ನಾವು ಇವತ್ತು ಮನೆಯಲ್ಲೇ ಸುಲಭವಾಗಿ ಸನ್ ಟ್ಯಾನ್ ತೆಗೆಯುವುದು ಹೇಗೆ ಎಂದು ಹೇಳಿಕೊಡುತ್ತೇವೆ. ಇದನ್ನು ಹುಡುಗಿಯರು ಹಾಗೂ ಹುಡುಗರು ಸಹ ಉಪಯೋಗಿಸ ಬಹುದು ಯಾವುದೇ ಅಡ್ಡಪರಿಣಾಮಗಳು ಆಗುವುದಿಲ್ಲ. ಒಂದು ಬಟ್ಟಲಿಗೆ 1 ಚಮಚ ಕಡಲೆ ಹಿಟ್ಟು, 1 ಚಮಚ ಮೊಸರು, 1/4 ಟೀ ಚಮಚ ಅರಿಶಿಣ ಪುಡಿ, 1 ಚಮಚ ನಿಂಬೆ ರಸ, 1 ಚಮಚ ಜೇನುತುಪ್ಪ ಇದಕ್ಕೆ ನೀರು ಹಾಕದೆ ಕೊಬ್ಬರಿ ಎಣ್ಣೆಯನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಿ.ಇದರ ಉಪಯೋಗಗಳು ಕಡಲೆ ಹಿಟ್ಟು ಡೆಡ್ ಸ್ಕಿನ್ ತೆಗೆದುಹಾಕುತ್ತದೆ ಮತ್ತು ಚರ್ಮ ಕೋಮಲವಾಗಿ ಮಾಡುತ್ತೆ. ಅರಿಶಿನಪುಡಿ ನಿಮ್ಮ ಚರ್ಮವನ್ನು ಬೆಳ್ಳಗಾಗಲು ಸಹಾಯಮಾಡುತ್ತದೆಮತ್ತು ಚರ್ಮದ ಮೇಲಿನ ಸಣ್ಣ ಸಣ್ಣ ಕೂದಲನ್ನು ತೆಗೆಯಲು ಉಪಕಾರಿಯಾಗಿದೆ. ಮೊಸರು ನಿಮ್ಮ ಚರ್ಮವನ್ನು ಬೆಳ್ಳಗೆಮಾಡುತ್ತೆ. ನಿಂಬೆ ರಸದಿಂದ ಮುಖದ ಮೇಲೆ ಆಗಿರುವ ಸಣ್ಣ ಸಣ್ಣ ಗುಳ್ಳೆಗಳು, ಪಿಂಪಲ್ಸ್ ಕಡಿಮೆಯಾಗುತ್ತೆ. ಜೇನುತುಪ್ಪ ಉಪಯೋಗಿಸುವುದರಿಂದ ಚರ್ಮ ಕಾಂತಿಯುತವಾಗುತ್ತದೆ ಮತ್ತು ಕೊಬ್ಬರಿ ಎಣ್ಣೆಯ ಉಪಯೋಗಿಸುವುದರಿಂದ ನಿಮ್ಮ ಚರ್ಮದ ಕಾಂತಿ ಹೆಚ್ಚುತ್ತದೆ ಮತ್ತು ಕೋಮಲವಾಗುತ್ತದೆ. ತಯಾರಿಸಿರುವ ಪೇಸ್ಟನ್ನು ಹಚ್ಚಿ 20 ನಿಮಿಷ ಬಿಟ್ಟು ನಂತರ ಅದನ್ನು ತಣ್ಣೀರಿನಿಂದ ತೊಳೆಯಿರಿ ಇದನ್ನು ವಾರದಲ್ಲಿ 2 ಸಲ ಮಾಡಬೇಕು ಇದರಿಂದ ಸನ್ ಟ್ಯಾನ್ ಕಡಿಮೆ ಆಗುತ್ತದೆ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •