ವೈಷ್ಣವಿ ಗೌಡ

ಮನೆಯಲ್ಲಿ ಭರ್ಜರಿಯಾಗಿ ಕ್ರಿಸ್ಮಸ್ ಹಬ್ಬ ಆಚರಿಸುತ್ತಿರುವ ನಟಿ ವೈಷ್ಣವಿ ಗೌಡ,ಆಚರಣೆ ನೋಡಿ ವೈರಲ್ ಫೋಟೋಸ್.!

Home

ಬಿಗ್ ಬಾಸ್ ಸೀಸನ್ 8 ರಲ್ಲಿ ಸ್ಪರ್ಧಿಯಾಗಿ ಜನರಿಗೆ ಇನ್ನಷ್ಟು ಹತ್ತಿರವಾಗಿದ್ದರು. ಕಲರ್ಸ್ ಕನ್ನಡದ ಅಗ್ನಿ ಸಾಕ್ಷಿ ಧಾರವಾಹಿ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟವರು ವೈಷ್ಣವಿ ಗೌಡ. ಆ ಧಾರವಾಹಿಯಲ್ಲಿ ಸನ್ನಿಧಿಯಾಗಿ ಪಾತ್ರ ಮಾಡಿದ ಅವರು ಪ್ರತಿ ಮನೆಯ ಮಗಳಾಗಿಬಿಟ್ಟಿದ್ದರು. ತಮ್ಮ ಡಿಂಪಲ್ ಬೀಳುವ ನಗು, ಮುದ್ದಾದ ಮಾತು, ಸಾಪ್ಟ್ ನೇಚರ್ ನಿಂದ ಸನ್ನಿಧಿ ಪಾತ್ರ ತುಂಬಾನೇ ಫೇಮಸ್ ಆಗಿತ್ತು. ಆ ಧಾರವಾಹಿಯಲ್ಲಿ ಸಿದ್ಧಾರ್ಥ್ – ಸನ್ನಿಧಿಯವರ ಜೋಡಿ, ಅವರ ರೋಮ್ಯಾನ್ಸ್ ನೋಡಲೆಂದೇ ಹೆಚ್ಚಿನ ಮಂದಿ ಆ ಧಾರವಾಹಿ ನೋಡುತ್ತಿದ್ದರು.

ಒಟ್ಟು ನಾಲ್ಕು ವರ್ಷಗಳ ಕಾಲ ಯಶಸ್ವಿಯಾಗಿ ಓಡಿದ ಆ ಧಾರವಾಹಿಯಿಂದಾಗಿ ವೈಷ್ಣವಿ ಗೌಡ ಅವರ ಹೆಸರು ಸನ್ನಿಧಿ ಎಂದೇ ಆಗಿತ್ತು. ಅವರು ಎಲ್ಲಾದರೂ ಹೊರಗಡೆ ಸಿಕ್ಕರೆ ಅಭಿಮಾನಿಗಳು ಅವರನ್ನು ಸನ್ನಿಧಿ ಎಂದೇ ಕರೆಯುತ್ತಿದ್ದರು. ಅಷ್ಟರಮಟ್ಟಿಗೆ ಆ ಪಾತ್ರ ವೀಕ್ಷಕರ ಮನಗೆದ್ದಿತ್ತು. ಆ ಧಾರವಾಹಿ ನಂತರ ವೈಷ್ಣವಿ ಅವರು ಬೇರೆ ಇನ್ಯಾವುದೇ ಸೀರಿಯಲ್ ನಲ್ಲೂ ಕಾಣಿಸಿಲ್ಲ, ಆದರೆ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟು ಕೆಲ ಸಿನಿಮಾಗಳಲ್ಲಿ ನಟಿಸಿದ್ದರು. ಆ ನಂತರ ಬಿಗ್ ಬಾಸ್ ಸೀಸನ್ 8 ರಲ್ಲಿ ಸ್ಪರ್ಧಿಯಾಗಿ ಬಂದು ಇನ್ನಷ್ಟು ಜನಪ್ರಿಯತೆ ಗಳಿಸಿದ್ದರು. ಆ ಮನೆಯಲ್ಲಿ ಅವರ ನಡತೆ, ಮಾತುಕತೆ, ಅವರ ಯೋಗಾಭ್ಯಾಸ, ಕೀಟಲೆ ಮಾತು, ಜೋಕ್ಸ್ ಎಲ್ಲವೂ ಜನರಿಗೆ ಇಷ್ಟವಾಗಿ ಬಿಟ್ಟಿತ್ತು.

ವೈಷ್ಣವಿ ಅವರು ನಿಜ ಜೀವನದಲ್ಲಿ ಹೇಗಿದ್ದಾರೆ ಅನ್ನುವುದು ಈ ಮೂಲಕ ಗೊತ್ತಾಗಿ ಅವರ ಅಭಿಮಾನಿಗಳ ಸಂಖ್ಯೆ ಇನ್ನಷ್ಟು ಹೆಚ್ಚಾಯಿತು. ಬಿಗ್ ಬಾಸ್ ಮನೆಯಲ್ಲಿ ಕಿಚ್ಚ ಸುದೀಪ್ ಕೈಯಿಂದ ರೇಷ್ಮಕ್ಕಾ ಅಂತ ಕರೆಸಿಕೊಂಡು , ತನ್ನ ಮದುವೆ ವಿಚಾರದಲ್ಲಿ ಸುದ್ದಿಯಾಗಿದ್ದ ವೈಷ್ಣವಿ ಅವರು ಪ್ರತಿಯೊಂದು ಹಬ್ಬವನ್ನು ಅದ್ದೂರಿಯಾಗಿ ಮಾಡುತ್ತಾರೆ. ಅದೇ ರೀತಿ ಇದೀಗ ಕ್ರಿಸ್ ಮಸ್ ಹಬ್ಬವನ್ನು ಕೂಡ ತಮ್ಮ ಮನೆಯಲ್ಲಿ, ತಾನೇ ಸಾಂತಾಕ್ಲಾಸ್ ಕೇಕ್ ಒಂದನ್ನು ರೆಡಿ ಮಾಡಿ ಸಡಗರದಿಂದ ಆಚರಣೆ ಮಾಡಿದ್ದಾರೆ. ಹಾಗೂ ಇದನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದು, ಭಾರೀ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...