ಮದುವೆ ಎಂಬುದು ಎರಡು ಮನಸ್ಸುಗಳನ್ನು ಒಂದು ಮಾಡಿಸುವ ಅರ್ಥಪೂರ್ಣವಾದ ಬಾಂಧವ್ಯ ಬೆಸೆಯುವ ಪ್ರಕ್ರಿಯೆ.. ಆದರೆ ಇತ್ತೀಚಿನ ದಿನಗಳಲ್ಲಿ ಮದುವೆ ಅನ್ನೋದು ಒಂದು ವ್ಯಾಪಾರ.. ಅಥವಾ ಕೇವಲ ದೇ’ಹದ ಸು”ಖಕ್ಕಾಗಿ ಮದುವೆ ಎಂಬ ಹಣೆಪಟ್ಟಿ ಕಟ್ಟೋದೆ ಹೆಚ್ಚಾಗಿ ಹೋಗಿದೆ.. ಇಲ್ಲೊಬ್ಬ ವರ ಮಹಾಶಯ ಮಾಡಿರುವ ಕೆಲಸ ನಿಜಕ್ಕೂ ಆಶ್ಚರ್ಯವನ್ನುಂಟು ಮಾಡಿದೆ.. ಹುಡುಗಿಯೊಟ್ಟಿಗೆ ನಿಶ್ಚಿತಾರ್ಥ ಮಾಡಿಕೊಂಡು ಮ’ನವೊಲಿಸಿ ಗೋವಾಗೆ ಕರೆದುಕೊಂಡು ಹೋಗಿ.. ಪ್ರವಾಸವನ್ನೆಲ್ಲಾ ಮುಗಿಸಿ ಬಂದು ನಂತರ ಹೆ’ಣ್ಣಿನ ಕುಟುಂಬದವರಿಗೆ ಹೇಳಿರುವ ಮಾತು ಇದೀಗ ಮದುವೆ ಹು”ಡುಗಿ ಜೀ’ವ ಕಳೆದುಕೊಳ್ಳಲು ಹೋಗಿ ಆಸ್ಪತ್ರೆ ಸೇರುವಂತಾಗಿದೆ..

goa

ಹೌದು ಆತನ ಹೆಸರು ನಿಶ್ಚಿತ್.. ಖಾಸಗಿ ಸಂಸ್ಥೆಯೊಂದನ್ನು ನಡೆಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾನೆ.. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಜನ್ನಾಪುರ ಚಿನ್ನಿಗ ಎಂಬ ಗ್ರಾಮದವ.. ಇತ್ತ ಹಾಸನದ ಬೇಲೂರಿನಲ್ಲಿ ಖಾಸಗಿ ಸಂಸ್ಥೆಯೊಂದರ ಮಾಲೀಕರ ಮಗಳ ಜೊತೆ ಕಳೆದ ಫೆಬ್ರವರಿ 14 ರಂದು ನಿಶ್ಚಿತಾರ್ಥ ನೆರವೇರಿತ್ತು.. ಕುಟುಂಬವೇ ನೋಡಿ ನಿಶ್ಚಯಿಸಿದ ಮದುವೆ ಇದಾಗಿತ್ತು.. ಆಕೆಯೂ ಇಂಜಿನಿಯರಿಂಗ್ ಮಾಡಿದ್ದಳು.. ಖಾಸಗಿ ಕಂಪನಿಯೊಂದರಲ್ಲಿ ಕೆಲಸವನ್ನೂ ಸಹ ಮಾಡುತ್ತಿದ್ದಳು.. ಆದರೆ ಮದುವೆಯ ನಂತರ ಕೆಲಸ ಮಾಡಬಾರದು ಎಂದು ಹುಡುಗ ಹೇಳಿದ್ದಕ್ಕಾಗಿ ಆಕೆ ಕೆಲಸವನ್ನೂ ಸಹ ಬಿಟ್ಟಿದ್ದಳು..

goa

ಇನ್ನು ನಿಶ್ಚಿತಾರ್ಥ ಮುಗಿದ ಬಳಿಕ ಹು’ಡುಗಿಯ ಮನವೊಲಿಸಿ ಗೋವಾಕ್ಕೆ ಪ್ರವಾಸಕ್ಕೆಂದು ಕರೆದುಕೊಂಡು ಹೋಗಿ ಪ್ರವಾಸವನ್ನೆಲ್ಲಾ ಮುಗಿಸಿ ವಾಪಸ್ ಬಂದ ನಂತರ ಹುಡುಗ ಉಲ್ಟಾ ಹೊಡೆದಿದ್ದಾನೆ.. ಹೌದು ನನಗೆ ನಿಮ್ಮ ಹುಡುಗಿ ಜೊತೆ ಮದುವೆ ಬೇಡ.. ಮದುವೆ ಕ್ಯಾನ್ಸಲ್ ಎಂದಿದ್ದಾನೆ..

ಅತ್ತ ವಿಚಾರ ತಿಳಿಯುತ್ತಿದ್ದಂತೆ ಹುಡುಗಿ ವಿಷ ಸೇವಿಸಿ ಜೀವ ಕಳೆದುಕೊಳ್ಳಲು ಮುಂದಾಗಿದ್ದು ಆಕೆಯನ್ನು ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ..

ಇತ್ತ ಇದ್ದಕಿದ್ದ ಹಾಗೆ ಹುಡುಗಿ ನನ್ನ ಮಾತು ಕೇಳುತ್ತಿಲ್ಲ ಎಂಬ ಕಾರಣ ನೀಡಿ ಮದುವೆ ಕ್ಯಾನ್ಸಲ್ ಮಾಡಿರುವ ಹುಡುಗನ ನಿರ್ಧಾರವನ್ನು ಪ್ರಶ್ನಿಸಿ ತಮಗೆ ನ್ಯಾಯ ಕೊಡಿಸುವಂತೆ ಹುಡು’ಗಿಯ ತಂದೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.. ನನ್ನ ಮಗಳು ಇಂಜಿನಿಯರಿಂಗ್ ಓದಿದ್ದಳು ಒಳ್ಳೆಯ ಕೆಲಸದಲ್ಲಿಯೂ ಇದ್ದಳು.. ಮದುವೆಯ ನಂತರ ಕೆಲಸ ಮಾಡೋದು ಬೇಡ ಎಂದು ಅವನು ಹೇಳಿದ್ದಕ್ಕೆ ಕೆಲಸವನ್ನೂ ಸಹ ಬಿಟ್ಟಿದ್ದಳು.. ಈಗ ಮದುವೆ ಬೇಡ ಎಂದು ಹೇಳುತ್ತಿದ್ದಾನೆ ಎಂದು ಕಣ್ಣೀರಿಟ್ಟಿದ್ದಾರೆ..

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •