ನಿಮಗೆ ಬದುಕಿನಲ್ಲಿ ಸ್ಪೂರ್ತಿ ತುಂಬುವ ಕಥೆಯೊಂದು ಇಲ್ಲಿದೆ. ನಾವು ಆರೋಗ್ಯವಾಗಿರಬೇಕೆಂದರೆ ನಮ್ಮ ದೇಹದ ಎಲ್ಲಾ ಅಂಗಗಳು ಸರಿಯಾಗಿ ಕಾರ್ಯನಿರ್ವಹಿಸಬೇಕು. ವಿಶೇಷವಾಗಿ ಹೃದಯ ಮತ್ತು ಹೃದಯದ ಬಡಿತ. ಆದರೆ ನಿಮಗೆ ಹೃದಯವಿಲ್ಲದೆ ಬದುಕಬಹುದು ಎಂದು ಅನಿಸಿದೆಯಾ?, ಇದೆಂಥ ಹುಚ್ಚು ಪ್ರಶ್ನೆ ಎಂದು ನಿಮಗನಿಸುತ್ತದೆ ಅಲ್ಲವೇ, ಆದರೆ ನಾವಿಂದು ಹೇಳುತ್ತಿರುವ ಮಹಿಳೆಯ ಕಥೆ ಕೇಳಿದರೆ ನಿಮಗೆ ನಂಬುವುದಕ್ಕೆ ಆಗುವುದಿಲ್ಲ. ಹೌದು, ಓರ್ವ ಮಹಿಳೆ ಹೃದಯವಿಲ್ಲದೆ ಬದುಕುತ್ತಿದ್ದಾರೆ. ಇದನ್ನು ಕೇಳಿ ನಿಮಗೆ ಆಶ್ಚರ್ಯವಾಗುತ್ತಿದೆ ಅಲ್ಲವೇ. ಆದರೆ ಇದೆಲ್ಲಾ ಹೇಗೆ ಸಾಧ್ಯ ಎಂದು ನಾವು ಹೇಳುತ್ತೇವೆ ಕೇಳಿ. ಆ ಮಹಿಳೆಯ ಹೆಸರು ಸಾಲ್ವಾ ಹುಸೇನ್ . ಆಕೆಗೆ ಕೃತಕ ಹೃದಯವನ್ನು ಒಂದು ಬ್ಯಾಗ್’ನಲ್ಲಿ ಇಡಲಾಗಿದೆ.

ಬ್ರಿಟಿಷ್ ಪತ್ರಿಕೆಯೊಂದರ ಪ್ರಕಾರ, 39 ವರ್ಷದ ಸಾಲ್ವಾ ಹುಸೇನ್ ಯುಕೆ ಯಲ್ಲಿ ಈ ರೀತಿ ವಾಸಿಸುವ ಏಕೈಕ ವ್ಯಕ್ತಿ . ಸಾಲ್ವಾ ಹುಸೇನ್ ವಿವಾಹಿತರಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಆಕೆ ಯಾವಾಗಲೂ ಸಾಮಾನ್ಯರಂತೆ ಜೀವನವನ್ನು ನಡೆಸಲು ಪ್ರಯತ್ನಿಸುತ್ತಾಳೆ. ಆದರೆ ಆಕೆಗೆ  ಒಂದು ಸವಾಲು ಇದೆ. ಅದೇನೆಂದರೆ ಅವರು ಹೃದಯವನ್ನು ಇಟ್ಟುಕೊಂಡಿರುವ ಬ್ಯಾಗ್ ಸದಾ ಅವರೊಂದಿಗೆ ಇರಬೇಕು. ಅದರಲ್ಲಿ ಪವರ್ ಪ್ಲಾಸ್ಟಿಕ್ ಕೋಣೆಗಳಿವೆ.

 

 

 

heart-in-bag

ಸಾಲ್ವಾ ಪಂಪ್, ಮೋಟಾರ್ ಮತ್ತು ಬ್ಯಾಟರಿಗಳು ಈ ಮೂರನ್ನು ತನ್ನ ಬ್ಯಾಗ್’ನಲ್ಲಿ ಸದಾ ಕೊಂಡೊಯ್ಯಬೇಕು. ಹೊಸ ಬ್ಯಾಟರಿಯನ್ನು ಅಳವಡಿಸಲು ಕೇವಲ 90 ಸೆಕೆಂಡುಗಳು ಇರುವುದರಿಂದ ಬ್ಯಾಟರಿ ಇದ್ದಕ್ಕಿದ್ದಂತೆ ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ ಎಂಬ ಭಯದಿಂದ ಸಾಲ್ವಾ ಹುಸೇನ್ ಅವರ ಪತಿ ಅಲ್ ಯಾವಾಗಲೂ ಅವರ ಜೊತೆ ಇರುತ್ತಾರೆ. ಸಾಲ್ವಾ ಇಂತಹ ದೊಡ್ಡ ಸಮಸ್ಯೆಯಿದ್ದರೂ ಸಹ ಯಾವಾಗಲೂ ಸಂತೋಷದಿಂದ  ನಗು ನಗುತ್ತಾ ಇರುತ್ತಾರೆ.

 

ನಾವೆಲ್ಲರೂ ನಮ್ಮ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತೇವೆ. ಕೊನೆಗೆ ಅದನ್ನು ಬಗೆಹರಿಸಲು ಸಾಧ್ಯವಿಲ್ಲ ಎನ್ನುವ ಮಟ್ಟಕ್ಕೆ ಹೋದಾಗ ದುಃಖಿತರಾಗುತ್ತೇವೆ. ಅನೇಕ ಬಾರಿ ಜನರು ತಮ್ಮ ಜೀವನವನ್ನು ಚಿಕ್ಕ ಚಿಕ್ಕ ವಿಚಾರಕ್ಕೆ ಕೊನೆಗೊಳಿಸುತ್ತಾರೆ. ಆದರೆ ಈ ರೀತಿಯ ಜನರು ಸಾಲ್ವಾ ಹುಸೇನ್ ಅವರಿಂದ ಸ್ಫೂರ್ತಿ ಪಡೆಯಬೇಕು. ಈ ಕಥೆಯನ್ನು ಓದುವ ಮೂಲಕ ನಿಮಗೂ ಸಾಧನೆ ಮಾಡುವ ಮನಸ್ಸು, ಕಠಿಣ ಪರಿಸ್ಥಿತಿಯಲ್ಲೂ ಬದುಕುವ ಛಲ ಬಂದರೆ ನಮ್ಮ ಜೀವನವೂ ಚೆನ್ನಾಗಿರುತ್ತದೆ ಎಂದು ಹೇಳಬಹುದು ಅಲ್ಲವೇ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •