ನಮಸ್ತೆ ಸ್ನೇಹಿತರೆ, ಪ್ರಪಂಚದಲ್ಲಿ ವಾಸ ಮಾಡುತ್ತಿರುವವರೆಲ್ಲಾ ಕೆಟ್ಟವರಲ್ಲ.. ಹಾಗೆಯೇ ಎಲ್ಲರೂ ಒಳ್ಳೆಯವರು ಕೂಡ ಆಗಿರಲು ಸಾಧ್ಯವಿಲ್ಲ. ತೆಲಂಗಾಣ ರಾಜ್ಯದ ಹೈದರಾಬಾದ್ ಸಿಟಿಯಲ್ಲಿ ಮಹೇಶ್ ಎಂಬ ವ್ಯಕ್ತಿ ಮನೆ ಮನೆಗೆ ಹೋಗಿ ಗ್ಯಾಸ್ ಸಿಲಿಂಡರ್ ಡೆಲಿವರಿ ಮಡುವ ಕೆಲಸ ಮಾಡುತ್ತಾ ಜೀವನ ನಡೆಸುತ್ತಿದ್ದಾನೆ.. ಇನ್ನೂ ಮಹೇಶ್ ಅವರಿಗೆ ಮದುವೆಯಾಗಿದ್ದು ಇಬ್ಬರು ಮಕ್ಕಳು ಕೂಡ ಇದ್ದಾರೆ. ಪ್ರತಿದಿನ ಮನೆ ಮನೆಗೆ ಹೋಗಿ ಸಿಲಿಂಡರ್ ಕೊಟ್ಟು ಅದರಿಂದ ಬರುತ್ತಿದ್ದ ದುಡ್ಡನಿಂದಲೇ ಮಹೇಶ್ ತನ್ನ ಹೆಂಡತಿ, ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದ.. ಮಹೇಶ್ ಡೆಲಿವರಿ ಮಾಡಲು ಮನೆಯ ಎಷ್ಟೇ ಮಹಡಿ ಇದ್ದರೂ ಕೂಡ ಒಂದು ರೂಪಾಯಿ ಹೆಚ್ಚಾಗಿ ಕೇಳದೆ ತನ್ನ ಹೆಗಲ ಮೇಲೆ ಸಿಲಿಂಡರ್ ಎತ್ತಿಕೊಂಡು ಹೋಗಿ ಡೆಲಿವರಿ ಕೊಟ್ಟು ಬರುತ್ತಿದ್ದ.

gas-cylinder-delivery

ಒಂದು ದಿನ ಮಹೇಶ್ ಬೆಳಗ್ಗೆ ಎದ್ದೇಳುವುದು ಲೇಟ್ ಆಗಿತ್ತು.. ಅಂದು ಅತಿ ಹೆಚ್ಚು ಸಿಲಿಂಡರ್ ಗಳನ್ನು ಡೆಲಿವರಿ ಮಾಡಬೇಕಾಗಿತ್ತು. ಈಗಾಗಿ ಊಟ ಮಾಡದೇ ಕೆಲಸಕ್ಕೆ ಬರುತ್ತಾನೆ‌.. ಆಟೋದಲ್ಲಿ ಸಿಲಿಂಡರ್ ಗಳನ್ನು ತುಂಬಿಸಿಕೊಂಡು ಒಂದೊಂದಾಗಿ ಮನೆ ಮನೆಗೆ ಡೆಲಿವರಿ ಮಾಡುತ್ತಿದ್ದ. ಆಗ ಸುಜಾತ ಎಂಬ ಮಹಿಳೆಗೆ ಸಿಲಿಂಡರ್ ಡೆಲಿವರಿ ಮಾಡಬೇಕಾಗಿತ್ತು ಆದರೆ ಅವರ ಮನೆ ನಾಲ್ಕನೇ ಮಹಡಿಯಲ್ಲಿತ್ತು.. ಇನ್ನೂ ಮಹೇಶ್ ಅವರು ಬೆಳಗ್ಗೆ ಊಟ ಮಾಡದೇ ಇದ್ದ ಕಾರಣ ಸುಸ್ತಾಗಲು ಪ್ರಾರಂಭಿಸುತ್ತದೆ. ಆದರೂ ಪರವಾಗಿಲ್ಲ ಈ ಒಬ್ಬ ಮಹಿಳೆಯ ಮನೆಗೆ ಡೆಲಿವರಿ ಕೊಟ್ಟು ನಂತರ ಹೋಟೆಲ್ ನಲ್ಲಿ ಊಟ ಮಾಡೋಣ ಎಂದು ಹೆಗಲ ಮೇಲೆ ಸಿಲಿಂಡರ್ ಹಾಕಿಕೊಂಡು ಸುಜಾತ ಅವರ ಮನೆಗೆ ಬಂದು ಡೆಲಿವರಿ ಕೊಡುತ್ತಾನೆ..

gas-cylinder-delivery

ನಂತರ ಮಹೇಶ್ ಅವರು ಸುಜಾತ ಅವರಿಗೆ! ತಾಯಿ ಮಹಡಿ ಅತ್ತಿ ಬಂದ ಕಾರಣ ತುಂಬಾ ಬಾಯಾರಿಕೆ ಆಗಿದೆ ತಲೆ ಸುತ್ತುತ್ತಿದೆ ಸ್ವಲ್ಪ ನೀರು ಕೊಡಿ ಎಂದು ಮಹೇಶ್ ಕೇಳುತ್ತಾರೆ.. ಮಹೇಶ್ ನೀರು ಕೇಳಿದ್ದು ನೋಡಿ ಸುಜಾತಾ ಅವರು ಕೋಪ ಮಾಡಿಕೊಂಡು ನಮ್ಮ ಮನೆಯಲ್ಲಿ ನೀರು ಇಲ್ಲಾ.. ಮೊದಲೇ ಈಗ ಎಲ್ಲಾ ಕಡೆ ಚೀನಾ ಖಾಯಿಲೆ ಇದೆ ನಿನಗೆ ನೀರು ಕೊಡುವುದಿಲ್ಲ, ತಗೋ ಸಿಲಿಂಡರ್ ಹಣ ಎಂದು ಬಾಯಿಗೆ ಬಂದ ಹಾಗೆ ಬೈದು ಕಳಿಸುತ್ತಾರೆ.. ಇನ್ನೂ ಸುಜಾತ ಅವರು ಬೈದದ್ದು ನೋಡಿ ಮಹೇಶ್ ಅವರಿಗೆ ತುಂಬ ಬೇಸರವಾಗುತ್ತದೆ.. ನಂತರ ಮಹಡಿಯಿಂದ ಕೆಳಗಿಳಿದು ಮುಂದಿನ ಡೆಲಿವರಿ ಯಾವ ಮನೆಗೆ ನೀಡಬೇಕೆಂದು ಲೀಸ್ಟ್ ನಲ್ಲಿ ಚೆಕ್ ಮಾಡಿದಾಗ ಅದೇ ಬಿಲ್ಡಿಂಗ್ ಸುನಿತಾ ಎಂಬ ಮನೆಗೆ ಸಿಲಿಂಡರ್ ಡೆಲಿವರಿ ಕೊಡಬೇಕಾಗಿತ್ತು. ಹಾಗಾಗಿ ಆಟೋದಲ್ಲಿದ್ದ ಮತ್ತೊಂದು ಸಿಲಿಂಡರ್ ಎತ್ತಿಕೊಂಡು ಸುನಿತಾ ಅವರ ಮನೆ ಬಳಿ ಹೋಗಿ ಸಿಲಿಂಡರ್ ಬಂದಿದೆ ಎಂದು ಹೇಳುತ್ತಾನೆ..

ಆಗ ಸುನಿತಾ ಅವರು ಮನೆಯಿಂದ ಓಡಿ ಬಂದು ಸಿಲಿಂಡರ್ ಕೆಳಗಿಳಿಸಿ, ನೀರು ಕುಡಿಯಿರಿ ಎಂದು ಮಹೇಶ್ ಗೆ ಕೇಳದೆ ನೀರು ತಂದು ಕೊಡುತ್ತಾರೆ. ನಂತರ ಮಹೇಶ್ ಸಿಲಿಂಡರ್ ಹೊಳಗೆ ಎತ್ತಿ ಇಡುತ್ತೇನೆ ಎಂದಾಗ ಸುನಿತಾ ಅವರು ಬೇಡ ನಾನೆ ಎತ್ತಿಕೊಳ್ಳುತ್ತೇನೆ ಎಂದು ಸಿಲಿಂಡರ್ ಹಣಕ್ಕಿಂತ 50 ರೂಪಾಯಿ ಹೆಚ್ಚಿಗೆ ಆ ವ್ಯಕ್ತಿಗೆ ಕೊಡುತ್ತಾರೆ.. ಇನ್ನೂ ಸುನಿತಾ ಅವರು ನಡೆದುಕೊಂಡ ರೀತಿ ನೋಡಿ ಮಹೇಶ್ ಅವರು ಭಾವುಕರಾಗುತ್ತಾರೆ. ಮೇಲಿನ ಮಹಡಿಯವರು ನೀರು ಕೇಳಿದಕ್ಕೆ ಬೈದು ಕಳುಹಿಸಿದರು ಆದರೆ ನೀವು ಕೇಳದಯೆ ನೀರನ್ನು ತಂದು ಕೊಟ್ಟಿದ್ದೀರಾ ನಿಮ್ಮದು ಒಳ್ಳೆಯ ಮನಸ್ಸು ಎಂದು ಹೇಳಿ ಹೊರಟು ಹೋಗುತ್ತಾನೆ.. ಸ್ನೇಹಿತರೆ ಮನೆ ಮನೆಗೆ ಸಿಲಿಂಡರ್ ಕೊಡುವ ವ್ಯಕ್ತಿಗಳು ಸಹ ಮನುಷ್ಯರೇ. ಅವರನ್ನು ಒಳ್ಳೆಯ ರೀತಿಯಲ್ಲಿ ಮಾತನಾಡಿಸಬೇಕು.. ಅವರಿಗೆ ಏಜೆನ್ಸಿಗಳಿಂದ ಕೊಡುವ ಸಂಬಳ ತುಂಬಾ ಕಡಿಮೆ, ಈಗಾಗಿ ಸಿಲಿಂಡರ್ ಹಾಕುವವರು ಬಂದಾಗ ಹಣ ಕೊಡದೇ ಇದ್ದರೂ ಪರವಾಗಿಲ್ಲ ಒಂದು ಗ್ಲಾಸ್ ನೀರು ಕೊಡಿ.. ಸ್ನೇಹಿತರೆ ಈ ಘಟನೆಯ ಬಗ್ಗೆ ನೀವು ಏನು ಹೇಳಲು ಇಷ್ಟಪಡುತ್ತೀರಾ ಎಂಬುದನ್ನು ತಿಳಿಸಿ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •