ರೈಲಿನಲ್ಲಿ ಬಂಗಾರದ ಆಭರಣಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ತಮಿಳುನಾಡು ಮೂಲದ ಇಬ್ಬರನ್ನು ದಂಡುರೈಲ್ವೆ ಪೊಲೀಸ್ ತಂಡ ಬಂಧಿಸಿ 24.22 ಲಕ್ಷ ರೂ. ಮೌಲ್ಯದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ತಮಿಳುನಾಡಿನ ತಿರುಚಿಯ ವೆಂಕಟೇಶ್ (50) ಮತ್ತು ಸುಮಾ (30) ಬಂಧಿತ ಆರೋಪಿಗಳು. ನಗರದ ದಂಡುರೈಲ್ವೆ ಪೊಲೀಸ್ ವೃತ್ತದ ಸರಹದ್ದಿನಲ್ಲಿ ಸಂಚರಿಸುವ ರೈಲು ಗಾಡಿಗಳಲ್ಲಿ ಬಂಗಾರದ ಒಡವೆಗಳು ಕಳ್ಳ ಸಾಗಣೆ ನಡೆಯುತ್ತಿದ್ದ ಬಗ್ಗೆ ಮಾಹಿತಿ ಸಂಗ್ರಹಿಸಿದ ಪೊಲೀಸರು ಆರೋಪಿಗಳ ಪತ್ತೆ ವಿಶೇಷ ತಂಡ ರಚಿಸಿದ್ದರು.

ದಂಡು ರೈಲ್ವೆ ಪೊಲೀಸ್ ಅಧೀಕ್ಷಕರಾದ ಚೈತ್ರಾ ಅವರ ಸಲಹೆ ಮೇರೆಗೆ ಸಿಬ್ಬಂದಿಗಳನ್ನೊಳಗೊಂಡ ತಂಡ ರಚಿಸಿದ್ದು , ಈ ತಂಡ ಕಾರ್ಯಪ್ರವೃತ್ತರಾಗಿ ಈ ವ್ಯಾಪ್ತಿಯಲ್ಲಿ ಸಂಚರಿಸುವ ರೈಲು ಗಾಡಿಗಳ ಬಗ್ಗೆ ನಿಗಾ ವಹಿಸಿದ್ದಾಗ ನಿನ್ನೆ ಮುಂಜಾನೆ 5.30ರಲ್ಲಿ ನಿಲ್ದಾಣಕ್ಕೆ ಬಂದ ಮೈಲಾಡ ತೊರೈ ಎಕ್ಸ್‍ಪ್ರೆಸ್ ರೈಲಿನಿಂದ ಇಳಿದ ಇಬ್ಬರು ವ್ಯಕ್ತಿಗಳು ಬ್ಯಾಗ್‍ನೊಂದಿಗೆ ಅನುಮಾನಾಸ್ಪದವಾಗಿ ಹೋಗುತ್ತಿದ್ದುದನ್ನು ಕಂಡು ಅವರನ್ನು ತಡೆದು ಪರಿಶೀಲಿಸಿದ್ದಾರೆ. ಈ ವೇಳೆ ಬ್ಯಾಗ್‍ಗಳಲ್ಲಿ ದಾಖಲೆಗಳಿಲ್ಲದ 2ಕೆಜಿ 300 ಗ್ರಾಂ ತೂಕದ ಬಂಗಾರದ ಒಡವೆಗಳು ಇರುವುದು ಕಂಡುಬಂದ ಹಿನ್ನೆಲೆಯಲ್ಲಿ ಇವರನ್ನು ಠಾಣೆಗೆ ಕರೆದೊಯ್ದು ತೀವ್ರ ವಿಚಾರಣೆ ನಡೆಸಿದಾಗ ಆಭರಣ ಕಳ್ಳಸಾಗಣೆ ಮಾಡುತ್ತಿದ್ದುದು ಗೋಚರಿಸಿದೆ.

ರೈಲ್ವೆ ಪೊಲೀಸ್ ಉಪ ಅಧೀಕ್ಷಕ ಶಾಮಣ್ಣ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಲಕ್ಷ್ಮೀನಾರಾಯಣ್ ನೇತೃತ್ವದಲ್ಲಿ ಸಿಬ್ಬಂದಿಗಳನ್ನೊಳಗೊಂಡ ತಂಡ ಈ ಕಾರ್ಯಾಚರಣೆ ನಡೆಸಿದ್ದು , ಇವರ ಕಾರ್ಯವೈಖರಿಯನ್ನು ರೈಲ್ವೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಮರ್‍ಕುಮಾರ್‍ಪಾಂಡೆ ಶ್ಲಾಘಿಸಿದ್ದಾರೆ.
 

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
DMCA.com Protection Status
error: Fuck you !!