ಹೆಣ್ಣು ಮಕ್ಕಳು

ಒಂದೇ ಮನೆಯ ಮೂವರು ಹೆಣ್ಣು ಮಕ್ಕಳು ಮನೆಯಿಂದ ಒಟ್ಟಿಗೆ ಹೊರ ಹೋದವರು ಏನಾಗಿ ಹೋದರು ನೋಡಿ,ಮಕ್ಕಳಿದ್ದ ಸ್ಥಿತಿ ನೋಡಿ ಬೆಚ್ಚಿ ಬಿದ್ದ ಅಪ್ಪ ಅಮ್ಮ..

Home

ಹೆಣ್ಣಾಗಲಿ ಗಂಡಾಗಲಿ ಮಕ್ಕಳನ್ನು ಹೆತ್ತವರು ಕಣ್ಣಲ್ಲಿ‌ ಕಣ್ಣಿಟ್ಟು ಸಾಕುವರು.. ದೊಡ್ಡವರನ್ನಾಗಿಸುವರು.. ಎದೆಯೆತ್ತರಕ್ಕೆ ಬೆಳೆದ ನಂತರ ಮಕ್ಕಳು ನಮಗೆ ಆಶ್ರಯವಾಗುವರೆಂದು ಭರವಸೆ ಇಟ್ಟುಕೊಳ್ಳುವರು.. ಆದರೆ ಆಶ್ರಯವಾಗದಿದ್ದರೂ ಪರವಾಗಿಲ್ಲ ಆ ಮಕ್ಕಳು ನಮ್ಮ ಕಣ್ಣಮುಂದೆ ಸುಖವಾಗಿ ಬಾಳಿ ಬದುಕಲಿ ಎಂದಂತೂ ಸದಾ ಬೇಡುವುದಂತೂ ಸತ್ಯ.. ಆದರೆ ಅದೇ ಮಕ್ಕಳನ್ನು ಕನಸಿನಲ್ಲಿಯೂ ನೋಡಬಾರದ ಸ್ಥಿತಿಯಲ್ಲಿ ಕಂಡಾಗ ಆ ಹೆತ್ತವರ ಮನಸ್ಸು ಏನಾಗಬೇಡ.. ಅದೂ ಸಹ ಒಂದೇ ದಿನ ಒಂದೇ ಮನೆಯ ಮೂರು ಹೆಣ್ಣು ಮಕ್ಕಳು ಮೂವರು ಅಕ್ಕತಂಗಿಯರನ್ನು ಸಹ ಈ ರೀತಿಯಾಗಿ ಕಂಡು ಅವರ ಹೆತ್ತವರು ಬೆಚ್ಚಿಬಿದ್ದಿದ್ದಾರೆ..

ಹೌದು ಈ ಮೂವರು ಹೆಣ್ಣು ಮಕ್ಕಳ ಹೆಸರು ಸೌಮ್ಯ, ಪ್ರೇಮಿಕಾ ಹಾಗೂ ಅಕ್ಷಯ.. ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಮೊಯಿನಾಬಾದ್ ನ ರೆಡ್ಡಿಪಲ್ಲಿ ಗ್ರಾಮದ ಶಿಕ್ಷಕ ಲಕ್ಷ್ಮಣ್ ಎಂಬುವವರ ಇಬ್ಬರು ಮಕ್ಕಳು ಸೌಮ್ಯ ಹಾಗೂ ಪ್ರೇಮಿಕಾ.. ಮತ್ತು ಲಕ್ಷ್ಮಣ್ ಅವರ ಸಹೋದರ ಶ್ರೀನಿವಾಸ್ ಎಂಬುವವರ ಮಗಳು ಅಕ್ಷಯಾ.. ಈ ಮೂವರು ಸಹೋದರಿಯರು ಇಂದು ಮನೆಯಿಂದ ಒಟ್ಟಿಗೆ ಹೊರ ಹೋದರು.. ಆದರೆ ಮರಳಿ‌ ಮನೆಗೆ ಬಾರಲೇ ಇಲ್ಲ.. ಹೌದು ಇಂದು ಅಕ್ಷಯಾ ಸೌಮ್ಯಾ ಹಾಗೂ ಪ್ರೇಮಿಕಾ ಅವರ ಜೊತೆ ಹೊರಗೆ ಹೋಗುವ ವಿಚಾರವನ್ನು ಮನೆಯಲ್ಲಿ ತಿಳಿಸಿ ಮನೆಯಿಂದ ಹೊರ ನಡೆದರು..

ಆದರೆ ಕೆಲವೇ ಗಂಟೆಗಳಲ್ಲಿ ನಡೆಯಬಾರದ ಘಟನೆ ನಡೆದೇ ಹೋಯಿತು.. ಹೌದು ಅಕ್ಷಯಾ ತನ್ನ ಸ್ಕೂಟರ್ ನಲ್ಲಿ ಇಬ್ಬರು ಸಹೋದರಿಯರಾದ ಪ್ರೇಮಿಕಾ ಹಾಗೂ ಸೌಮ್ಯಾರನ್ನು ಕರೆದುಕೊಂಡು ಹೊರಗೆ ಹೋದರು.. ಇದೇ ಇವರ ಕೊನೆಯ ಪಯಣವಾಗಿ ಹೋಯಿತು.. ಹೌದು ಅಂಗಡಿಗೆ ತಮಗೆ ಬೇಕಾದ ವಸ್ತುಗಳನ್ನು ತರಲೆಂದು ಹೊರ ಹೋದರು.. ಅದೇ ಸಮಯದಲ್ಲಿ ಚೇವೆಲ್ಲಾ ಕಡೆಯಿಂದ ಬಂದ ಕಾರೊಂದು ಈ ಮೂವರು ಇದ್ದ ಸ್ಕೂಟರ್ ಗೆ ಡಿಕ್ಕಿಯಾಯಿತು.. ತಕ್ಷಣ ಕೆಳಗೆ ಬಿದ್ದ ಮೂವರಲ್ಲಿ ಸ್ಥಳದಲ್ಲಿಯೇ ಪ್ರೇಮಿಕಾ ಕೊನೆಯುಸಿರೆಳೆದುಬಿಟ್ಟಳು..

ಇತ್ತ ಅಕ್ಷಯಾ ಹಾಗೂ ಸೌಮ್ಯಾಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರೂ ಸಹ ದಾರಿಯ ಮಧ್ಯೆಯಲ್ಲಿಯೇ ಅಕ್ಷಯಾ ಕೂಡ ಜೀವ ಕಳೆದುಕೊಂಡು ಬಿಟ್ಟಳು.. ಇನ್ನು ಇತ್ತ ಸೌಮ್ಯಾ ಕೂಡ ಉಳಿಯುವ ಅವಕಾಶವಿಲ್ಲವೆಂದಿದ್ದಾರೆ ವೈದ್ಯರು.. ಒಂದೇ ದಿನ ಮೂವರು ಹೆಣ್ಣು ಮಕ್ಕಳನ್ನು ಇಂತಹ ಸ್ಥಿತಿಯಲ್ಲಿ ನೋಡಿ ಆ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿತ್ತು.. ಬೆಳಿಗ್ಗೆಯಷ್ಟೇ ಮನೆ ತುಂಬಾ ಓಡಾಡಿಕೊಂಡಿದ್ದ ಮಕ್ಕಳು ಮಧ್ಯಾಹ್ನದ ವೇಳೆಗೆ ಇಲ್ಲವೆಂದರೆ ನಿಜಕ್ಕೂ ಯಾವ ಶತ್ರುವಿಗೂ ಇಂತಹ ಪರಿಸ್ಥಿತಿ‌ ಬಾರದಿರಲಿ ಎನ್ನುವಂತಾಗುತ್ತದೆ.. ಇನ್ನು ಈ ಮೂರು ಹೆಣ್ಣು ಮಕ್ಕಳ ಪಾಲಿಗೆ ಜವರಾಯನಂತೆ ಕಾರ್ ನಲ್ಲಿ ಬಂದವ ಅದಾಗಲೇ ಗಂಟಲು‌ ಪೂರ್ತಿ ಮಾಡಿಕೊಂಡು ಕಾರ್ ಚಾಲನೆ ಮಾಡುತ್ತಿದ್ದ ಎಂದು ತಿಳಿದು ಬಂದಿದ್ದು ಸ್ಥಳದಿಂದ ಪರಾರಿಯಾಗಿದ್ದಾನೆ..

ಇನ್ನು ಈ ಬಗ್ಗೆ ಪ್ರಕರಣ ದಾಖಲು ಮಾಡಿಕೊಂಡಿರುವ ಸ್ಥಳೀಯ ಪೊಲೀಸ್ ಠಾಣೆಯ ಪೊಲೀಸರು ಆತನನ್ನು ಆದಷ್ಟು ಬೇಗ ವಶಕ್ಕೆ ಪಡೆಯಲಾಗುವುದು ಎಂದು ತಿಳಿಸಿದ್ದಾರೆ.. ಹೆಣ್ಣು ಮಕ್ಕಳನ್ನೇ ಗಂಡು ಮಕ್ಕಳಂತೆ ಬೆಳೆಸಿ ಮುಂದೆ ನಮ್ಮ ಕೊನೆಗಾಲದಲ್ಲಿ ಅವರ ಕೈಯಲ್ಲಿ ತಮ್ಮ ಅಂತ್ಯ ಕ್ರಿಯೆ ಮಾಡಿಸಿಕೊಳ್ಳಬೇಕು ಎಂದುಕೊಂಡಿದ್ದ ಆ ತಂದೆ ತಾಯಿಯರು ಜೀವ ಕಳೆದುಕೊಂಡ ಮಕ್ಕಳನ್ನು ನೋಡಿ ಸಂಕಟ ಪಡುತ್ತಿದ್ದ ರೀತಿ ಕಣ್ಣೀರು ತರುವಂತಿತ್ತು.. ಆ ಭಗವಂತನ ದಯೆಯಿಂದ ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿರುವ ಸೌಮ್ಯ ಎನ್ನುವ ಹೆಣ್ಣು ಮಗಳಾದರೂ ಗುಣಮುಖಳಾಗಿ ಆ ಮನೆಗೆ ಮರಳುವಂತಾಗಲಿ..

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...