girls-problems

ಮೊದಲ ರಾ-ತ್ರಿ ಪತ್ನಿಗೆ ಅರವಳಿಕೆ ಕೊಟ್ಟು ಗಂ*ಡ ಮಾಡಿರುವ ಕೆಲಸ ವಿಡಿಯೋ ನೋಡಿ…

Crime/ಅಪರಾಧ Home Kannada News/ಸುದ್ದಿಗಳು

ಮದುವೆ ಎಂಬುದು ಸುಂದರ ಬಾಂಧವ್ಯ.. ಗಂಡಾಗಲಿ ಹೆಣ್ಣಾಗಲಿ ಇಬ್ಬರಿಗೂ ಹೊಸ ಜೀವನದ ಮುನ್ನುಡಿ ಬರೆಯುವ ದಿನವೇ ಮದುವೆ.. ಇಬ್ಬರೂ ತಮ್ಮ ಮುಂದಿನ ಜೀವನದ ಬಗ್ಗೆ ನೂರಾರು ಕನಸು ಕಂಡು ಹಸೆಮಣೆ ಏರುತ್ತಾರೆ.. ಗಂಡು ತನ್ನ ಜೀವನದುದ್ದಕ್ಕೂ ಪತ್ನಿಯ ಜವಾಬ್ದಾರಿ ಸ್ವೀಕರಿಸಿ ಅವಳಿಗೆ ಪ್ರೀತಿ ಕೊಟ್ಟು ಅವಳಿಂದ ಪ್ರೀತಿ ಮಮತೆಯನ್ನು ಪಡೆದರೆ ಇತ್ತ ಪತ್ನಿಯಾದವಳು ಜೀವನದುದ್ದಕ್ಕೂ ಜೊತೆಯಾಗುವೆನೆಂದು ತಂದೆ ತಾಯಿಯ ಮನೆ ಬಿಟ್ಟು ಗಂಡನೇ ಸರ್ವಸ್ವವೆಂದು ಬರುತ್ತಾಳೆ.. ಆದರೆ ಇಲ್ಲೊಬ್ಬ ಪುಣ್ಯಾತ್ಮ ಮಾಡಿರುವ ಕೆಲಸ ನಿಜಕ್ಕೂ ಎಂತವರಿಗೂ ಕೆಟ್ಟ ಕೋಪ ತರಿಸುತ್ತಿದೆ..

ಹೌದು ಮದುವೆಯಾದ ಮೊದಲ ರಾತ್ರಿ ಪತಿ ಪತ್ನಿ ಬಾಳಲ್ಲಿ ಒಂದು ಸುಂದರ ನೆನಪಾಗಿ ಉಳಿಯಬೇಕು.. ಆದರೆ ಆ ಹೆಣ್ಣು ಮಗಳಿಗೆ ಕರಾಳ ನೆನಪಾಗಿ ನರಕದರ್ಶನವಾಗಿ ಹೋಗಿದೆ.. ಹೌದು ಗಂಡನೇ ತನ್ನ ಹೆಂಡತಿಗೆ ಅ ರವಳಿಕೆ ನೀಡಿ ಮಾಡಿರುವ ಕೆಲಸ ಮನಕಲಕುವಂತಿದೆ..

ಈ ಘಟನೆ ನಡೆದಿರುವುದು ದೂರದ ಯಾವುದೋ ಊರಲಲ್ಲ.. ಬದಲಿಗೆ ಪಕ್ಕದ ರಾಜ್ಯ ಆಂದ್ರದ ಗುಂಟೂರಿನಲ್ಲಿ.. ಹೌದು ಹುಡುಗ ಹುಡುಗಿ ಇಬ್ಬರೂ ಸಾಫ್ಟ್‌ವೇರ್ ಇಂಜಿನಿಯರ್ ಗಳು.. ಇಬ್ಬರು ಹೂದರಾಬಾದ್ ನಲ್ಲಿ ಕೆಲಸ ಮಾಡುತ್ತಾರೆ.. ಆ ಯುವತಿಯ ಊರು ಗುಂಟೂರು.. ಆತನದ್ದು ಪ್ರಕಾಶಂ ಜಿಲ್ಲೆ.. ಈ ಇಬ್ಬರ ಮದುವೆಯನ್ನು ಹಿರಿಯರೇ ನಿಶ್ಚಯಿಸಿ ಅದ್ಧೂರಿಯಾಗಿ ಮದುವೆ ಸಮಾರಂಭ ನೆರವೇರಿಸಿದರು.. ನಂತರ…

ನಂತರ ಮೊದಲ ರಾತ್ರಿಗೂ ಶಾಸ್ತ್ರದಂತೆ ಎಲ್ಲಾ ಸಿದ್ಧತೆಗಳನ್ನು ಮಾಡಿದ್ದರು.. ಆದರೆ ಆ ದಿನ ರಾತ್ರಿ ಪತಿ ತನ್ನ ಹೆಂಡತಿಯ ಜೊತೆ ವಿಚಿತ್ರವಾಗಿ ನಡೆದುಕೊಂಡಿದ್ದಾನೆ.. ಆತನ ವಿಚಿತ್ರ ವರ್ತನೆ ನೋಡಿ ವಧು ಕಣ್ಣೀರಿಡುತ್ತಾ ಕೋಣೆಯಿಂದ ಹೊರ ಬಂದಿದ್ದಾಳೆ.. ಪತಿಯಲ್ಲಿ ಏನಾದರೂ ಬದಲಾವಣೆ ಆಗಬಹುದೆಂದು ಎರಡು ತಿಂಗಳು ಆತನ ಒಟ್ಟಿಗೆಯೇ ಇದ್ದು ಕಾದಿದ್ದಾಳೆ..

ಎರಡು ತಿಂಗಳ ನಂತರ ಅಂದರೆ ಎರಡು ದಿನಗಳ ಹಿಂದಷ್ಟೇ ಮತ್ತೆ ಮಗಳ ಜೀವನ ಸರಿ ಹೋಗಲಿ ಎಂದು ಹಿರಿಯರು ಮೊದಲ ರಾತ್ರಿಯನ್ನು ಏರ್ಪಡಿಸಿದ್ದಾರೆ..‌ ಆದರೆ ಆ ದಿನ ಹುಡುಗ ಮಾತ್ರ ಮಾಡಿದ ಕೆಲಸವೇ ಬೇರೆ.. ಹೌದು ಹೆಂಡತಿಗೆ ಅರವಳಿಕೆ ಇಂಜೆಕ್ಷನ್ ನೀಡಿರುವ ಪತಿ ರಾತ್ರಿ ಆಕೆಯ ಜನನಾಂಗವನ್ನು ಬ್ಲೇಡ್ ನಿಂದ ಕಟ್ ಮಾಡಿ ನೀಚ ಕೃತ್ಯ ಎಸಗಿದ್ದಾನೆ.. ಬಹುಶಃ ಆತನಿಗೆ ತಾನೂ ಕೂಡ ತನ್ನ ತಾಯಿಯ ಜನನಾಂಗದಿಂದಲೇ ಜನಿಸಿದವ ಎಂಬ ಕನಿಷ್ಟ ಜ್ಞಾನವೂ ಇಲ್ಲದಾಗಿ ಹೋಯಿತೇನೋ.. ಅಥವಾ ತನ್ನ ತಾಯಿಯೂ ಒಂದು ಹೆಣ್ಣೆಂಬುದನ್ನು ಮರೆತುಬಿಟ್ಟನೇನೋ ತಿಳಿಯದು‌..

ಮಾರನೆಯ ದಿನ ಎಲ್ಲಾ ವಿಚಾರವನ್ನು ಮನೆಯವರಿಗೆ ಹೇಳಲಾಗಿ ವಧುವಿನ ಮನೆಯವರು ವರನ ಅಪ್ಪ ಅಮ್ಮನಿಗೆ ಪ್ರಶ್ನಿಸಲಾಗಿ ಎಂತಹ ಉತ್ತರ ಪಡೆದಿದ್ದಾರೆ ಗೊತ್ತಾ? ಮಗನ ಕೆಟ್ಟ ಕೆಲಸಕ್ಕೆ ಬೈದು ಬುದ್ದಿ ಹೇಳುವ ಬದಲು ಮಗನನ್ನು ವಹಿಸಿಕೊಂಡು ಬಂದಿರುವ ಆತನ ಅಪ್ಪ ಅಮ್ಮ ವಧುವಿನ ಬಗ್ಗೆಯೇ ಕೀಳಾಗಿ ಮಾತನಾಡಿ ನಿಮ್ಮ ಮಗಳೇ ಯಾವುದಕ್ಕೂ ಪ್ರಯೋಜನಕ್ಕೆ ಬಾರದವಳು ಎಂದು ಬೈದಿದ್ದಾರೆ‌‌..

ನಂತರ ವಧುವಿನ ಅಪ್ಪ ಅಮ್ಮ ಗುಂಟೂರಿನ ಪೊಲೀಸ್ ಅಧಿಕಾರಿಗಳಿಗೆ ಈ ಬಗ್ಗೆ ದೂರು ನೀಡಿದ್ದಾರೆ.. ತಕ್ಷಣ ಸ್ಪಂದಿಸಿರುವ ಪೊಲೀಸರು ಪ್ರಕರಣವನ್ನು ನರಸರಾವ್ ಪೇಟೆಗೆ ವರ್ಗಾಯಿಸಿ ತನಿಖೆಗೆ ಆದೇಶಿಸಿದ್ದಾರೆ..

ಇಂತಹ ಕೆಟ್ಟ ಕೀಳು ಬುದ್ದಿ ಇದ್ದರೆ ಮದುವೆಯಂತಹ ಸುಂದರ ಸಂಬಂಧಕ್ಕೆ ಮಸಿ ಬಳಿಯುವ ಕೆಲಸ ಯಾಕೆ ಬೇಕು.. ಮದುವೆಯಾಗದೇ ಸುಮ್ಮನೆ ಇದ್ದು ಒಂದು ಹೆಣ್ಣಿನ ಜೀವನವನ್ನಾದರೂ ಹಾಳು ಮಾಡದೇ ಇರಬಹುದಾಗಿತ್ತು.. ಹೆಣ್ಣಾಗಲಿ ಗಂಡಾಗಲಿ.. ಮತ್ತೊಬ್ಬರ ಜೀವನವನ್ನು ಹಾಳು ಮಾಡುವ ಹಕ್ಕು ಯಾರಿಗೂ ಇರದು.. ಆದರೆ ಮದುವೆಯಾದ ಕೂಡಲೇ ನಾನು ಏನು ಬೇಕಾದರೂ ಮಾಡಬಹುದೆಂದುಕೊಳ್ಳುವ ನೀಚ ಮನಸ್ಸುಗಳು ಬದಲಾಗುವವರೆಗೂ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ‌‌..

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...