ಯಾವುದೇ ಸಂಬಂಧವಾದರೂ ಅಲ್ಲಿ ಆಗುವಂತಹ ಮೋಸವನ್ನು ಖಂಡಿತವಾಗಿಯೂ ಸಹಿಸಿಕೊಳ್ಳಲು ಆಗಲ್ಲ. ಒಮ್ಮೆ ಸಂ’ಗಾತಿಯು ಮೋಸ ಮಾಡಿದರೆ, ಆಗ ಅವರನ್ನು ಕ್ಷಮಿಸುವುದು ಕೂಡ ಅಷ್ಟು ಸುಲಭದ ಮಾತಲ್ಲ. ಯಾಕೆಂದರೆ ಅವರು ಸಂಪೂರ್ಣವಾಗಿ ನಂಬಿಕೆಯನ್ನು ಧ್ವಂಸ ಮಾಡಿರುವರು.

ಆದರೆ ಮೋ’ಸ ಮಾಡಿದಂತಹ ಪತಿಯು ತನ್ನ ನಡವಳಿಕೆಯಲ್ಲಿ ತಪ್ಪಿತಸ್ಥ ಭಾವನೆ ತೋರಿಸಬಹುದು ಮತ್ತು ಇದರಿಂದಾಗಿ ನೀವು ಅವರನ್ನು ಕ್ಷಮಿಸಬೇಕೇ ಅಥವಾ ಬೇಡವೇ ಎನ್ನುವ ಗೊಂದಲಕ್ಕೆ ಕೂಡ ಸಿಲುಕಬಹುದು.

ಇದು ನಿಜವಾಗಿಯೂ ಪಶ್ಚಾತ್ತಾಪವೇ ಅಥವಾ ನಾಟಕವೇ ಎಂದು ತಿಳಿಯುವುದು ಅಗತ್ಯ. ಆದರೆ ಪ’ತಿಯು ನಿಜವಾಗಿಯೂ ತಪ್ಪಿತಸ್ಥ ಭಾವನೆಗೆ ಸಿಲುಕಿರಬಹುದು ಎನ್ನುವ ಕೆಲವು ಲಕ್ಷಣಗಳನ್ನು ತಿಳಿಸಿಕೊಡಲಿದ್ದೇವೆ.

ಪದೇ ಪದೇ ಕ್ಷಮೆಯಾಚನೆ
ತಾನು ಮಾಡಿರುವಂತಹ ಅತೀ ಸಣ್ಣ ತಪ್ಪಿಗೂ ಆತ ಕ್ಷಮೆ ಯಾಚಿಸಬಹುದು. ಆತ ನಿಜವಾಗಿಯೂ ತಪ್ಪಿತಸ್ಥ ಭಾವನೆಯಲ್ಲಿದ್ದರೆ, ಆಗ ಖಂಡಿತವಾಗಿಯೂ ಆತ ನಿಮ್ಮಲ್ಲಿ ಸಾವಿರಾರು ಬಾರಿ ಕ್ಷಮೆ ಕೇಳಬಹುದು.

ಅವರು ಇದನ್ನು ಹೃದಯದಿಂದ ಹೇಳಿರಬಹುದು. ಯಾವುದೇ ಭರವಸೆ ಅಥವಾ ಸುಳ್ಳು ಹೇಳಲು ಅವರು ಮುಂದಾಗದೆ ಇರಬಹುದು. ಆದರೆ ಕೇವಲ ಕ್ಷಮೆ ಕೇಳಬಹುದು.

ಹೆಚ್ಚು ಸಂ’ವಹನ
ಪುರುಷರು ಯಾವತ್ತಿಗೂ ತಮ್ಮ ಮನಸ್ಸಿನ ಮಾತನ್ನು ಮುಕ್ತವಾಗಿ ಸಂಗಾತಿಯ ಬಳಿಯಲ್ಲಿ ಹೇಳಿಕೊಳ್ಳುವುದಿಲ್ಲ. ನಿಮ್ಮ ಪತಿಯು ಹೆಚ್ಚು ಸಂವಹನ ನಡೆಸಲು ಮುಂದಾಗುತ್ತಲಿದ್ದರೆ ಆಗ ನೀವು ಅವರು ತಪ್ಪತಸ್ಥ ಭಾವನೆ ಎದುರಿಸುವರು ಎಂದು ತಿಳಿಯಿರಿ.

ಸಂಬಂಧವನ್ನು ಕಟ್ಟಿಕೊಳ್ಳಲು ಆತ ಮಾತಿನ ಮೂಲಕ ಮರಳಿ ಪ್ರಯತ್ನ ಮಾಡುತ್ತಲಿರಬಹುದು ಎಂದು ತಿಳಿಯಬೇಕಾಗಿದೆ.

ನಿಮ್ಮ ನಂಬಿಕೆ ಪಡೆಯಲು ಪ್ರಯತ್ನ
ವೈವಾಹಿಕ ಜೀವನದಲ್ಲಿ ಮೋಸ ಮಾಡಿದರೆ, ಆಗ ಅಲ್ಲಿ ನಂಬಿಕೆ ಎನ್ನುವುದು ನಾಶವಾಗಿರುವುದ. ದರೆ ಪತಿಯು ತನ್ನ ಕೃತ್ಯದಿಂದ ಆಗಿರುವಂತಹ ಮೋಸವನ್ನು ತಿಳಿದುಕೊಂಡು ನಂಬಿಕೆ ಮರಳಿ ಪಡೆಯಲು ಪ್ರಯತ್ನಿಸಬಹುದು.

ನೀವು ಬಯಸುವ ಪ್ರತಿಯೊಂದನ್ನು ಮಾಡುವ ಮೂಲಕ ಅವರು ನಂಬಿಕೆ ಮರಳಿ ಪಡೆಯಲು ಪ್ರಯತ್ನಿಸಬಹುದು. ಇದು ಕೂಡ ಧನಾತ್ಮಕ ಸಂಕೇತವಾಗಿದೆ.

ಬೇಡಿಕೆಗಳಿಗೆ ಹೊಂದಿಕೊಳ್ಳುವುದು
ನಿಮ್ಮ ಬೇಡಿಕೆಗಳಿಗೆ ಹೊಂದಿಕೊಂಡು ಹೋಗುವ ಮೂಲಕ ಪತಿಯು ತನ್ನ ಪಶ್ಚಾತ್ತಾಪ ತೋರಿಸಬಹುದು.

ಇಲ್ಲಿ ನೀವು ಬಲಿಪಶು ಆಗಿರುವ ಕಾರಣದಿಂದಾಗಿ ನಿಮ್ಮ ಇಚ್ಛೆ ಬಂದಂತೆ ಇರಬಹುದು. ನಿಮ್ಮ ಎಲ್ಲಾ ಬೇಡಿಕೆಗಳಿಗೆ ಪತಿಯು ಹೊಂದಿಕೊಂಡು ನಡೆಯುತ್ತಿದ್ದರೆ, ಆಗ ಇದು ಖಂಡಿತವಾಗಿಯೂ ಪಶ್ಚಾತ್ತಾಪ ಎಂದು ತಿಳಿಯಬೇಕು.

ಬೇರೆ ವ್ಯಕ್ತಿಯ ಜತೆಗೆ ಸಂ’ಬಂಧ ಕಡಿದುಕೊಳ್ಳುವುದು
ಪತಿಯು ನಿಜವಾಗಿಯೂ ತನ್ನ ಕೃತ್ಯದ ಬಗ್ಗೆ ಪಶ್ಚಾತ್ತಾಪ ಪಡುತ್ತಲಿದ್ದರೆ ಆಗ ಖಂಡಿತವಾಗಿಯೂ ಆತ ಬೇರೆ ವ್ಯಕ್ತಿಯ ಜತೆಗಿನ ಎಲ್ಲಾ ಸಂ’ಬಂಧವನ್ನು ಮುರಿಯಬಹುದು.

ಆತನಿಗೆ ಆ ವ್ಯಕ್ತಿಯ ಬಗ್ಗೆ ಹೆಚ್ಚು ಆಸಕ್ತಿ ಇಲ್ಲದೆ ಇರಬಹುದು ಮತ್ತು ನಿಮ್ಮ ನಂಬಿಕೆ ಮರಳಿ ಪಡೆಯಲು ಪ್ರಯತ್ನಿಸಬಹುದು. ಆತ ಒಳ್ಳೆಯದಕ್ಕಾಗಿ ಬದಲಾಗಲು ಬಯಸಿದ್ದಾನೆ ಎನ್ನುವುದನ್ನು ಇದು ತೋರಿಸಿಕೊಡುವುದು.

ತಾನೇ ಜವಾಬ್ದಾರಿ
ಕೆಲವೊಂದು ಸಲ ಪುರುಷರು ತಮ್ಮ ಕೋಪ, ಸಿಡುಕನ್ನು ನಿಮ್ಮ ಮೇಲೆ ಹೇರಲು ಪ್ರಯತ್ನಿಸ ಬಹುದು. ಇದಕ್ಕಾಗಿ ಅವರು ನಿಮ್ಮನ್ನು ದೂಷಿಸಬಹುದು. ಇದರಿಂದಾಗಿ ಆತ ತನಗೆ ಮನಶಾಂತಿ ಮತ್ತು ನೆಮ್ಮದಿಗಾಗಿ ಬೇರೆ ಸಂಗ ಬಯಸಿದ್ದೇನೆ ಎಂದು ಹೇಳಬಹುದು.

ಆದರೆ ಮೋಸ ಮಾಡಿದ ಪತಿಯು ಎಲ್ಲದಕ್ಕೂ ತಾನೇ ಜವಾಬ್ದಾರಿ ಎಂದು ಹೇಳಿದರೆ, ಆಗ ಆತ ನಿಜವಾಗಿಯೂ ಬದಲಾಗಿದ್ದಾನೆ ಎಂದು ತಿಳಿಯಬೇಕು. ಇದೆಲ್ಲವೂ ಮೋಸ ಮಾಡಿದ ಪತಿಯು ಬದಲಾಗಿರುವಂತಹ ಕೆಲವೊಂದು ಲಕ್ಷಣಗಳು.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •