ಸರ್ಕಾರಿ-ಕಾಲೆಜಿನಲ್ಲಿ-ಹಿಜಾಬ್ ಬ್ಯಾನ್

ಕರ್ನಾಟಕದ ಈ ಸರ್ಕಾರಿ ಕಾಲೆಜಿನಲ್ಲಿ ಹಿಜಾಬ್ ಬ್ಯಾನ್.! ಸ್ಥಳಕ್ಕೆ ಧಾವಿಸಿದ ಪೋಲಿಸರು ಏನಂದ್ರು ಗೊತ್ತಾ.?

Home

ಕರ್ನಾಟಕದ ಉಡುಪಿಯ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನ ಮುಸ್ಲಿಂ ವಿದ್ಯಾರ್ಥಿನಿಯರು ತರಗತಿಗಳಿಗೆ ಹಿಜಾಬ್ ಧರಿಸದಂತೆ ಕಾಲೇಜು ಪ್ರಾಂಶುಪಾಲರು ತಡೆದ ನಂತರ ಹೊಸ ನಿರ್ಬಂಧಗಳನ್ನು ಎದುರಿಸುತ್ತಿದ್ದಾರೆ. ಅಷ್ಟೇ ಅಲ್ಲ, ಉರ್ದು, ಅರೇಬಿಕ್, ಬೆರೆ ಭಾಷೆಗಳಲ್ಲಿ ಮಾತನಾಡದಂತೆ ತಡೆಯಲಾಗುತ್ತಿದೆ ಎಂದು ವಿದ್ಯಾರ್ಥಿನಿಯರು ದೂರಿದ್ದಾರೆ.

ಈ ಕುರಿತಾಗಿ ಮುಸ್ಲಿಂ ಹುಡುಗಿಯರು ಮೂರು ದಿನಗಳ ಕಾಲ ತರಗತಿಯ ಹೊರಗೆ ನಿಂತು ಪ್ರತಿಭಟನೆ ನಡೆಸಿದರು. ತಮ್ಮ ಪೋಷಕರು ಮಾತುಕತೆಗಾಗಿ ಪ್ರಾಂಶುಪಾಲ ರುದ್ರಗೌಡ ಅವರನ್ನು ಸಂಪರ್ಕಿಸಿದ್ದರು, ಆದರೆ ಅವರು ಸಮಸ್ಯೆಯ ಬಗ್ಗೆ ಮಾತನಾಡಲು ನಿರಾಕರಿಸಿದರು ಎಂದು ವಿದ್ಯಾರ್ಥಿನಿಯರು ಹೇಳಿದ್ದಾರೆ.

ಕಳೆದ ಮೂರು ದಿನಗಳಿಂದ ತರಗತಿಗೆ ಪ್ರವೇಶ ನೀಡುತ್ತಿಲ್ಲ ಎಂದು ಬಾಲಕಿಯರು ಆರೋಪಿಸಿದ್ದಾರೆ. ವಿದ್ಯಾರ್ಥಿಗಳು ಕಡಿಮೆ ಹಾಜರಾತಿಯನ್ನು ಎದುರಿಸಬೇಕಾಗಬಹುದು ಎಂಬ ಭಯವಿದೆ. ಒಬ್ಬ ವಿದ್ಯಾರ್ಥಿನಿ “ನಮ್ಮ ಪೋಷಕರು ಸಹ ಪ್ರಾಂಶುಪಾಲರನ್ನು ಮಾತನಾಡಿಸಲು ಬಂದರು, ಆದರೆ ಅವರು ಅವರೊಂದಿಗೆ ಮಾತನಾಡಲು ಸಿದ್ಧರಿಲ್ಲ” ಎಂದಿದ್ದಾರೆ.

ತರಗತಿಯೊಳಗೆ ಹಿಜಾಬ್ ಧರಿಸಬಾರದು ಎಂದು ಪ್ರಾಂಶುಪಾಲರ ಒತ್ತಡವಿದೆ. ಉರ್ದು ಮತ್ತು ಬೆರೆ ಭಾಷೆಗಳಲ್ಲಿ ಮಾತನಾಡಬಾರದು ಎಂದು ನಮಗೆ ನಿಷೇಧಿಸಲಾಗಿದೆ. ಮತ್ತೊಂದೆಡೆ, ಕಾಲೇಜು ಪ್ರಾಂಶುಪಾಲ ರುದ್ರಗೌಡ ಮಾತನಾಡಿ, ವಿದ್ಯಾರ್ಥಿನಿಯರು ಕಾಲೇಜು ಆವರಣದಲ್ಲಿ ಹಿಜಾಬ್ ಧರಿಸಬಹುದು, ಆದರೆ ಅವರು ಹಿಜಾಬ್‌ನಲ್ಲಿ ತರಗತಿಯ ಒಳಗೆ ಹೋಗುವಂತಿಲ್ಲ ಎಂದಿದ್ದಾರೆ.

ತರಗತಿಗಳಲ್ಲಿ ಏಕರೂಪತೆ ಕಾಪಾಡಲು ಈ ನಿಯಮ ಪಾಲಿಸಲಾಗುತ್ತಿದೆ ಎಂದರು. ಈ ಕುರಿತು ಪಾಲಕ ಶಿಕ್ಷಕರ ಸಭೆಯನ್ನೂ ನಡೆಸಿ ಚರ್ಚಿಸಲಾಗುವುದು ಎಂದು ಪ್ರಾಂಶುಪಾಲರು ತಿಳಿಸಿದರು. ಇದೇ ವೇಳೆ ಆರು ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಿ ತರಗತಿಗೆ ಹಾಜರಾಗಲು ಅವಕಾಶ ನೀಡದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಸ್‌ಡಿಪಿಐ ಉಡುಪಿ ಘಟಕದ ಅಧ್ಯಕ್ಷ ನಜೀರ್ ಅಹಮದ್ ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಧಾವಿಸಿದ ಪೋಲಿಸರು ಕಾಲೇಜು ನಿಯಮಾವಳಿಗಳನ್ನು ವಿದ್ಯಾರ್ಥಿಗಳು ಪಾಲಿಸತಕ್ಕದ್ದು ಎಂದು ಹೇಳಿದ್ದಾರೆ, ಆದರೆ ಈ ವಿಷಯದ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾದ ಚರ್ಚೆ ಹುಟ್ಟಿಕೊಂಡಿದ್ದು, ಈ ವಿಷಯ ಯಾವ ಹಂತಕ್ಕೆ ತಲುಪಲಿದೆ ಎಂದು ಕಾದು ನೋಡಬೇಕಷ್ಟೆ.
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...