ದಕ್ಷಿಣ ಭಾರತ ಚಿತ್ರರಂಗದಲ್ಲಿ ಹೆಸರು ಮಾಡಿದ್ದ ನಟಿ ವಿಜಯಲಕ್ಷ್ಮಿ ಈಗ ಸಂಕಷ್ಟದಲ್ಲಿದ್ದಾರೆ. ಕಳೆದ ವರ್ಷ ಸೂ-ಸೆಡ್ ಮಾಡಿಕೊಳ್ಳಲು ಯತ್ನ ಮಾಡಿ ಆಸ್ಪತ್ರೆ ಪಾಲಾಗಿದ್ದರು. ಆಗ ಕನ್ನಡ ನಟ ಕಿಚ್ಚ ಸುದೀಪ್ ಅವರು ವಿಜಯಲಕ್ಷ್ಮಿ ಅವರ ಸಹಾಯಕ್ಕೆ ನಿಂತಿದ್ದರು. ಇದೀಗ ವಿಜಯಲಕ್ಷ್ಮೀ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಹಾಗಾಗಿ ವಿಡಿಯೋ ಒಂದನ್ನು ಮಾಡಿ ಅದರಲ್ಲಿ ಕನ್ನಡಿಗರಲ್ಲಿ ಮತ್ತು ನಟ ಶಿವ ರಾಜ್ ಕುಮಾರ್ ಅವರಲ್ಲಿ ಸಹಾಯ ಕೋರಿದ್ದರು. ನಟಿ ವಿಜಯಲಕ್ಷ್ಮಿ ಮತ್ತು ಅವರ ಸಹೋದರಿ ಉಷಾ ದೇವಿ ಇಬ್ಬರು ಸಹ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡಿದವರು. ಇದೀಗ ಉಷಾ ದೇವಿ ಅವರ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಿದ್ದು ಅವರಿಗೆ ಚಿಕಿತ್ಸೆ ಕೊಡಿಸಲು ವಿಜಯಲಕ್ಷ್ಮಿ ಅವರ ಬಳಿ ಹಣ ಇಲ್ಲವಾಗಿದೆ.

ಅವರು ಚೆನ್ನೈನಲ್ಲಿದ್ದಾರೆ, ವಿಜಯಲಕ್ಷ್ಮಿ ಬೆಂಗಳೂರಿನಲ್ಲಿ ಹುಟ್ಟಿ ಬೆಳೆದವರು ಎನ್ನುವ ಕಾರಣಕ್ಕೆ ತಮಿಳು ನಾಡಿನ ಜನ ಅವರಿಗೆ ಸಹಾಯ ಮಾಡುತ್ತಿಲ್ಲ ಎಂದು ನೋವನ್ನು ಹೇಳಿಕೊಂಡಿದ್ದಾರೆ ನಟಿ ವಿಜಯಲಕ್ಷ್ಮಿ. ಹಾಗಾಗಿ, ಕನ್ನಡಿಗರು ತಮಗೆ ಸಹಾಯ ಮಾಡಬೇಕು, ತಮ್ಮ ಜೊತೆಯಲ್ಲಿ ನಟಿಸಿದ ಶಿವ ರಾಜ್ ಕುಮಾರ್ ಅವರು ಸಹಾಯ ಮಾಡಬೇಕು, ಈ ವಿಡಿಯೋ ಶಿವ ರಾಜ್ ಕುಮಾರ್ ಅವರನ್ನು ತಲುಪುವ ಹಾಗೆ ಎಲ್ಲರೂ ಸಹಾಯ ಮಾಡಿ, ಹಣವಿಲ್ಲದೆ ಸಹೋದರಿಗೆ ಚಿಕಿತ್ಸೆ ಕೊಡಿಸಲು ಬಹಳ ಕಷ್ಟ ಆಗಿದೆ ಎಂದು ನಟಿ ವಿಜಯಲಕ್ಷ್ಮಿ ವಿಡಿಯೋದಲ್ಲಿ ಹೇಳಿಕೊಂಡಿದ್ದರು.ಇದೀಗ ಇವರ ಕಷ್ಟಕ್ಕೆ ಜೊತೆಯಾಗಿ ನಮ್ಮ ಸ್ಯಾಂಡಲ್ ವುಡ್ ನಿಂತಿದೆ. ಶಿವ ರಾಜ್ ಕುಮಾರ್ ಅವರು ಮಾತ್ರವಲ್ಲದೆ ನಟ ದರ್ಶನ್ ಮತ್ತು ನಟ ಸುದೀಪ್ ಅವರು ಸಹ ಬಂದಿದ್ದಾರೆ. ಸ್ಯಾಂಡಲ್ ವುಡ್ ನ ಮೂವರು ಹೆಸರಾಂತ ನಟರಾದ ಹ್ಯಾಟ್ರಿಕ್ ಹೀರೋ ಶಿವ ರಾಜ್ ಕುಮಾರ್, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ವಿಜಯಲಕ್ಷ್ಮಿ ಅವರ ಸಹಾಯಕ್ಕೆ ಬಂದಿದ್ದು, ತಮ್ಮಿಂದ ಆದಷ್ಟು ಹಣವನ್ನು ವಿಜಯಲಕ್ಷ್ಮಿ ಅವರಿಗೆ ನೀಡಿ ಸಹಾಯ ಮಾಡಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ. ಆದರೆ ಈ ಬಗ್ಗೆ ಪ್ರಚಾರ ಆಗುವುದು ಬೇಡ ಎಂದು ನಮ್ಮ ನಟರು ಸೈಲೆಂಟ್ ಆಗಿದ್ದಾರೆ ಎನ್ನಲಾಗುತ್ತಿದೆ..ಇದರ ಜೊತೆಗೆ ನಮ್ಮ ಲೀಲಾವತಿ ಹಾಗು ವಿನೋದ್ ರಾಜ್ ಅವರು ಕೂಡ ವಿಜಯಲಕ್ಷ್ಮಿ ಅವರಿಗೆ ಸಹಾಯ ಮಾಡಿ ಸುಮಾರು ೫೦೦೦ ರೂಪಾಯಿ ಹಣವನ್ನು ನೀಡಿದ್ದಾರೆ ಎಂದು ಖುದ್ದು ವಿಜಯಲಕ್ಷ್ಮಿ ಅವರೇ ಲೈವ್ ಬಂದು ಹೇಳಿದ್ದಾರೆ. ಈ ಸುದ್ದಿ ಇಷ್ಟ ವಾಗಿದ್ದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯ ಗಳನ್ನೂ ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳಿಸಿರಿ.
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •