ಶುಭ ಪೂಂಜಾ ಎಂದ ಕೂಡಲೇ ಸದ್ಯಕ್ಕೆ ನೆನಪಾಗುವುದು ಕನ್ನಡದ ಬಿಗ್‌ ಬಾಸ್‌ ಸೀಸನ್‌ ೮. ಅದರಲ್ಲಿ ಶುಭ ಪೂಂಜಾ ಅವರು ಕೂಡ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಅವರು ಬಿಗ್‌ ಬಾಸ್‌ ಮನೆಯಲ್ಲಿ ಇದ್ದಷ್ಟು ದಿನ ಬಹಳ ಜಾಲಿಯಾಗಿದ್ದರು. ಯಾವುದೇ ಕಾರಣಕ್ಕೂ ಯಾರೊಬ್ಬರ ಜೊತೆಗೂ ಇಲ್ಲದ ಸಲ್ಲದ ಗಲಾಟೆ ಮಾಡಿಕೊಂಡಿರಲಿಲ್ಲ.

ಅಲ್ಲದೇ ಬಿಗ್‌ ಬಾಸ್‌ ನೀಡುತ್ತಿದ್ದ ಟಾಸ್ಕ್‌ ಅನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದರು. ಮನೆಯಲ್ಲಿದ್ದ ಪ್ರತಿಯೊಬ್ಬ ಸದಸ್ಯರ ಜೊತೆಗೆ ಎಷ್ಟು ಸಲಿಗೆ ಇರಬೇಕೋ ಅಷ್ಟರಲ್ಲೇ ಇದ್ದರು. ಯಾರೊಂದಿಗೂ ಸುಖಾಸುಮ್ಮನೆ ಗಾಸಿಪ್‌ ಮಾಡಿಕೊಂಡಿರಲಿಲ್ಲ. ಈ ಎಲ್ಲಾ ಕಾರಣಗಳಿಗಾಗಿ ಶುಭ ಪೂಂಜಾ ಅಂದರೆ ಎಲ್ಲರಿಗೂ ಇಷ್ಟವಾಗುತ್ತಿತ್ತು.

 

 

ಆದರೆ ಶುಭ ಪೂಂಜಾ ಎಂದ ಕೂಡಲೇ ತಟ್ಟನೆ ನೆನಪಾಗುವುದು ನಟ ದುನಿಯಾ ವಿಜಯ್‌ ಅವರೊಂದಿಗೆ ಎರಡನೇ ಮದುವೆಯಾಗಿದ್ದರು ಎಂಬ ಸುದ್ದಿ. ಅಸಲಿಗೆ ಅವರು ಮದುವೆಯಾಗಿದ್ದರಾ? ಇಲ್ಲವಾ? ಎಂಬುದನ್ನು ಇಲ್ಲಿ ತಿಳಿಸುತ್ತೇವೆ, ಓದಿ.

ಶುಭ ಅವರ ಕೆರಿಯರ್‌ ಪ್ರಯಾಣ: ಶುಭ ಪೂಂಜಾ ಅವರು ಮೂಲತಃ ಮಂಗಳೂರಿನವರು. ಆದರೆ ಬೆಳೆದಿದ್ದು ಮಾತ್ರ ಬೆಂಗಳೂರಿನಲ್ಲಿ. ಹಾಗಾಗಿ ಸುಲಭವಾಗಿ ಇವರು ಮಾಡೆಲಿಂಗ್‌ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಅಲ್ಲದೇ, ಕೆಲವು ಜಾಹೀರಾತುಗಳಲ್ಲೂ ನಟನೆ ಮಾಡುತ್ತಿದ್ದರು.  ಮಿಸ್‌ ಚೆನ್ನೈ – ೨೦೦೩ರಲ್ಲಿ ವಿಜೇತೆಯಾಗಿ ಹೊರ ಹೊಮ್ಮುತ್ತಾರೆ. ಹಾಗಾಗಿ ಸಹಜವಾಗಿ ತಮಿಳು ಚಿತ್ರಗಳಲ್ಲಿ ಒಂದಷ್ಟು ಆಫರ್‌ ಗಳು ಬರುತ್ತದೆ.

 

 

ಸಿನಿಮಾ ಜರ್ನಿ: ತಮಿಳಿನ ಮಚ್ಚಿ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸುತ್ತಾರೆ. ಇದಾದ ನಂತರ ತಮಿಳಿನ ಅನೇಕ ಚಿತ್ರಗಳಲ್ಲಿ ನಾಯಕಿಯಾಗಿ ಅವಕಾಶ ಸಿಗುತ್ತದೆ. ಇದಾದ ನಂತರ ೨೦೦೬ರಲ್ಲಿ ಜಾಕ್ ಪಾಟ್‌ ಸಿನಿಮಾದಲ್ಲಿ ಕೂಡ ಪ್ರಥಮ ಬಾರಿಗೆ ಕಾಣಿಸಿಕೊಳ್ಳುತ್ತಾರೆ. ಈ ಸಿನಿಮಾದಲ್ಲಿ ನಟ ಸುದೀಪ್‌ ಕೂಡ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಜಾಕ್‌ ಪಾಟ್‌ ಚಿತ್ರ ಒಂದು ಹಂತಕ್ಕೆ ಹಿಟ್‌ ಸಿನಿಮಾ ಆಗುತ್ತದೆ. ಇಲ್ಲಿಂದ ಕನ್ನಡ ಸಿನಿಮಾ ರಂಗದಲ್ಲಿ ಶುಭ ಅವರ ಪ್ರಯಾಣ ಆರಂಭವಾಗುತ್ತದೆ.

ಇದಾದ ನಂತರ ಚಂಡಾ ಮತ್ತು ಮೊಗ್ಗಿನ ಮನಸ್ಸು ಚಿತ್ರಗಳಲ್ಲಿ ಕಾಣ್ಸಿಕೊಳ್ಳುತ್ತಾರೆ. ಮೊಗ್ಗಿನ ಮನಸ್ಸು ಚಿತ್ರ ಮೊದಲು ಬಿಡುಗಡೆಯಾಗುತ್ತದೆ. ಇದೇ ಚಿತ್ರ ರಾಧಿಕಾ ಪಂಡಿತ್‌ ಹಾಗೂ ಶುಭ ಪೂಂಜಾ ಅವರಿಗೆ ದೊಡ್ಡ ಮಟ್ಟದ ಜೀವನ ಕೊಟ್ಟದ್ದು ಇದೇ ಸಿನಿಮಾ. ಈ ಚಿತ್ರದಲ್ಲಿ ಮುದ್ದು ಮುದ್ದಾಗಿ ಪೆದ್ದು ಪೆದ್ದಾಗಿ ಕಾಣಿಸಿಕೊಳ್ಳುವ ಮೂಲಕ ಎಲ್ಲರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯೂ ಆಗುತ್ತದೆ.

 

 

ಇದಾದ ನಂತರ ಬಿಡುಗಡೆಯಾದ ಚಂಡ, ಸ್ಲಂ ಬಾಲಾ, ಅಂಜದಿರು, ತಾಕತ್‌ ಸಿನಿಮಾಗಳು ಹಿಟ್‌ ಚಿತ್ರಗಳ ಸಾಲಿನಲ್ಲಿ ಸೇರಿವೆ. ಶುಭ ಪೂಂಜಾ ಸಾಕಷ್ಟು ಚಿತ್ರಗಳಲ್ಲಿ ಕಾಣ್ಸಿಕೊಳ್ಳುತ್ತಾರಾದರೂ ಕೆಲವೊಂದು ಚಿತ್ರಗಳು ಯಶಸ್ವಿಯಾಗುವುದಿಲ್ಲ. ಆದರೆ ಅವರಿಗೆ ೨೦೧೩ರಲ್ಲಿ ತೆರೆ ಕಂಡ ಪರಾರಿ ಚಿತ್ರ ಮತ್ತೆ ಹಿಟ್‌ ಆಗುತ್ತದೆ. ಇದಾದ ನಂತರ ಶುಭ ಪೂಂಜಾ ಅಭಿನಯದ ಯಾವ ಚಿತ್ರವೂ ಹಿಟ್‌ ಆಗುವುದಿಲ್ಲ. ಬದಲಾಗಿ ಅವರು ಸಾಕಷ್ಟು ಸೋಲನ್ನು ನೋಡುತ್ತಾರೆ.

ಗಾಸಿಪ್‌ ಗಳಿಂದ ಜರ್ಜರಿತರಾದ ಶುಭ: ಹಾಗಾಗಿ ನಿರಂತರ ಸೋಲು ಹಾಗೂ ವೈಯಕ್ತಿಕ ಬದುಕಿನ ಒಂದಷ್ಟು ಕೆಟ್ಟ ಗಾಸಿಪ್‌ ಗಳಿಂದಾಗಿ ಜರ್ಜರಿತರಾಗಿ ಸಣ್ಣ ಪುಟ್ಟ ಅವಕಾಶಗಳನ್ನೇ ಬಳಸಿಕೊಳ್ಳುತ್ತಾರೆ. ಯಾವುದೇ ಸಿನಿಮಾ ಅಥವಾ ಯಾವುದೇ ಪಾತ್ರ ಬಂದರೂ ಅದಕ್ಕೆ ಒಪ್ಪಿಗೆ ನೀಡುತ್ತಾರೆ. ತಾತನ ತಿಥಿ ಮೊಮ್ಮಗನ ಪ್ರಸ್ಥ ಸಿನಿಮಾದಲ್ಲಿ ಅಭಿನಯಿಸಿದ ಪಾತ್ರದಿಂದಾಗಿ ಅವರ ಇಮೇಜ್‌ ಮತ್ತಷ್ಟು ಹಾಳಾಗುತ್ತದೆ. ಕೊನೆಗೆ ೨೦೨೦ರಲ್ಲಿ ಬಿಡುಗಡೆಯಾದ ನರಗುಂದ ಬಂಡಾಯ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಕೊರೊನಾ ಸೇರಿದಂತೆ ನಾನಾ ಕಾರಣಗಳಿಂದಾಗಿ ಶುಭ ಅವರು ನಟಿಸಿದ ಚಿತ್ರಗಳು ಇದುವರೆಗೂ ಬಿಡುಗಡೆಯಾಗಿಲ್ಲ.

ದುನಿಯಾ ವಿಜಯ್‌ ಅವರೊಂದಿಗೆ ಮುಂದುವರಿದ ಸಿನಿಮಾ ಪ್ರಯಾಣ: ಆರಂಭದಲ್ಲಿ ಯಶಸ್ಸು ಕಂಡ ಶುಭ ಅವರ ಕೆರಿಯರ್‌ ನಂತರದಲ್ಲಿ ಅದೆಲ್ಲವೂ ಡೋಲಾಯಮಾನವಾಗಿ ಬಿಡುತ್ತದೆ. ಇದೆ ಮಧ್ಯೆ ಸೃಷ್ಟಿಯಾದ ನಟ ದುನಿಯಾ ವಿಜಯ್‌ ಅವರ ಜೊತೆಗಿನ ವಿವಾಹ ಆಕೆಯನ್ನು ಮತ್ತಷ್ಟು ಹೈರಾಣವಾಗುವಂತೆ ಮಾಡುತ್ತದೆ. ದುನಿಯಾ ಸಿನಿಮಾ ಸಾಕಷ್ಟು ಹಿಟ್ ಆದದ್ದರಿಂದ ವಿಜಯ್‌ ಜೊತೆ ನಟಿಸುವಂತೆ ಚಂಡ ತಂಡ ಶುಭ ಅವರನ್ನು ಆಯ್ಕೆ ಮಾಡುತ್ತದೆ.

ಚಂಡ ಸಿನಿಮಾದ ಚಿತ್ರೀಕರಣದ ವೇಳೆ ನಟ ದುನಿಯಾ ವಿಜಯ್‌ ಅವರಿಗೆ ಶುಭ ಪೂಂಜಾ ವರ ಮೇಲೆ ಲವ್‌ ಆಗುತ್ತದೆ. ಇದಕ್ಕೂ ಮೊದಲು ವಿಜಯ್‌ ಅವರು ನಾಗರತ್ನ ಅವರನ್ನು ಎರಡನೇ ವಿವಾಹ ಮಾಡಿಕೊಂಡಿರುತ್ತಾರೆ. ಆದರೂ ವಿಜಯ್‌ ಅವರಿಗೆ ಶುಭ ಮೇಲೆ ಲವ್‌ ಆಗುತ್ತದೆ. ಆಗಷ್ಟೇ ಸಿನಿಮಾ ಜಗತ್ತಿಗೆ ಕಾಲಿಟ್ಟಿದ್ದರಿಂದ ಅವರಿಗೆ ಸಿನಿಮಾ ಜಗತ್ತಿನ ಯಾವುದೇ ಸಮಾಚಾರಗಳು ತಿಳಿದಿರುವುದಿಲ್ಲ. ಅಲ್ಲದೇ, ಇದೇ ಜೋಡಿ ಮುಂದೆ ಸಾಕಷ್ಟು ಸಿನಿಮಾಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ. ಇದೇ ವೇಳೆ ಬಹು ದೊಡ್ಡ ಗಾಸಿಪ್‌ವೊಂದು ಕನ್ನಡ ಚಿತ್ರರಂಗದಲ್ಲಿ ಹಬ್ಬಲಾರಂಭಿಸುತ್ತದೆ.

 

 

ಬಹು ದೊಡ್ಡ ಗಾಸಿಪ್‌: ಚಂಡ ಸಿನಿಮಾ ಮುಗಿದ ಕೂಡಲೇ ವಿಜಯ್‌ ಹಾಗೂ ಶುಭ ದೇವಸ್ಥಾನದಲ್ಲಿ ಮದುವೆ ಮಾಡಿಕೊಂಡಿದ್ದಾರೆ. ಶುಭ ಅವರಿಗೆ ವಿಜಯ್‌ ಅಪಾರ್ಟ್ಮೆಂಟ್‌ ಒಂದರಲ್ಲಿ ಫ್ಲಾಟ್‌ ಕೊಡಿಸಿದ್ದಾರೆ. ಅಲಲ್ದೇ, ದುನಿಯಾ ವಿಜಯ್‌ ಅವರು ಹೊಸ ಮನೆಯೊಂದು ಕಟ್ಟಿಸಿ ಅದರ ಗೃಹ ಪ್ರವೇಶಕ್ಕೆ ಶುಭ ಅವರನ್ನು ಕರೆಸಿದ್ದರು. ಈ ವೇಳೆ ವಿಜಯ್‌ ಅವರ ಪತ್ನಿ ನಾಗರತ್ನ ಅವರಿಗೆ ಪರಿಚಯ ಮಾಡಿಸಿ ಇಬ್ಬರು ಒಂದೇ ಮನೆಯಲ್ಲಿ ಒಟ್ಟಿಗೆ ಹೊಂದಿಕೊಂಡು ಹೋಗಬೇಕು ಎಂದು ಹೇಳಿದ್ದಕ್ಕೆ ನಾಗರತ್ನ ಅವರು ಒಪ್ಪಿಗೆ ಸೂಚಿಸುತ್ತಾರೆ ಎಂಬೆಲ್ಲಾ ಗಾಳಿ ಸುದ್ದಿಗಳು ಗಾಂಧಿ ನಗರದ ಸುತ್ತೆಲ್ಲಾ ಹರಡಲು ಪ್ರಾರಂಭಿಸಿತು.

ಇದರ ಜೊತೆಗೆ ಈ ಮಾತುಗಳಿಗೆ ಪುಷ್ಟಿ ನೀಡುವಂತಹ ಸಾಕ್ಷಿಗಳನ್ನು ಸ್ವತಃ ನಾಗರತ್ನ ಅವರೇ ಒದಗಿಸುತ್ತಾರೆ. ಇದಾದ ಬಳಿಕ ಮದುವೆಗೆ ಸಂಬಂಧಿಸಿದ ಫೋಟೊಗಳೆಲ್ಲವೂ ಸಿನಿಮಾ ಚಿತ್ರೀಕರಣದ ವೇಳೆ ತೆಗೆದದ್ದು ಅದು ಕೂಡ ಸಿನಿಮಾಗಾಗಿ ಮಾತ್ರ ತೆಗೆದದ್ದೇ ಹೊರತು ವಾಸ್ತವವಾಗಿ ಮದುವೆಯಾಗಿಲ್ಲ ಎಂಬ ಸ್ವಷ್ಟೀಕರಣವನ್ನು ಅವರು ನೀಡುತ್ತಾರೆ. ಇದಾದ ನಂತರ ಶುಭಾ ಅವರು ಯಾವುದೇ ಮಾತುಗಳನ್ನು ಹೇಳಲು ಮಾಧ್ಯಮದ ಮುಂದೆ ಬರದೇ ಸುಮ್ಮನಾಗಿ ಬಿಡುತ್ತಾರೆ. ಒಟ್ಟಾರೆಯಾಗಿ ಶುಭಾ ಪೂಂಜಾ ಅವರ ಜೀವನ ಮಾತ್ರ ಮೂರಾ ಬಟ್ಟೆಯಾಗಿ ಬಿಡುತ್ತದೆ.

 

 

ಇದಾದ ನಂತರವೂ ಕೂಡ ಆಕೆ ದುನಿಯಾ ವಿಜಯ್‌ ಜೊತೆಗೆ ಒಂದಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಇದಾದ ನಂತರವೂ ಅವರ ಬಗೆಗಿನ ಗಾಸಿಪ್ಗಳು ಮುಂದುವರಿಯುತ್ತಲೇ ಹೋಗುತ್ತದೆ. ಹಾಗಾಗಿ ತಾಕತ್‌ ಸಿನಿಮಾದ ನಂತರ ಶುಭ ಅವರು ವಿಜಯ್‌ ಜೊತೆಗೆ ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಹಾಗೂ ಗಾಸಿಪ್ನ ವಿಚಾರವಾಗಿ ಯಾರೊಂದಿಗೂ ಮಾತನಾಡುವುದಿಲ್ಲ. ಯಾವುದೇ ಸಂದರ್ಶನ ಅಥವಾ ರಿಯಾಲಿಟಿ ಶೊಗಳಲ್ಲಿ ಕೂಡ ಆ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡುವುದಿಲ್ಲ. ಅಷ್ಟರ ಮಟ್ಟಿಗೆ ಆಕೆಯ ಮೇಲೆ ಮಾನಸಿಕವಾಗಿ ದಾಳಿ ಮಾಡಲಾಗಿರುತ್ತದೆ. ಈ ಎಲ್ಲಾ ಮಾನಸಿಕ ಸ್ಥಿತಿಗಳಿಂದ ಹೊರ ಬರಲು ಕೂಡ ಆಕೆ ಸಾಕಷ್ಟು ಸಮಯವನ್ನು ತೆಗೆದುಕೊಳ್ಳುತ್ತಾರೆ.

 

 

ಬಿಗ್‌ ಬಾಸ್‌ ಮನೆ ಪ್ರಯಾಣ: ಪ್ರಸ್ತುತ ಶುಭ ಅವರು ಸುಮಂತ್‌ ಎನ್ನುವ ಹುಡುಗನನ್ನು ಪ್ರೀತಿಸುತ್ತಿದ್ದು ಸದ್ಯದಲ್ಲಿಯೇ ಮದುವೆ ಕೂಡ ಆಗಲಿದ್ದಾರೆ. ಈಗ ಬಿಗ್‌ ಬಾಸ ಮನೆಗೆ ಎಂಟ್ರಿ ಕೊಟ್ಟಿದ್ದು ಉತ್ತಮ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದಾರೆ. ಟಾಪ್‌ ಕಂಟಸ್ಟೆಂಟ್‌ ಗಳಲ್ಲಿ ಇವರು ಒಬ್ಬರು ಎನ್ನಲಾಗುತ್ತಿತ್ತು. ಆದರೆ ಬಿಗ್‌ ಬಾಸ್‌ ಕಾರ್ಯಕ್ರಮ ಅರ್ಧದಲ್ಲಿಯೇ ನಿಂತು ಹೋಗಿದೆ. ಇದುವರೆಗೂ ಆಕೆ ಬದುಕಿನಲ್ಲಿ ಕಳೆದುಕೊಂಡ ಸಂತೋಷವನ್ನು ಮುಂದೆ ತಮ್ಮ ಬದುಕಿನ ಪ್ರಯಾಣದಲ್ಲಿ ಪಡೆದುಕೊಳ್ಳಲಿ ಎಂಬುದು ನಮ್ಮೆಲ್ಲರ ಹಾರೈಕೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •