ಹೌದು ಇಂದಿನ ಕಲಿಯುಗದಲ್ಲಿ ಯಾರಿಗೆ ಯಾರು ಇಲ್ಲ, ಕಷ್ಟದಲ್ಲಿರುವವರಿಗೆ ಸಹಾಯ ಮಾಡುವವರು ತುಂಬಾ ವಿರಳವಾಗಿದ್ದಾರೆ. ಆದರೆ ಇಲ್ಲೊಂದು ನೈಜ ಘಟನೆಯ ಸ್ಟೋರಿ ತಿಳಿದುಬಂದಿದ್ದು, ಈ ಲೇಖನದ ಮೂಲಕನಿಮ್ಮ ಮುಂದೆ ಹೇಳಲಿದ್ದೇವೆ ತಪ್ಪದೆ ಕೊನೆಯವರೆಗೂ ಓದಿ. ಹೌದು ಕಿರಣ್ ಎನ್ನುವ ಚೆನ್ನೈ ಯುವಕನೊಬ್ಬ, ನಮ್ಮ ಬೆಂಗಳೂರಿನಲ್ಲಿ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ, ಮತ್ತು ಒಂದು ದಿನ ಇದ್ದಕ್ಕಿದ್ದಂತೆ ಈತನ ತಾಯಿಗೆ ಆರೋಗ್ಯದಲ್ಲಿ ಏರುಪೇರಾಗಿ ಹುಷಾರಿಲ್ಲ ಎನ್ನುವ ಕಾಲ್ ಬಂದಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನುವ ಸುದ್ದಿ ಈತನ ಕಿವಿಗೆ ಬಿದ್ದಿದೆ.   

ತದನಂತರ ಗಡಿಬಿಡಿಯಲ್ಲಿ ಕಣ್ಣೀರು ಹಾಕುತ್ತಾ, ಚೆನ್ನೈ ನತ್ತ ಮುಖ ಮಾಡಿದ ಕಿರಣ್ ರೈಲನ್ನು ಹತ್ತುತ್ತಾನೆ. ಬಳಿಕ ಟ್ರೈನ್ ನಲ್ಲಿ ಕುಳಿತುಕೊಂಡು ಒಂದೇ ಸಮನೆ ಕಿರುಚಾಡಿ ತನ್ನ ತಾಯಿಯನ್ನು ನೆನೆದು ಕಣ್ಣೀರು ಹಾಕುತ್ತಿರುತ್ತಾನೆ. ಇದನ್ನು ನೋಡಿ ಪ್ರಯಾಣ ಮಾಡುತ್ತಿದ್ದ ಜನರೆಲ್ಲರೂ, ಈತನ ಜಾಗದಿಂದ ದೂರಸರಿದು ಸುಮ್ಮನೆ ಭಯದಿಂದ ನೋಡುತ್ತಿರುತ್ತಾರೆ  ಆದರೆ ಧೈರ್ಯದಿಂದ ಮುಂದೆ ಬಂದ ಒಬ್ಬ ಸುಂದರವಾದ ಹುಡುಗಿ, ಈತನ ಎದುರಿಗೆ ಬಂದು ಕುಳಿತು, ಯಾಕೆ ? ಏನಾಯ್ತು? ಯಾಕೆ ಅಳುತ್ತಿದ್ದೀರಿ ?ಎಂಬುದಾಗಿ ಪ್ರಶ್ನೆ ಮಾಡಿದ್ದಾಳೆ.      

ಆದರೆ ಕಿರಣ್ ಈಕೆಯ ಮಾತಿಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲವಂತೆ. ತದನಂತರ ಈಕೆ ‘ಎಲ್ಲರಿಗೂ ಕಷ್ಟಗಳು ಬಂದೇ ಬರುತ್ತವೆ, ಆದರೆ ಅದನ್ನು ಎದುರಿಸುವ ಶಕ್ತಿ ನಾವು ತೋರಿಸಬೇಕು. ಜೀವನದಲ್ಲಿ ತುಂಬಾ ಇಷ್ಟ ಪಟ್ಟ ವ್ಯಕ್ತಿಗಳು ದೂರಾದಾಗ, ಅವರ ನೆನಪಿನಲ್ಲಿ ಜೀವನ ಮಾಡಬೇಕು, ಎಂಬುದಾಗಿ ಸಮಾಧಾನ ಮಾತುಗಳನ್ನು ಆಡುತ್ತಾಳೆ. ಆದರೆ ಈಕೆ ಹೇಳಿದ ಯಾವ ಮಾತಿಗೂ ತಲೆಕೆಡಿಸಿಕೊಳ್ಳದ ಕಿರಣ ಸುಮ್ಮನೆ ಅಳುತ್ತಿರುತ್ತಾರೆ. ಕೊನೆಯಲ್ಲಿ ಈತನ ಸ್ಟಾಪ್ ಬಂದಿದ್ದು, ಈತ ರೈಲನಿಂದ ಕೆಳಗಿಳೆದು ಹೋಗುವ ಸಮಯದಲ್ಲಿ ಸುಂದರವಾದ ಹುಡುಗಿಗೆ,     

‘ನಿಮ್ಮ ಸ್ಟಾಪ್  ಎಲ್ಲಿ ಬರುತ್ತದೆ’ ಎಂಬುದಾಗಿ ಪ್ರಶ್ನೆ ಮಾಡುತ್ತಾನೆ. ಆ ಹುಡುಗಿ ನಗುತ್ತಾ ‘ನನ್ನ ಸ್ಟಾಪ್ ನೂರು ಕಿಲೋಮೀಟರ್ ಹಿಂದೆಯೇ ಹೋಗಿತ್ತು, ಆದರೆ ನಾನು ಇಲ್ಲಿಯವರೆಗೆ ನಿನ್ನನ್ನು ಸಮಾಧಾನ ಮಾಡಲು ಬಂದಿರುವೆ ಎಂದು ಹೇಳಿದಳಂತೆ.  ಈ ಮಾತನ್ನು ಕೇಳಿ ಕಿರಣ್ ಈಕೆಯ ಸಹಾಯ ಮಾಡುವ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡು, ಧನ್ಯವಾದ ತಿಳಿಸಿ, ಅಲ್ಲಿಂದ ಹೊರಟು ಹೋಗಿದ್ದಾನೆ. ಇಷ್ಟೇ ಅಲ್ವಾ ಸ್ನೇಹಿತರೆ, ಕಷ್ಟದಲ್ಲಿರುವವರಿಗೆ ಸಮಾಧಾನದ ಮಾತುಗಳನ್ನು ಆಡಿ ಜೊತೆಗೆ ನಿಲ್ಲುವುದು ಎಂದರೆ. ಹೌದು ಈ ಮೇಲಿನ ಮಾಹಿತಿ ನಿಮಗೆ ಇಷ್ಟವಾದಲ್ಲಿ, ತಪ್ಪದೇ ಶೇರ್ ಮಾಡಿ, ಕಮೆಂಟ್ ಮಾಡಿ, ಧನ್ಯವಾದಗಳು..

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •