ಕನ್ನಡದ ಯುವ ನಟ ಯುವರತ್ನ ಪುನೀತ್ ರಾಜಕುಮಾರ್ ಅವರು ಆಕಸ್ಮಿಕ ಕಾರ್ಡಿಯಾಕ್ ಅರೆಸ್ಟ್ ನಿಂದ ಇಹಲೋಕವನ್ನು ತ್ಯಜಿಸಿ ಸ್ಯಾಂಡಲ್ವುಡ್ ನ್ನೇ ಅನಾಥ ಮಾಡಿದರು.

ಅವರ ಸಾವು ಕಾರ್ಡಿಯಾಕ್ ಅರೆಸ್ಟ್ ನಿಂದ ಸಂಭವಿಸಿತು ಎಂಬ ಮಾತನ್ನು ಡಾಕ್ಟರುಗಳು ಹೇಳುತ್ತಿದ್ದಾರೆ. ಕಾರ್ಡಿಯಾಕ್ ಅರೆಸ್ಟ್ ಮತ್ತು ಹಾರ್ಟ್ ಅಟ್ಯಾಕ್ ಎರಡು ಒಂದೇನಾ ಅಥವಾ ಇವುಗಳಲ್ಲಿ ವ್ಯತ್ಯಾಸವಿದೆಯೇ? ಎಂಬುದರ ಬಗ್ಗೆ ಈ ಲೇಖನದಲ್ಲಿ ನಾವು ತಿಳಿದುಕೊಳ್ಳುವ.

ಜನರು ಸಾಮಾನ್ಯವಾಗಿ ಎರಡು ಪದಗಳನ್ನು ಬದಲಿಯಾಗಿ ಅಥವಾ ಸಮಾನಾರ್ಥಕವೆಂದು ತಿಳಿದು ಉಪಯೋಗಿಸುತ್ತಾರೆ. ಆದರೆ ಇವೆರಡು ಸಮನಾದ ಅರ್ಥ ನೀಡುವ ಪದಗಳಲ್ಲ. ಹಾರ್ಟ್ ಅಟ್ಯಾಕ್ ಮತ್ತು ಕಾರ್ಡಿಯಾಕ್ ಅರೆಸ್ಟ್ ಈ ಶಬ್ದಗಳಲ್ಲಿ ವ್ಯತ್ಯಾಸವನ್ನು ತಿಳಿದುಕೊಳ್ಳುವ ಮೊದಲು ಎರಡು ಪ್ರಕ್ರಿಯೆಗಳಲ್ಲಿ ಏನಾಗುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಅವಶ್ಯಕವಾಗಿದೆ. ಹಾರ್ಟ್ ಅಟ್ಯಾಕ್ ನಲ್ಲಿ ಹೃದಯಕ್ಕೆ ರಕ್ತಪರಿಚಲನೆಯ ಕ್ರಿಯೆಯು ಸರಿಯಾಗಿ ಆಗುವುದಿಲ್ಲ. ಕಾರ್ಡಿಯಾಕ್ ಅರೆಸ್ಟ್ ನಲ್ಲಿ ಹೃದಯ ಆಕಸ್ಮಿಕವಾಗಿ ಕೆಲಸ ಮಾಡುವದನ್ನು ನಿಲ್ಲಿಸಿಬಿಡುತ್ತದೆ.

Sudden Cardiac Arrest 101: Symptoms, Causes & What To Do - Homage

ಸಾಮಾನ್ಯವಾಗಿ ಹೇಳುವುದಾದರೆ ಹಾರ್ಟ್ ಅಟ್ಯಾಕ್ ನಲ್ಲಿ ರಕ್ತಪರಿಚಲನೆಯ ಸಮಸ್ಯೆ ಉಂಟಾಗುತ್ತದೆ. ಆದರೆ ಕಾರ್ಡಿಯಾಕ್ ಅರೆಸ್ಟ್ ನಲ್ಲಿ ಹೃದಯ ಬಡಿತವು ಒಮ್ಮಿಂದೊಮ್ಮೆಲೆ ನಿಂತುಬಿಡುತ್ತದೆ. ಇಂದಿನ ಈ ಲೇಖನದಲ್ಲಿ ಎರಡರಲ್ಲಿಯ ವ್ಯತ್ಯಾಸದ ಬಗ್ಗೆ ವಿವರವಾಗಿ ನೋಡುವ.

ಏನಿದು ಕಾರ್ಡಿಯಾಕ್ ಅರೆಸ್ಟ್?

ಕಾರ್ಡಿಯಾಕ್ ಅರೆಸ್ಟ್ ಇದು ಹಾರ್ಟ್ ಅಟ್ಯಾಕ್ ಗಿಂತ ಭಿನ್ನವಾಗಿದೆ. ಕಾರ್ಡಿಯಾಕ್ ಅರೆಸ್ಟ್ ನಲ್ಲಿ ಹೃದಯ ಬಡಿತ ನಿಂತು ಬಿಡುತ್ತದೆ. ಹಾರ್ಟ್ ಅಟ್ಯಾಕ್ ನಲ್ಲಿ ಹೃದಯಕ್ಕೆ ರಕ್ತಪರಿಚಲನೆಯ ಕ್ರಿಯೆ ಅಡ್ಡಿಯಾಗುತ್ತಿದ್ದರೂ ಹೃದಯವು ತನ್ನ ಬಡಿತವನ್ನು (ಆದಷ್ಟು ಬೇಗ) ನಿಲ್ಲಿಸುವುದಿಲ್ಲ.

ಹಾರ್ಟ್ ಅಟ್ಯಾಕ್ ಎಂದರೇನು?

ಹಾರ್ಟ್ ಅಟ್ಯಾಕ್ ಇದು ಹೃದಯಕ್ಕೆ ಸಂಬಂಧಿಸಿದ ಒಂದು ರೋಗ ಅಥವಾ ಕಾಯಿಲೆಯಾಗಿದೆ. ಈ ಕಾಯಿಲೆಯಲ್ಲಿ ಬ್ಲಾಕೆಜ್ ನಿಂದಾಗಿ ಹೃದಯಕ್ಕೆ ರಕ್ತ ಪರಿಚಲನೆ ಸರಿಯಾಗಿ ಆಗುವುದಿಲ್ಲ. ಅಪಧಮನಿಗಳಲ್ಲಿ ಬೇಕಾಗುವಷ್ಟು ರಕ್ತ ಸಿಗದ ಕಾರಣ ಹೃದಯದ ಕೆಲವು ಭಾಗಗಳು ತಮ್ಮ ಕೆಲಸವನ್ನು ನಿಲ್ಲಿಸಲು ಯತ್ನ ಮಾಡುತ್ತವೆ. ಇದರಿಂದ ಹೃದಯದ ಕಾಯಿಲೆ ಉತ್ಪನ್ನವಾಗಲು ಶುರುವಾಗುತ್ತದೆ. ಹಾರ್ಟ್ ಅಟ್ಯಾಕ್ ಇದರಿಂದಲೂ ಮನುಷ್ಯ ಕೆಲವೊಮ್ಮೆ ತನ್ನ ಜೀವ ಕಳೆದುಕೊಳ್ಳುತ್ತಾನೆ.

COVID-19 tied to spikes in out-of-hospital cardiac arrests | CIDRAP

ಕಾರ್ಡಿಯಾಕ್ ಅರೆಸ್ಟ್ ಮತ್ತು ಹಾರ್ಟ್ ಅಟ್ಯಾಕ್ ಏನದು?

ಕಾರ್ಡಿಯಾಕ್ ಅರೆಸ್ಟ್ ನಲ್ಲಿ ಹೃದಯದ ದೊಡ್ಡ ಮತ್ತು ಮಹತ್ವದ ಭಾಗಕ್ಕೆ ಹಾನಿಯಾಗುತ್ತದೆ. ಹಾರ್ಟ್ ಅಟ್ಯಾಕ್ ನಲ್ಲಿ ಹೃದಯದ ಸ್ನಾಯುಗಳ ಭಾಗಕ್ಕೆ ರಕ್ತಪೂರೈಕೆ ಕಡಿಮೆಯಾಗುತ್ತದೆ. ಇವೆರಡು ಸಂಭವಿಸುವ ಮುಖ್ಯ ಕಾರಣಗಳನ್ನು ತಿಳಿದುಕೊಳ್ಳಿ.

ಕಾರ್ಡಿಯಾಕ್ ಅರೆಸ್ಟ್ ಆಗುವ ಕಾರಣಗಳು….

ಅಪಧಮನಿಯ ಕಾಯಿಲೆ
ಹೃದಯ ರಚನೆಯಲ್ಲಿಯ ಆಗುವ ಬದಲಾವಣೆ
ವೆಂಟ್ರಿಕ್ಯುಲರ್ ಟೆಚಿಕಾರ್ಡಿಯಾ
ವೆಂಟ್ರಿಕ್ಯುಲರ್ ಫೆಬ್ರಿಲೇಶನ್ ಅಥವಾ ಅಸಮಾನ್ಯ ಹೃದಯಬಡಿತ. ಇಲ್ಲಿ ಹೃದಯದ ಕೆಳಗಿನ ಭಾಗದಲ್ಲಿ ಹೃದಯದಲ್ಲಿ ಅನಿಯಮಿತವಾಗಿ ಬಡಿತವಾಗುವದು. ಉಸಿರಾಟದ ತೊಂದರೆ, ವಿದ್ಯುತ್ ಶಾಕ್ ತರ ಅನುಭವ, ರಕ್ತದೊತ್ತಡದಲ್ಲಿ ಆಕಸ್ಮಿಕ ಕುಸಿತ, ಅತಿಯಾದ ಮದ್ಯಸೇವನೆ, ಔಷಧಿಗಳ ಅಡ್ಡ ಪರಿಣಾಮ.

ಹಾರ್ಟ್ ಅಟ್ಯಾಕ್ ಕ್ಕೆ ಕಾರಣಗಳು…

ಹೈ ಬ್ಲುಡ್ ಪ್ರೆಷರ್, ದೇಹದಲ್ಲಿ ಸಕ್ಕರೆ ಅಂಶದ ಪ್ರಮಾಣ ಹೆಚ್ಚಾಗುವುದು, ಕೊಲೆಸ್ಟ್ರಾಲ್ ಲೆವೆಲ್ ಹೆಚ್ಚಾಗುವುದು, ಅತಿಯಾದ ಒತ್ತಡ ಅಥವಾ ಸ್ಟ್ರೆಸ್ ತೆಗೆದುಕೊಳ್ಳುವುದು, ಸ್ಥೂಲಕಾಯ, ಅನುವಂಶಿಕತೆ.

ಕಾರ್ಡಿಯಾಕ್ ಅರೆಸ್ಟ್ ಮತ್ತು ಹಾರ್ಟ್ ಅಟ್ಯಾಕ್ ಲಕ್ಷಣಗಳೇನು? ಇವೆರಡು ಭಿನ್ನ ಭಿನ್ನವಾಗಿರುತ್ತವೆ.

Many men with sudden cardiac arrest had early warnings

ಕಾರ್ಡಿಯಾಕ್ ಅರೆಸ್ಟ್ ಲಕ್ಷಣಗಳು…

ಇದು ಆಕಸ್ಮಿಕವಾಗಿ ಘಟಿಸುವುದು.
ಉಸಿರಾಟದ ತೊಂದರೆ ಅಥವಾ ಉಸಿರಾಟ ನಿಂತು ಬಿಡುವುದು.
ಕಾರ್ಡಿಯಾಕ್ ಅರೆಸ್ಟ್ ನಿಂದ ಹೃದಯ ಬಡಿತ ಒಮ್ಮಿಂದೊಮ್ಮೆಲೆ ನಿಂತು ಬಿಡುವುದು. ಹೀಗಾಗಿ ವ್ಯಕ್ತಿ ಸಾವಿಗೀಡಾಗುತ್ತಾನೆ.
ವೀಕ್ ನೆಸ್ ಮತ್ತು ತಲೆಸುತ್ತು ಬರುವುದು.

ಹಾರ್ಟ್ ಅಟ್ಯಾಕ್ ಲಕ್ಷಣಗಳು..

-ಹಾರ್ಟ್ ಅಟ್ಯಾಕ್ ನಲ್ಲಿ ಮುಖ್ಯವಾಗಿ ಎದೆನೋವು ಕಂಡುಬರುತ್ತದೆ.
-ಉಸಿರಾಟದಲ್ಲಿ ತೊಂದರೆ.
-ಕೆಮ್ಮು.
-ಹೆದರಿಕೆ ಉಂಟಾಗುವುದು.
-ಚಿಂತೆ ಅಥವಾ ಟೆನ್ಶನ್ ರೀತಿಯ ಅನುಭವ.
-ತಲೆತಿರುಗುವಿಕೆ.
-ಬೆವರು ಬಿಡುವುದು.
-ದುರ್ಬಲತೆ.

Sudden Cardiac Arrest: How To Recognize It And Respond | Henry Ford LiveWell

ಕಾರ್ಡಿಯಾಕ್ ಅರೆಸ್ಟ್ ಮತ್ತು ಹಾರ್ಟ್ ಅಟ್ಯಾಕ್ ನಿಂದ ಹೇಗೆ ರಕ್ಷಿಸಿಕೊಳ್ಳಬೇಕು? ಇವೆರಡರಿಂದ ರಕ್ಷಿಸಿಕೊಳ್ಳಲು ಕೆಳಗಿನ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು.ನಮ್ಮ ಲೈಫ್ ಸ್ಟೈಲ್ ನಲ್ಲಿ ಬದಲಾವಣೆ ಮಾಡಿಕೊಳ್ಳಬೇಕು.
-ಬೇಗ ಮಲಗಿ ಬೇಗ ಏಳುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು.
-ವಯಸ್ಸಿಗೆ ಹೊಂದುವ ಮತ್ತು ಅನುಗುಣವಾಗುವ ವ್ಯಾಯಾಮ ಮತ್ತು ಯೋಗವನ್ನು ಮಾಡಬೇಕು.
-ಆಹಾರದಲ್ಲಿ ಹಣ್ಣುಗಳ ಜೊತೆಗೆ ಹಸಿರು ತರಕಾರಿಗಳನ್ನು ಕಡ್ಡಾಯವಾಗಿ ಉಪಯೋಗಿಸಬೇಕು.
-ಹಾಗೆಯೇ ಆಹಾರದಲ್ಲಿ ಉಪ್ಪನ್ನು ಕಡಿಮೆ ಪ್ರಮಾಣದಲ್ಲಿ ಉಪಯೋಗಿಸಬೇಕು.
-ಮಧುಮೇಹಿಗಳು ಹಾಗೂ ಹಾಯ್ ಬ್ಲಡ್ ಪ್ರೆಶರ್ ಇರುವವರು ಡಾಕ್ಟರ್ ಮಾರ್ಗದರ್ಶನದಂತೆ ತಪ್ಪದೆ ಗುಳಿಗೆಗಳನ್ನು ತೆಗೆದುಕೊಳ್ಳಬೇಕು. ಇದರ -ಹೊರತಾಗಿ ತಿಂಗಳಿಗೊಮ್ಮೆ ರೂಟಿನ್ ಚಕಅಪ್ ಮಾಡಿಸಿಕೊಳ್ಳಬೇಕು.
-ಹಾರ್ಟ್ ಅಟ್ಯಾಕ್ ಸಮಸ್ಯೆ ಉದ್ಭವಿಸಿದ ವ್ಯಕ್ತಿಗೆ ತಕ್ಷಣ ಎಸ್ಪ್ರಿನ್ ಟ್ಯಾಬ್ಲೆಟ್ ನೀಡಿ ಮುಂದಿನ ಉಪಚಾರಕ್ಕಾಗಿ ಆದಷ್ಟು ಬೇಗ ಆಸ್ಪತ್ರೆಗೆ ದಾಖಲು ಮಾಡಬೇಕು.
-ಯಾವುದೇ ವ್ಯಕ್ತಿ ಆಕಸ್ಮಿಕವಾಗಿ ಕಾರ್ಡಿಯಾಕ್ ಅರೆಸ್ಟ್ ಗೆ ತುತ್ತಾದರೆ ಆ ವ್ಯಕ್ತಿಗೆ ಸಿಪಿಆರ್ ನೀಡಲು ಪ್ರಾರಂಭಿಸಬೇಕು. ಮತ್ತು ಸಾಧ್ಯವಾದಷ್ಟು ಬೇಗ ಆಸ್ಪತ್ರೆಗೆ ದಾಖಲು ಮಾಡಲು ಪ್ರಯತ್ನಿಸಬೇಕು.
-ನಿಮಗೆ ಹಾರ್ಟ್ ಅಟ್ಯಾಕ್ ಮತ್ತು ಕಾರ್ಡಿಯಾಕ್ ಅರೆಸ್ಟ್ ಬಗ್ಗೆ ಇನ್ನಷ್ಟು ಮಾಹಿತಿ ಬೇಕಾದರೆ (Cardiologist) ಸಂಪರ್ಕಿಸಿ.

Save a life – register your defibrillator - Ambulance Victoria

ಮಿತ್ರರೇ ಈ ಲೇಖನದ ಮುಖಾಂತರ ನಿಮಗೆ ಯೋಗ್ಯ ಮಾಹಿತಿಯನ್ನು ನೀಡುವ ಉದ್ದೇಶ ನಮ್ಮದಾಗಿದೆ. ನಿಮಗೆ ಯಾವುದೇ ರೀತಿಯ ಔಷಧ ಅಥವಾ ಉಪಚಾರದ ಸಲಹೆಯನ್ನು ನೀಡುತ್ತಿಲ್ಲ. ನಿಮಗೆ ಒಳ್ಳೆಯ ಸಲಹೆಯನ್ನು ಚಿಕಿತ್ಸಕರೇ ನೀಡುತ್ತಾರೆ. ನಾವು ಬರೀ ಈ ಲೇಖನದ ಮುಖಾಂತರ ಸಾಮಾನ್ಯಜ್ಞಾನವನ್ನು ಅಷ್ಟೇ ನೀಡುತ್ತಿದ್ದೇವೆ. ಇಲ್ಲಿ ನೀಡಿದ ಮಾಹಿತಿಯನ್ನು ನಿಮ್ಮ ಚಿಕಿತ್ಸಕರ ಅಥವಾ ಡಾಕ್ಟರುಗಳ ಅನುಮತಿ ಇಲ್ಲದೆ ಯಾವುದೇ ರೀತಿಯ ಔಷಧಗಳನ್ನು ಸ್ವತಃ ತೆಗೆದುಕೊಳ್ಳಲು ಬೇಡಿ ಮತ್ತು ಇನ್ನೊಬ್ಬರಿಗೆ ನೀಡಲೂ ಬೇಡಿ. ಯಾವುದೇ ರೀತಿಯ ಔಷಧಗಳನ್ನು ಪ್ರಾರಂಭಿಸುವ ಮುನ್ನ ನಿಮ್ಮ ಡಾಕ್ಟರ್ ಜೊತೆಗೆ ಚರ್ಚೆ ಮಾಡಿ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
DMCA.com Protection Status
error: Fuck you !!