ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಗ್ಯಾಸ್ ಸಿಲಿಂಡರ್ ಬಳಕೆ ಮಾಡದೆ ಇರುವವರನ್ನ ಹುಡುಕುವುದು ಬಹಳ ಕಷ್ಟ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರ ಮನೆಯಲ್ಲಿ ಗ್ಯಾಸ್ ಬಳಕೆ ಮಾಡುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ದೇಶದಲ್ಲಿ ಯಾವಾಗ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಜಾರಿಗೆ ಬಂದಿತೋ ಅಂದಿನಿಂದ ದೇಶದ ಪ್ರತಿಯೊಬ್ಬ ಬಡವರ ಮನೆಯಲ್ಲಿ ಗ್ಯಾಸ್ ಬಳಕೆ ಮಾಡುತ್ತಿದ್ದಾರೆ ಎಂದು ಹೇಳಬಹುದು. ಇನ್ನು ಮೊದಲು ಪ್ರತಿ ತಿಂಗಳು ಗ್ಯಾಸ್ ಸಿಲಿಂಡರ್ ಬುಕ್ ಮಾಡುವವರಿಗೆ ಕೇಂದ್ರ ಸರ್ಕಾರ ಸಬ್ಸಿಡಿ ಹಣವನ್ನ ಬಿಡುಗಡೆ ಮಾಡುತ್ತಿತ್ತು, ಆದರೆ ಕಳೆದ ಐದು ತಿಂಗಳಿಂದ ಯಾವುದೇ ರೀತಿಯ ಸಬ್ಸಿಡಿ ಹಣವನ್ನ ಕೊಡಲಾಗುತ್ತಿಲ್ಲ ಮತ್ತು ಸಬ್ಸಿಡಿ ಹಣವನ್ನ ರದ್ದು ಮಾಡಲಿದೆ ಎಂದು ಕೇಂದ್ರ ಸರ್ಕಾರ ಘೋಷಣೆಯನ್ನ ಕೂಡ ಮಾಡಿದೆ.

ಇನ್ನು ಈಗ ದೇಶದಲ್ಲಿ ಗ್ಯಾಸ್ ಸಿಲಿಂಡರ್ ಬಳಕೆ ಮಾಡುವ ಎಲ್ಲಾ ಜನರಿಗೆ ಬಂಪರ್ ಗುಡ್ ನ್ಯೂಸ್ ಬಂದಿದ್ದು ಈಗ 500 ರೂಪಾಯಿಯನ್ನ ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ. ಹಾಗಾದರೆ 500 ರೂಪಾಯಿ ಹೇಗೆ ಸಿಗುತ್ತದೆ ಮತ್ತು ಈ ಹಣವನ್ನ ಪಡೆದುಕೊಳ್ಳುವುದು ಹೇಗೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ದೇಶದಲ್ಲಿ ಹಲವು ರೀತಿಯ ಗ್ಯಾಸ್ ಕಂಪನಿಗಳು ಇದ್ದು ಹಲವು ಜನರು ಹಲವು ಕಂಪನಿಯ ಗ್ಯಾಸ್ ಸಿಲಿಂಡರ್ ಬಳಕೆ ಮಾಡುತ್ತಿದ್ದಾರೆ ಎಂದು ಹೇಳಬಹುದು, ಹೌದು ಎಚ್ ಪಿ ಗ್ಯಾಸ್, ಭರತ್ ಗ್ಯಾಸ್, ಇಂಡಿಯನ್ ಗ್ಯಾಸ್ ಹೀಗೆ ಹಲವು ರೀತಿಯ ಗ್ಯಾಸ್ ಸಿಲಿಂಡರ್ ಗಳನ್ನ ಜನರು ಬಳಕೆ ಮಾಡುತ್ತಿದ್ದಾರೆ.

Gas-cylinder-offer

ಇನ್ನು ನೀವು ಯಾವುದೇ ಕಂಪನಿಯ ಗ್ಯಾಸ್ ಸಿಲಿಂಡರ್ ಬುಕ್ ಮಾಡಿದರು ಕೂಡ ನಿಮಗೆ 500 ರೂಪಾಯಿಗಳು ಉಚಿತವಾಗಿ ಸಿಗುತ್ತದೆ. ವಿಶ್ವದ ಪ್ರತಿಷ್ಠಿತ ಆನ್ಲೈನ್ ಪೇಮೆಂಟ್ ಕಂಪನಿಯಾಗಿರುವ ಪೆಟಿಎಂ ಕಂಪನಿಯು ತನ್ನ ಅಪ್ಲಿಕೇಶನ್ ನಲ್ಲಿ ಗ್ಯಾಸ್ ಸಿಲಿಂಡರ್ ಬುಕ್ ಮಾಡುವ ಪ್ರತಿಯೊಬ್ಬ ಗ್ರಾಹಕನಿಗೆ 500 ರೂಪಾಯಿಗಳ ಕ್ಯಾಶ್ ಬ್ಯಾಕ್ ನೀಡಲು ಮುಂದಾಗಿದೆ. ನೀವು ನಿಮ್ಮ ಮೊಬೈಲ್ ನಲ್ಲಿ ಪೆಟಿಎಂ ಅಪ್ಲಿಕೇಶನ್ ಬಳಕೆ ಮಾಡಿಕೊಂಡು ಆ ಅಪ್ಲಿಕೇಶನ್ ನಲ್ಲಿ ರಿಚಾರ್ಜ್ ಮತ್ತು ಬಿಲ್ ಪೆ ವಿಭಾಗವನ್ನ ಆಯ್ಕೆ ಮಾಡಬೇಕು, ಇನ್ನು ವಿಭಾಗದಲ್ಲಿ ಇರುವ ಬುಕ್ ಸಿಲಿಂಡರ್ ಆಯ್ಕೆ ಮಾಡಿಕೊಂಡು ನಿಮ್ಮ ಬಳಸುವ ಗ್ಯಾಸ್ ಸಿಲಿಂಡರ್ ಏಜೆನ್ಸಿಯನ್ನ ಆಯ್ಕೆ ಮಾಡಬೇಕು.

ಇನ್ನು ನೀವು ಗ್ಯಾಸ್ ಸಿಲಿಂಡರ್ ಏಜೆನ್ಸಿಯನ್ನ ಆಯ್ಕೆ ಮಾಡಿದ ನಂತರ ಎಲ್ಲಾ ವಿವರಗಳು ಬರುತ್ತದೆ, ಇನ್ನು ಈ ವಿವರಗಳು ಬಂದ ನಂತರ ಅಲ್ಲಿ ಇರುವ ಆಫರ್ ಗಳ ಮೇಲೆ ಕ್ಲಿಕ್ ಮಾಡಬೇಕು ಮತ್ತು ಮೊದಲ ಎಲ್ಪಿಜಿ ಆಯ್ಕೆಯನ್ನ ಸೆಲೆಕ್ಟ್ ಮಾಡಬೇಕು, ಅಂದರೆ FIRSTLPG ಯನ್ನು ಆಯ್ಕೆ ಮಾಡಿಕೊಂಡು ಬುಕ್ ಸಿಲಿಂಡರ್ ಮೇಲೆ ಕ್ಲಿಕ್ ಮಾಡಿದರೆ ನೀವು 500 ರೂಪಾಯಿಗಳ ಕ್ಯಾಶ್ ಬ್ಯಾಕ್ ಪಡೆಯಬಹುದಾಗಿದೆ. ಇನ್ನು ಜನರು ಗಮನದಲ್ಲಿ ಇರಿಸಿಕೊಳ್ಳಬೇಕಾದ ವಿಷಯ ಏನು ಅಂದರೆ, ಈ ಆಫರ್ ಮೊದಲ ಭಾರಿ ಪೆಟಿಎಂ ಮೂಲಕ ಗ್ಯಾಸ್ ಬುಕ್ ಮಾಡುವವರಿಗೆ ಈ ಆಫರ್ ಸಿಗುತ್ತದೆ ಮತ್ತು ಎರಡನೆಯ ಭಾರಿ ಈ ಆಫರ್ ಸಿಗುವುದಿಲ್ಲ.

ಇನ್ನು ಪೆಟಿಎಂ ಕಂಪನಿ ತಮ್ಮ ಅಪ್ಲಿಕೇಶನ್ ಅನ್ನು ಹೆಚ್ಚು ಹೆಚ್ಚು ಜನರು ಬಳಕೆ ಮಾಡಲಿ ಹಾಗು ಹೆಚ್ಚು ಹೆಚ್ಚು ಗ್ಯಾಸ್ ಸಿಲಿಂಡರ್ ಅನ್ನು ಪೆಟಿಎಂ ಮೂಲಕ ಬುಕ್ ಮಾಡಲಿ ಅನ್ನುವ ಮಹತ್ವವಾದ ಉದ್ದೇಶದಿಂದ ಈ ಆಫರ್ ಜಾರಿಗೆ ತಂದಿದೆ. ಸ್ನೇಹಿತರೆ ಈ ಮಾಹಿತಿಯನ್ನ ದೇಶದಲ್ಲಿ ಎಲ್ಪಿಜಿ ಗ್ಯಾಸ್ ಬಳಕೆ ಮಾಡುವ ಪ್ರತಿಯೊಬ್ಬರಿಗೂ ತಲುಪಿಸಿ ಮತ್ತು ಈ ಆಫರ್ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
DMCA.com Protection Status
error: Fuck you !!