ನಮಸ್ತೆ ಸ್ನೇಹಿತರೆ, ಹಣ್ಣು ಮಕ್ಕಳು ಯಾವ ವಿಷಯಕ್ಕೂ ಕಮ್ಮಿ ಇಲ್ಲಾ,‌‌ ಯಾಕೆಂದರೆ ಹೆಣ್ಣು ಮಕ್ಕಳು ಕೇವಲ ನಾಲ್ಕು ಗೋಡೆಗೆ ಸೀಮಿತ ಎಂದು ಹೇಳುತ್ತಾರೆ.. ಆದರೆ ಈಗಿನ ಕಾಲದಲ್ಲಿ ಹೆಣ್ಣು ಮಕ್ಕಳು ಕೆಲಸ ಮಾಡದ ಜಾಗವಿಲ್ಲ ಪ್ರತಿಯೊಂದು ಕ್ಷೇತ್ರದಲ್ಲಿ ಹೆಣ್ಣು ಮಕ್ಕಳು ಇಂದಿಗೂ ಕೆಲಸ ಮಾಡುತ್ತಿದ್ದಾರೆ.. ರಾಜಕೀಯದಲ್ಲಿ, ಕಂಪನಿಗಳಲ್ಲಿ, ಹಾಗೂ ರಸ್ತೆ ಸ್ವಚ್ಛತೆಯಲ್ಲಿ, ಈಗೆ ನಾನಾ ರೀತಿಯ ಉದ್ಯೋಗದಲ್ಲಿ ಹಣ್ಣು ಮಕ್ಕಳಿಗೆ ತುಂಬಾನೇ ಗೌರವ ನೀಡಿದ್ದಾರೆ ಅಲ್ಲದೇ ಬೇರೆ ಮಹಿಳೆಯರಿಗೂ ಸ್ಪೂರ್ತಿಯಾಗಿದ್ದಾರೆ, ಇವತ್ತು ನಾವು ಹೇಳುವ ವಿಷಯದಲ್ಲಿ ಒಬ್ಬ ರೈತ ಕುಟುಂಬದ ಮಹಿಳೆ ಕೃಷಿಯಲ್ಲಿ ಬೇರೆ ಮಹಿಳೆಯರಿಗೆ ಸ್ಪೂರ್ತಿಯಾಗಿ ನಿಂತಿದ್ದಾರೆ.. ಅಷ್ಟಕ್ಕೂ ಮಹಿಳೆ ಯಾರು ಕೃಷಿಯಲ್ಲಿ ಈ ಮಹಿಳೆ ಮಾಡಿದ ಸಾಧನೆ ಬಗ್ಗೆ ಇಲ್ಲಿ ನೋಡೋಣ ಬನ್ನಿ…

Haveri

ಹೌದು ಸ್ನೇಹಿತರೆ ಇವರ ಹೆಸರು ಮಾದೇವಕ್ಕ ಹಾವೇರಿ ಜಿಲ್ಲೆಯಲ್ಲಿ ವಾಸಿಸುತ್ತಿರುವ ಮಾದೇವಕ್ಕ ಅವರು ಮಾದರಿ ರೀತಿ ಕೃಷಿ ಬೇಸಾಯ ಮಾಡುತ್ತಿದ್ದರು.. ಅತಿವೃಷ್ಟಿ ಹಾಗು ಅನಾವೃಷ್ಟಿಗೆ ತುತ್ತಾಗುವ ರೈತರು ಬೇಸಾಯ ಮಾಡುವ ಪದ್ದತಿಯಿಂದ ವಿಮುಕ್ತಿ ಹೊಂದುವ ಸಮಯದಲ್ಲಿ, ಈ ಮಹಿಳೆ ಕೃಷಿಯ ಮೇಲೆ ಹೆಚ್ಚು ಅವಲಂಬಿತವಾಗಿ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ.. ಇನ್ನು ತಮಗಿರುವ ಐದು ಎಕರೆ ಭೂಮಿಯಲ್ಲಿ ಬಂಗಾರದಂತ ಬೆಳೆ ತೆಗೆಯುತ್ತಿದ್ದಾರೆ.. ಪುರುಷರು ಆಶ್ಚರ್ಯ ಪಡುವ ಹಾಗೆ ಕೃಷಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ, ಕೆರವಡಿ‌ ಗ್ರಾಮದ ಲಿಂಗದ ಹಳ್ಳಿಯ ಮಾದೇವಕ್ಕ ಪ್ರತಿದಿನ ಕೃಷಿಯಲ್ಲಿ ಹೋರಾಟದ ಬದುಕನ್ನು ನಡೆಸುತ್ತಿದ್ದರು.. ಇನ್ನು ಇವರ ತಂದೆ ಹೆಸರು ಬಸಪ್ಪ ಇವರಿಗೆ ಐದು ಜನ ಹೆಣ್ಣು ಮಕ್ಕಳು, ಈ ಐದು ಜನ ಹೆಣ್ಣು ಮಕ್ಕಳಲ್ಲಿ ಮಾದೇವಕ್ಕ ಮನೆಯ ಹಿರಿಯ ಮಹಿಳೆಯಾಗಿದ್ದರು..

Haveri

ಇವರ ಕುಟುಂಬದಲ್ಲಿ ಗಂಡ ಮಕ್ಕಳು ಇಲ್ಲದ ಕಾರಣ ಮಾದೇವಕ್ಕ ತನ್ನ 12‌ನೇ‌ ವಯಸ್ಸಿಗೆ ಕುಟುಂಬ ಪೂರ್ತಿ ಜವಾಬ್ದಾರಿಯನ್ನು ತನ್ನ ಹೆಗಲ ಮೇಲೆ ಹೊರುವ ಮೂಲಕ ತನ್ನ ತಂದೆಯ ಕಾರ್ಯಕ್ಕೆ ಸಹಾಯಕವಾಗಿ ನಿಂತರು.. ಮಾದೇವಕ್ಕ ಸುಮಾರು 36 ವರ್ಷಗಳ ಕಾಲ‌ ಅವಿವಾಹಿತೆಯಾಗಿ, ತಮ್ಮ‌ ಜೀವನವನ್ನು ಕೃಷಿಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದರು, ‌‌ಇನ್ನು ಗ್ರಾಮದ ಜನರು ಮಳೆ ಇಲ್ಲ‌ ಎಂದು ತಮ್ಮ ಜಮೀನಿನಲ್ಲಿ ಕನಿಷ್ಠ ಬೆಳೆ ಬೆಳೆಯುವ,‌ ಸಂದರ್ಭದಲ್ಲಿ‌ ಮಾದೇವಕ್ಕ ಮಾತ್ರ ತನ್ನ ಐದು ಎಕರೆ ಇಪ್ಪತ್ತು ಕುಂಟೆ ಜಮೀನಿನಲ್ಲಿ, ಗೋವಿನ ಜೋಳ ಸಿರಿ ಧಾನ್ಯಗಳನ್ನು ಬೆಳೆದು ಅದರಿಂದ ಉತ್ತಮವಾದ ಇಳುವರಿ ಪಡೆದು, ಅಲ್ಲಿನ ಜನರು ಅವರನ್ನು ನೋಡಿ ಆಶ್ಚರ್ಯ ಪಡುವಂತೆ ಮಾಡಿದ್ದಾರೆ, ತಮ್ಮ ಮೂರು ಎಕರೆ ಭೂಮಿಗೆ ನೀರಾವರಿ ಸೌಲಭ್ಯ ಸಿಕ್ಕಿದ್ದು, ಇನ್ನೂಳಿಂದ ಜಮೀನಿನಲ್ಲಿ ತಮ್ಮ ಸಹೋದರಿಯಾ ಜೊತೆ‌ ಕೃಷಿ ಕೆಲಸ ಮಾಡುತ್ತಿದ್ದಾರೆ, ಇದರಿಂದ ಮಾದೇವಕ್ಕ ಅವರು ವರ್ಷಕ್ಕೆ ಸುಮಾರು ಮೂರು ಲಕ್ಷ ಆದಾಯ ಪಡೆಯುತ್ತಿದ್ದಾರೆ..Haveri

ಮೊದಲು ಎತ್ತುಗಳ ಸಹಾಯದಿಂದ ಕೃಷಿ ಕೆಲಸ ಮಾಡುತ್ತಿದ್ದ ಮಾದೇವಕ್ಕ, ಈಗ ತಮ್ಮ ಉತ್ತಮ ದುಡಿಮೆಯಿಂದ ಒಂದು ಹೊಸ ಟ್ರ್ಯಾಕ್ಟರ್ ಅನ್ನು ಖರೀದಿ ಮಾಡಿದ್ದರು.. ಕೆಲವು ತಿಂಗಳ ಬಳಿಕ ಟ್ರ್ಯಾಕ್ಟರ್ ಅನ್ನು ಚಾಲನೆ ಮಾಡುವುದನ್ನು ಕಲಿತರು.. ಕೃಷಿ ಮಾಡುವ ಜೊತೆಗೆ ತನ್ನ ತಂಗಿಯರನ್ನು ಸಾಕುತ್ತಿದ್ದಾರೆ, ಕೃಷಿಯೇ ರೈತರ ಜೀವನ ಎಂದು ತಿಳಿದು ಕೃಷಿಯಲ್ಲಿ ಜೀವನ ಮಾಡುತ್ತಿರುವ ಮಾದೇವಕ್ಕ ಅವರ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •