ಗಂಡ ಹೆಂಡತಿ ಅಂದಮೇಲೆ ಜಗಳ ಆಗೋದು ಕಾಮನ್. ಆದ್ರೂ ಸಹ ಎಷ್ಟೇ ಜಗಳವಾದ್ರೂ ಹೆಂಡತಿಗೆ ಗಂಡ, ಗಂಡನಿಗೆ ಹೆಂಡತಿಯೇ ಆಸರೆಯಾಗಿರುತ್ತಾರೆ. ಅವರಿಬ್ಬರ ಮಧ್ಯೆ ವೈಯಕ್ತಿಕ, ನನ್ನ ವಸ್ತು ನಿನ್ನ ವಸ್ತು ಎಂಬಿತ್ಯಾದಿ ವಿಚಾರಗಳಿರುವುದಿಲ್ಲ. ಬಹುತೇಕ ಪರ್ಸನಲ್ ಥಿಂಗ್ಸ್ ಹಾಗೂ ಪರ್ಸನಲ್ ವಿಷಯಗಳು ಇರುವುದಿಲ್ಲ. ಆದರೆ ಹೀಗೆ ಅಂದುಕೊಂಡು ಹೆಂಡತಿ ಗಂಡನಿಗೆ ಎಟಿಎಂ ಕೊಟ್ಟು ಎಡವಟ್ಟು ಮಾಡಿಕೊಂಡ ಕತೆಯಿದು. ಈ ವಿಚಾರವನ್ನು ಬಹುತೇಕ ಎಲ್ಲರೂ ನೋಡಲೇಬೇಕು. ಇದು ಪ್ರತಿಯೊಬ್ಬರಿಗೂ ಸಹ ತಿಳಿದಿರಬೇಕು.. ಒಮ್ಮೆ ಬೆಂಗಳೂರಿನಲ್ಲಿ ವಾಸಿಸುತ್ತಿದ್ದ ವಂದನಾ ಎಂಬ ಮಹಿಳೆ ತನ್ನ ಗಂಡನಿಗೆ ಎಟಿಎಂ ಕೊಟ್ಟು ಹಣ ಡ್ರಾ ಮಾಡಿಕೊಂಡು ಬರುವಂತೆ ಹೇಳುತ್ತಾಳೆ. ಎಷ್ಟೋ ಸಲ ತನ್ನ ಗಂಡ ಹಣ ಡ್ರಾ ಮಾಡಿಕೊಂಡು ಬಂದಿದ್ದಾರೆ..


ಅದರಲ್ಲೇನಿದೆ ಅಂತ ಅಂದುಕೊಂಡು ವಂದನಾ ಗಂಡನಿಗೆ ಎಟಿಎಂ ಕೊಟ್ಟು 25 ಸಾವಿರ ಹಣವನ್ನು ಡ್ರಾ ಮಾಡಿಕೊಂಡು ಬರುವಂತೆ ಹೇಳುತ್ತಾಳೆ, ಅದರಂತೆ ಗಂಡಕೂಡ ಎಟಿಎಂ ಬಳಿ ಬಂದು ಹಣ ಡ್ರಾ ಮಾಡುತ್ತಾನೆ, ಆದರೆ ದುರಾ’ದೃಷ್ಟವಶಾತ್ ಎಟಿಎಂನಲ್ಲಿ ಹಣ ಡ್ರಾ ಮಾಡಿದಾಗ ಖಾಲಿ ಹಣ ಡ್ರಾ ಆಗಿದೆ ಎಂಬ ಸ್ಲಿಪ್ ಅಷ್ಟೇ ದೊರಕುತ್ತದೆ. ಎಷ್ಟು ಹೊತ್ತು ಕಾದರೂ ಸಹ ಹಣ ಮಾತ್ರ ಸಿಗೋದೇಯಿಲ್ಲ. ಮನೆಗೆ ಬಂದ ಹೆಂಡತಿಗೆ ನಡೆದ ಘ’ಟನೆ ಬಗ್ಗೆ ವಿವರಿಸಿದ ಆತ ಬೆಳಗ್ಗೆಯವರೆಗೂ ನೋಡೋಣ ಹಣ ಬಂದಿಲ್ಲ ಅಂದ್ರೆ ಬ್ಯಾಂಕ್‌ನಲ್ಲಿ ವಿಚಾರಿಸುವ ಅಂತ ವಂದನಾಗೆ ಸಂತೈಸಿ ಮಲಗುತ್ತಾರೆ. ಮಾರನೇ ದಿನ ಬ್ಯಾಂಕ್‌ಗೆ ಹೋದ್ರೆ ಇನ್ನು ಇಪ್ಪತ್ನಾಲ್ಕು ಘಂಟೆಯಲ್ಲಿ ಹಣ ಖಾತೆಗೆ ಕ್ರೆಡಿಟ್ ಆಗುತ್ತೆ ಅಂತ ಹೇಳುತ್ತಾರೆ.ಆದರೆ ಎಷ್ಟೇ ಕಾದರೂ ಸಹ ಹಣ ಮಾತ್ರ ಖಾತೆಗೆ ಕ್ರೆಡಿಟ್ ಆಗಿರುವುದಿಲ್ಲ. ನಂತರ ಬ್ಯಾಂಕ್ ಸಹಾಯಕ ಕಚೇರಿಗೆ ಹೋಗಿ ವಿಚಾರಿಸಿದಾಗ ಹಣ ಎಟಿಎಂಯಿಂದ ಡ್ರಾ ಆಗದೇ ಇರೋದು ಖಚಿತವಾಗುತ್ತೆ. ಆದರೂ ಸಹ ವಂದನಾ ಖಾತೆಗೆ ಹಣವನ್ನು ಹಿಂದಿರುಗಿಸಲು ಬ್ಯಾಂಕ್‌ನವರು ನಿರಾಕರಿಸುತ್ತಾರೆ. ಅರೇ ಇದೇನಪ್ಪಾ! ಅವರ ಹಣ ಅವರಿಗೆ ಹಾಕಲು ಬ್ಯಾಂಕ್‌ನವರಿಗೆ ಏನು ಸಮಸ್ಯೆ ಅಂತ ಅಂದುಕೊಳ್ತೀರಬಹುದು, ಅದಕ್ಕೆ ಹೇಳಿದ್ದು ಈ ಕಥೆ ಪ್ರತಿಯೊಬ್ಬನಿಗೂ ತಿಳಿದಿರಬೇಕು ಅಂತ. ಎಸ್ ಈ ಘ’ಟನೆ ಬಗ್ಗೆ ವಂದನಾ ಗಂಡ ವಂದನಾ ಅವರ ಎಟಿಎಂ ಕಾರ್ಡ್ನಲ್ಲಿ ಹಣ ಡ್ರಾ ಮಾಡಿದ ಬಗ್ಗೆ ಸಿಸಿಟಿವಿಯಲ್ಲಿ ಬ್ಯಾಂಕ್‌ನವರು ನೋಡ್ತಾರೆ. ಆಗ ಹಣ ಡ್ರಾ ಆಗದಿರವುದನ್ನು ಖಚಿತ ಪಡಿಸುತ್ತಾರೆ. ಅಬ್ಬ ನಮ್ಮ ದುಡ್ಡು ನಮಗೆ ಬಂತು ಅಂತ ಇದ್ದ ದಂಪತಿಗಳಿಗೆ ಶಾ’ಕ್ ಕೊಡುತ್ತಾರೆ.

ಯಾವುದೇ ಕಾರಣಕ್ಕೂ, ಗಂಡನಾಗಿದ್ದರೂ ಅಷ್ಟೇ, ಅಣ್ಣನಾಗಿದ್ರೂ ಅಷ್ಟೇ ಮತ್ತೊಬ್ಬರ ಎಟಿಎಂನ್ನು ಬಳಸುವಂತಿಲ್ಲ ಎಂಬ ಬ್ಯಾಂಕ್‌ನ ನಿಯಮದಡಿಯಲ್ಲಿ ಈ ದಂಪತಿಗಳಿಗೆ ಹಣ ವಾಪಸ್ ಕೊಡಲ್ಲ.
ಹೌದು ಯಾರು ಇನ್ನೊಬ್ಬರ ಎಟಿಎಂ ಕಾರ್ಡನ್ನು ಬಳಸುವಂತಿಲ್ಲ. ಅದು ಗಂಡನಾದ್ರೂ ಅಷ್ಟೇ, ಹೆಂಡತಿಯಾದ್ರೂ ಅಷ್ಟೇ. ಈ ಒಂದು ರೂಲ್ಸ್ ಖಾತೆ ತೆಗೆಯುವ ವೇಎಯೇ ಬ್ಯಾಂಕ್‌ನ ನಿಯಮದಲ್ಲಿ ಉಲ್ಲೇಖಿಸಿರುತ್ತಾರೆ. ಹಾಗೊಂದು ವೇಳೆ ಇನ್ನೊಬ್ಬರು ಎಟಿಎಂ ಕಾರ್ಡ್ ಬಳಕೆ ಮಾಡಿದ್ರೆ ಅದು ಎಷ್ಟೇ ದೊಡ್ಡ ಮೊತ್ತವಾಗಿದ್ರು ಸಹ ಅದನ್ನು ಹಿಂದುರಿಗಿಸದೇ ಬ್ಯಾಂಕ್‌ನವರು ಇರಲು ಅವಕಾಶವಿದೆ.
ಸ್ನೇಹಿತರೇ ಇನ್ಮುಂದೆ ನೀವ್ಯಾರದ್ದಾದ್ರೂ ಎಟಿಎಂ ಯುಸ್ ಮಾಡೋ ಮುನ್ನ ಎಚ್ಚರ ಎಚ್ಚರ..

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •