ಈ ಆರು ಲಕ್ಷಣʼ ಹೊಂದಿರೋರನ್ನ ಮದುವೆಯಾಗ್ಬೇಡಿ : ಜೀವನ ನರಕವಾಗ್ಬೋದು ಎಚ್ಚರ..!

Home

ಮಿಸ್ ಪರ್ಫೆಕ್ಟ್ ಅಥವಾ ಮಿಸ್ಟರ್ ಪರ್ಫೆಕ್ಟ್ ಅಂತಾ ಕಂಡು ಹಿಡಿಯುವುದು ತುಂಬಾನೇ ಕಷ್ಟ. ಯಾಕೆಂದ್ರೆ, ಬಹುತೇಕ ವ್ಯಕ್ತಿಗಳಿಗೆ ಏನಾದ್ರೂ ಒಂದು ಸಣ್ಣ ದೋಷವಿರುತ್ತೆ. ಪರ್ಫೆಕ್ಟ್ ಸಿಗದಿದ್ರು ಪರವಾಗಿಲ್ಲ. ಆದ್ರೆ, ಈ ಆರು ಲಕ್ಷಣಗಳನ್ನ ಹೊಂದಿರುವರನ್ನ ಮಾತ್ರ ಸಂಗಾತಿಯನ್ನಾಗಿ ಮಾಡಿಕೊಳ್ಳಬೇಡಿ ಎಂದು ಮನಶ್ಶಾಸ್ತ್ರಜ್ಞರು ಹೇಳುತ್ತಾರೆ. ಯಾಕಂದ್ರೆ, ಅವರೊಂದಿಗಿನ ಜೀವನವು ಕಾಲಾನಂತರದಲ್ಲಿ ಕಷ್ಟಕರವಾಗುತ್ತದೆ ಎನ್ನುತ್ತಾರೆ.

1. ಪ್ರಾಮಿಸ್ ಬ್ರೇಕರ್ : ಒಂದಲ್ಲ, ಎರಡು ಬಾರಿ ಭರವಸೆಗಳನ್ನ ಉಳಿಸಿಕೊಳ್ಳದಿದ್ರೆ, ಪರವಾಗಿಲ್ಲ, ಕ್ಷಮಿಸಿ. ಆದ್ರೆ, ಪದೇ ಪದೇ ಇದೇ ತಪ್ಪು ಮಾಡ್ತಿದ್ರೆ, ಅವರಿಗೆ ಕೊಟ್ಟ ಮಾತಿಗೆ ಬೆಲೆ ಗೊತ್ತಿಲ್ಲ ಅಂತಾ ಅರ್ಥ. ಪ್ರಾಮಿಸ್ ಬೇಕರ್ಸ್ ಮನೆಯಲ್ಲಿ ಬಹಳಷ್ಟು ತೊಂದರೆಗಳನ್ನ ಸೃಷ್ಟಿಸಬೋದು. ಯಾಕಂದ್ರೆ, ಅವ್ರಿಗೆ ಭರವಸೆ ನೀಡುವುದು ಸಣ್ಣ ವಿಷಯವಾಗಿರುತ್ತೆ.

ಮದುವೆಯ ದಿನ ಹೆಣ್ಮಕ್ಕಳು ಸುಂದರವಾಗಿ ಕಾಣಬೇಕಾದರೆ ಈ ರೀತಿ ಮಾಡಿ..! | Btv News Live

2. ಸರ್ವಾಧಿಕಾರಿ ಲಕ್ಷಣ : ಇದನ್ನೇ ತಿನ್ನಿ, ಈ ಉಡುಗೆಯನ್ನೇ ಧರಿಸಿ, ಸೊಂಟವನ್ನ ಹೀಗೆ ಇಟ್ಟು, ಇಲ್ಲಿ ನಿಂತುಕೊಳ್ಳಿ.. ಈ ರೀತಿ ಪ್ರತಿ ವಿಷಯದಲ್ಲೂ ತನ್ನ ನೆರೆಹೊರೆಯವರನ್ನ ನಿಯಂತ್ರಿಸುವ ಗುಣಲಕ್ಷಣಗಳನ್ನ ಹೊಂದಿರುವ ವ್ಯಕ್ತಿ ಕೂಡ ಉತ್ತಮ ಸಂಗಾತಿಯಾಗಲು ಸಾಧ್ಯವಿಲ್ಲ. ಅವರು ಹೆಚ್ಚು ಸರ್ವಾಧಿಕಾರಿ ಲಕ್ಷಣಗಳನ್ನ ಹೊಂದಿದ್ದು, ತಮ್ಮ ಸಂಗಾತಿಯನ್ನ ಪ್ರೀತಿಸುವುದಕ್ಕಿಂತ ತನ್ನ ನಿಯಂತ್ರಣದಲ್ಲಿಟ್ಟುಕೊಳ್ಳುವುದು ಮುಖ್ಯ ಅಂತಾ ಭಾವಿಸಿರ್ತಾರೆ.

3. ಗೌರವ ಮತ್ತು ಅದ್ಯತೆ ನೀಡದ ವ್ಯಕ್ತಿ : ಗೌರವ ಮತ್ತು ಅದ್ಯತೆ ನೀಡುವುದು ಪರಸ್ಪರ ಸಂಗಾತಿಗಳ ಕರ್ತವ್ಯ ಆಗಿರುತ್ತೆ. ಮದುವೆಯಾಗಲು ಬಯಸುವ ಇಬ್ಬರ ನಡುವೆ ಇದು ಸಮಾನವಾಗಿರಬೇಕು. ತೆಗೆದುಕೊಳ್ಳುವ ಆದ್ರೆ, ಕೊಡುವ ಅಭ್ಯಾಸವಿಲ್ಲದ ಯಾರೊಂದಿಗಾದರೂ ಸುಖವಾಗಿ ಇರಲು ಸಾಧ್ಯವಿಲ್ಲ.

4. ಪದೇ ಪದೇ ಅದೇ ತಪ್ಪು ಮಾಡುವುದು : ಅದೇ ತಪ್ಪನ್ನ ಪದೇ ಪದೇ ಪುನರಾವರ್ತಿಸುವುದು, ಕ್ಷಮೆಯಾಚಿಸಿ ತಪ್ಪಿಸಿಕೊಳ್ಳುವುದು. ಈ ಅಭ್ಯಾಸ ಹೊಂದಿರುವ ಜನರು ಸಹ ಉತ್ತಮ ಜೀವನ ಪಾಲುದಾರರಾಗಲು ಸಾಧ್ಯವಿಲ್ಲ. ಅವರಿಗೆ ಕ್ಷಮೆಯ ಬೆಲೆಯೂ ತಿಳಿದಿರೋಲ್ಲ.

ಮದುವೆ ಯೋಗ ಕೂಡಿ ಬರ್ತಾ ಇಲ್ಲ ಅಂದ್ರೆ ಹೀಗೆ ಮಾಡಿರಿ - Karnataka No 1 Samachara

5. ಅತಿಯಾದ ಅಹಂಕಾರ : ಪ್ರತಿಯೊಬ್ಬ ಮಾನವನಲ್ಲೂ ಅಪಾರವಾದ ಅಹಂಕಾರ ಇರುತ್ತೆ. ಆದ್ರೆ, ಅದು ಗಡಿ ದಾಟಿದ್ರೆ, ಬಾಂಧವ್ಯ ಉಳಿಯುವುದಿಲ್ಲ. ನಾನು, ನನ್ನದು, ನಾನು ಹೇಳುವುದನ್ನೇ ಕೇಳು, ಮಾಡು ಅನ್ನೋ ನಡವಳಿಕೆ ಮತ್ತು ದುರಹಂಕಾರವನ್ನ ತೋರಿಸುವವರಿಂದ ದೂರವಿರುವುದು ಉತ್ತಮ.

6. ಸುಳ್ಳುಕೋರರು : ನಿಮ್ಮ ಜೀವನದಲ್ಲಿ ಸುಳ್ಳುಗಾರನನ್ನ ಎಂದಿಗೂ ಆಹ್ವಾನಿಸಬೇಡಿ. ಇದು ಮನೋರೋಗದ ಲಕ್ಷಣವೂ ಹೌದು. ಪ್ರತಿಯೊಂದು ಸಣ್ಣ ವಿಷಯದ ಬಗ್ಗೆ ಸುಳ್ಳು ಹೇಳುವ ವ್ಯಕ್ತಿಯು ತನ್ನ ಜೀವನದುದ್ದಕ್ಕೂ ನಿಮ್ಮೊಂದಿಗೆ ಎಷ್ಟು ಆತ್ಮವಿಶ್ವಾಸವನ್ನು ಹೊಂದಬಹುದು ಅನ್ನೋದರ ಬಗ್ಗೆ ಯೋಚಿಸಿ.
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...