹಾಗೂ ಖರ್ಚುವೆಚ್ಚಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಎಲ್ಲರೂ ಅಡುಗೆಗೆ ಬಳಸುವ ಪ್ರಮುಖ ತರಕಾರಿಗಳಲ್ಲಿ ಒಂದಾದ ಹೀರೆಕಾಯಿ ತರಕಾರಿಯನ್ನು ಬಹಳಷ್ಟು ರೈತರು ಅನೇಕ ವರ್ಷಗಳಿಂದ ಬೆಳೆದುಕೊಂಡು ಬರುತ್ತಿದ್ದಾರೆ. ಭೂಮಿಯ ಮೇಲೆ ಹೀರೆಕಾಯಿ ಬೆಳೆಯನ್ನು ಬೆಳೆಯುವುದು ಹಳೆಯ ಪದ್ಧತಿ ನಂತರ ಬೇರೆಬೇರೆ ಹೊಸ ಮಾದರಿಗಳಲ್ಲಿ ಬೆಳೆಯುತ್ತಿದ್ದಾರೆ.

ತಂತಿಗಳನ್ನು ಕಟ್ಟಿ, ಕೆಳಗಡೆ ಮಲ್ಚಿಂಗ್ ಪೇಪರ್ ಹಾಕಿ ಹೀರೆಕಾಯಿ ಬೆಳೆಯಲಾಗುತ್ತದೆ ಹೀಗೆ ಬೆಳೆಯುವುದರಿಂದ ಅನೇಕ ಲಾಭಗಳಿವೆ ಹೀರೆಕಾಯಿ ಸ್ಟ್ರೇಟ್ ಆಗಿ ಬೆಳೆಯುತ್ತದೆ ಬಾಗುವುದಿಲ್ಲ, ಎಲೆಗಳು ಉದುರುವುದಿಲ್ಲ ಮತ್ತು ಕಳೆ ಸಮಸ್ಯೆ ಇರುವುದಿಲ್ಲ. ಇನ್ನೊಂದು ವಿಶೇಷವೆಂದರೆ ಒಮ್ಮೆ ಮಲ್ಚಿಂಗ್ ಪೇಪರ್ ಹಾಕುವುದರಿಂದ ಮೂರು ಬೆಳೆಯನ್ನು ಬೆಳೆಯಬಹುದು.

ಹೀರೆಕಾಯಿ ಬೆಳೆಯು ಒಂದೂವರೆ ತಿಂಗಳಿಗೆ ಫಸಲು ಬರುತ್ತದೆ. ಹೀರೆಕಾಯಿ ಬೆಳೆಯಲ್ಲಿ 4-5 ತಳಿಗಳಿವೆ ಅವುಗಳಲ್ಲಿ ಮುಖ್ಯವಾದ ತಳಿಗಳೆಂದರೆ ಅರ್ಕಾ ಪ್ರಸನ್ನ, ಅರ್ಕಾ ವಿಕ್ರಮ್ ಮತ್ತು ಅರ್ಕಾ ಸುಮೀತ್ ಇವು ಹೈಬ್ರಿಡ್ ಆಗಿದ್ದು ಬೇಗನೆ ಕಾಯಿ ಬಿಡುತ್ತದೆ ಮತ್ತು ಉತ್ತಮ ಕಾಯಿಗಳು ಬರುತ್ತದೆ.

ಅರ್ಕಾ ವಿಕ್ರಮ್ ಒಂದು ಹೆಕ್ಟೇರ್ ಗೆ 3-4 ಟನ್ ಹೀರೆಕಾಯಿಯನ್ನು ಬೆಳೆಯಬಹುದು. ಒಂದು ಎಕರೆ ಹೀರೆಕಾಯಿ ಬೆಳೆಯಲು ಒಂದುವರೆ ಲಕ್ಷ ಖರ್ಚಾಗುತ್ತದೆ. ಅರ್ಕಾ ವಿಕ್ರಮ್ ಬೆಳೆಯನ್ನು ಸಾಮಾನ್ಯವಾಗಿ ಹೆಚ್ಚು ಬೆಳೆಯಲಾಗುತ್ತದೆ. ಅದರಿಂದ ಒಂದು ಎಕರೆಗೆ 3-5 ಲಕ್ಷ ಆದಾಯ ಪಡೆಯಬಹುದು. ಅರ್ಕಾ ವಿಕ್ರಮ್ ತಳಿಯ ಹೀರೆಕಾಯಿ ಬೀಜಗಳು 2,500ರೂಪಾಯಿಗೆ ಸಿಗುತ್ತದೆ.

1ಕೆಜಿ ಬೀಜದಿಂದ ಒಂದು ಎಕರೆಯಲ್ಲಿ ಹೀರೆಕಾಯಿ ಬೆಳೆಯಬಹುದು. ಅರ್ಕಾ ಸುಮೀತ್ ಇದು ಒಂದು ವಿಶೇಷವಾದ, ಹೆಚ್ಚು ಇಳುವರಿ ಬರುವ ಹೀರೆಕಾಯಿ ತಳಿಯಾಗಿದೆ, ಇದರಿಂದ ಹೆಚ್ಚು ಆದಾಯ ಬರುತ್ತದೆ. ಹೀರೆಕಾಯಿ ಗಿಡಗಳಿಗೆ ಎಲೆಗಳು ಮುದುಡಿ ಹೋಗುವಂತ ರೋಗ ಬರುತ್ತದೆ ಮತ್ತು ವೈರಸ್ ಎಂಬ ರೋಗ ಬರುತ್ತದೆ ಅದಕ್ಕೆ ಔಷಧಿ ಸ್ಪ್ರೇ ಮಾಡುವುದರ ಮೂಲಕ ನಿವಾರಿಸಿಕೊಳ್ಳಬಹುದು.

ಹೀರೆಕಾಯಿ ಬೆಳೆಯನ್ನು ಯಾವಾಗ ಬೇಕಾದರೂ ಬೆಳೆಯಬಹುದು. ಹೀರೆಕಾಯಿ ಬೆಳೆಯು ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಗಳಿಸುವಂತಹ ಒಂದು ಪ್ರಮುಖ ತರಕಾರಿ ಬೆಳೆಯಾಗಿದೆ. ಈ ಬೆಳೆಯನ್ನು ಹೊಸ ತಳಿಗಳನ್ನು, ಹೊಸ ವಿಧಾನಗಳ ಮೂಲಕ ಬೆಳೆಯುವುದರಿಂದ ಹೆಚ್ಚು ಆದಾಯ ಗಳಿಸಬಹುದು. ಈ ಮಾಹಿತಿಯನ್ನು ತಪ್ಪದೇ ಎಲ್ಲಾ ರೈತ ಬಾಂಧವರಿಗೆ ತಿಳಿಸಿ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •