ಮೈ ಮೇಲಿರುವ ಮಚ್ಚೆಯಲ್ಲಿ ಸಾಕಷ್ಟು ವಿಚಾರಗಳು ಮತ್ತು ಅದೃಷ್ಟವೂ ಅಡಗಿರಬಹುದು. ಇನ್ನು ಕೆಲವು ಜೀವನದಲ್ಲಿ ದುರಾದೃಷ್ಟ ಮಚ್ಚೆಯಾಗಿ ಕಾಡಬಹುದು. ಆದರೆ ದೇಹದ ಯಾವ ಭಾಗದಲ್ಲಿನ ಮಚ್ಚೆಗಳು ಅದೃಷ್ಟವೆಂದು ಜ್ಯೋತಿಷ್ಯ ಹೇಳುತ್ತದೆ ತಿಳಿಯೋಣ.

ತುಟಿಯ ಮಚ್ಚೆ: ಮಹಿಳೆಯರ ತುಟಿಯ ಮೇಲಿನ ಮಚ್ಚೆ ಅಂದವನ್ನು ಹೆಚ್ಚಿಸಿದಂತೆ ಕಾಣುತ್ತದೆ.ಇನ್ನು ಪುರುಷರ ಮತ್ತು ಮಹಿಳೆಯ ತುಟಿಯ ಮೇಲಿನ ಬಲಭಾಗದಲ್ಲಿ ಮಚ್ಚೆ ಇದ್ದರೆ ಅಂಥವರ ದಾಂಪತ್ಯ ಜೀವನ ಸುಖವಾಗಿರುತ್ತದೆ. ಎಡಭಾಗದಲ್ಲಿ ಮಚ್ಚೆ ಇದ್ದರೆ ಅದನ್ನು ಅಶುಭವೆಂದು ಹೇಳಲಾಗುತ್ತದೆ.

ಎದೆಯಲ್ಲಿರುವ ಮಚ್ಚೆ: ಕೆಲವರಿಗೆ ಎದೆಯ ಮೇಲ್ಭಾಗದಲ್ಲಿ ಮಚ್ಚೆ ಇರುತ್ತದೆ. ಆದರೆ ಎದೆಯ ಎಡಭಾಗದಲ್ಲಿ ಮಚ್ಚೆ ಇದ್ದವರಿಗೆ ಹೃದಯ ಸಂಬಂಧಿ ರೋಗಗಳು ಬಾಧಿಸುವ ಸಾಧ್ಯತೆ ಇರುತ್ತಂತೆ. ಅಷ್ಟು ಮಾತ್ರವಲ್ಲದೆ ಇವರು ಕಾಮಸಕ್ತರಾಗಿರುತ್ತಾರೆ. ಇನ್ನು ಬಲಭಾ ಗದಲ್ಲಿದ್ದರೆ ಅಂಥವರು ಶ್ರೀಮಂತರಾಗಿರುತ್ತಾರೆ.

ಹೊಕ್ಕುಳಲ್ಲಿರುವ ಮಚ್ಚೆ: ಪುರುಷನ ಹೊಕ್ಕುಳಿನ ಎಡಭಾಗದಲ್ಲಿ ಮಚ್ಚೆ ಇದ್ದರೆ ಅಂಥವರು ಸುಖ, ಸಮೃದ್ಧಿ ಮತ್ತು ಕೀರ್ತಿಯನ್ನು ಪಡೆಯುತ್ತಾರಂತೆ. ಅಂತೆಯೇ ಹೆಣ್ಣು ಮಕ್ಕಳ ಹೊಕ್ಕುಳ ಮೇಲಿರುವ ಮಚ್ಚೆಯು ವೈವಾಹಿಕ ಜೀವನದ ಸುಖ ಮತ್ತು ಉತ್ತಮ ಸಂತಾನವನ್ನು ಸೂಚಿಸುತ್ತದೆ.

ಕೈ ಮತ್ತು ಕಾಲ್ಬೆರಳ ಮೇಲಿರುವ ಮಚ್ಚೆ:  ಕೈ ಬೆರಳಿನ ಮೇಲೆ ಮಚ್ಚೆಯನ್ನು ಇದ್ದವರು ಅದೃಷ್ಟಹೀನರು. ಆದರೆ ಕೆಲವರಿಗೆ ಅಂಗುಷ್ಠದ ಕೆಳಭಾಗದ ಶುಕ್ರ ಪರ್ವತದಲ್ಲಿ ಮಚ್ಚೆ ಇರುತ್ತದೆ. ಅಂತವರು ಅಂಥವರು ಜೀವನದಲ್ಲಿ ಹೆಚ್ಚು ಹಣವನ್ನು ಸಂಪಾದಿಸುತ್ತಾರಂತೆ. ಇನ್ನು ಕಾಲಿನ ಬೆರಳುಗಳಲ್ಲಿ ಮಚ್ಚೆ ಇದ್ದರೆ ಅಂತವರು ಅತೃಪ್ತ ವೈವಾಹಿಕ ಜೀವನವನ್ನು ಸೂಚಿಸುತ್ತದೆ.

ನಾಲಿಗೆಯ ಮೇಲಿರುವ ಮಚ್ಚೆ: ನಾಲಿಗೆಯ ಮೇಲೆ ಮಚ್ಚೆ ಇದ್ದರೆ ಹೇಳಿದಂತೆ ಆಗುತ್ತದೆ ಎನ್ನಲಾಗುತ್ತದೆ. ಆದರೆ ಇಂತವರಿಗೆ ಶಿಕ್ಷಣದಲ್ಲಿನ ತೊಂದರೆ ಮತ್ತು ವಾಕ್ ಸಂಬಂಧಿತ ಸಮಸ್ಯೆಯ ಕಾಣಿಸಿಕೊಳ್ಳಬಹುದಂತೆ. ಅಷ್ಟು ಮಾತ್ರವಲ್ಲದೆ ಕೌಶಲ್ಯವುಳ್ಳವರಾಗಿರುತ್ತಾರೆ ಮತ್ತು ರಾಜತಾಂತ್ರಿಕತೆ ಬಲ್ಲವರಾಗಿರುತ್ತಾರೆ.

…………………

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
DMCA.com Protection Status
error: Fuck you !!