ನಿಮಗೆ ಗೊತ್ತಿಲ್ಲದ ಬೆಳ್ಳುಳ್ಳಿ ಬಗ್ಗೆ ಆರೋಗ್ಯಕರ ಪ್ರಯೋಜನಗಳು…

Health/ಆರೋಗ್ಯ Home Kannada News/ಸುದ್ದಿಗಳು

ನಾವು ಪ್ರತಿ ದಿನ ಮನೆಗಳಲ್ಲಿ ಬಳಸುವಂತಹ ವಸ್ತುಗಳಲ್ಲಿ ಅನೇಕ ರೀತಿಯ ಔಷಧಿ ಗುಣಗಳು ಇರುತ್ತವೆ. ನಾವು ಅವುಗಳ ಬಗ್ಗೆ ತಿಳಿದಿರುವುದಿಲ್ಲ, ಆದರೂ ನಾವು ಅವುಗಳನ್ನು ಪ್ರತಿದಿನ ಆಹಾರವನ್ನು ಸಿದ್ಧಪಡಿಸುವಾಗ ಉಪಯೋಗಿಸುತ್ತೇವೆ ಮತ್ತು ಅವನ್ನು ನಾವೆಲ್ಲರೂ ಕೂಡ ಸೇವಿಸುತ್ತೇವೆ. ಹೌದು ಸ್ನೇಹಿತರೆ ಹಾಗಾದರೆ ಅಂತಹ ಔಷಧಿ ಗುಣವಿರುವ ವಸ್ತುವಿನ ಬಗ್ಗೆ ಇಂದು ತಿಳಿದುಕೊಳ್ಳೋಣ. ನೀವು ಈ ವಸ್ತುವನ್ನು ಪ್ರತಿ ದಿನ ಅಡುಗೆ ಮನೆಯಲ್ಲಿ ಬಳಸಿಯೆ ಬಳಸಿರುತ್ತೀರಾ, ಅದ್ಯಾವುದೆಂದರೆ ಅದುವೆ ಬೆಳ್ಳುಳ್ಳಿ.

ಹೌದು ಸ್ನೇಹಿತರೆ ಈ ಬೆಳ್ಳುಳ್ಳಿಯು ಅನೇಕ ವರ್ಷಗಳಿಂದ ನಮ್ಮ ಪೂರ್ವಜರಿಂದಲೂ ಕೂಡ ಇದನ್ನು ಪ್ರಮುಖ ಸಾಂಬಾರ ಪದಾರ್ಥವಾಗಿ ನಾವು ಬಳಸುತ್ತಿದ್ದೇವೆ. ಹಾಗೆಯೆ ಸ್ನೇಹಿತರೆ ಅಜ್ಜಿ ತಲೆಯ ಮೇಲೆ ಕೂತಿದ್ದರೆ ನೂರು ಮೊಮ್ಮಕ್ಕಳು ಎಂಬ ಗಾದೆಯೂ ಕೂಡ ಈ ಬೆಳ್ಳುಳ್ಳಿಯ ಮೇಲೆ ಇದೆ. ಈ ಬೆಳ್ಳುಳ್ಳಿಯಲ್ಲಿ ಅನೇಕ ರೀತಿಯ ಔಷಧಿ ಗುಣಗಳು ಅಡಗಿವೆ. ಅದೆ ರೀತಿ ಈ ಬೆಳ್ಳುಳ್ಳಿಯನ್ನು ಪ್ರತಿ ದಿನ ನಿಯಮಬದ್ಧವಾಗಿ ಸೇವಿಸುವುದರಿಂದ ಅನೇಕ ರೀತಿಯ ತೊಂದರೆಗಳಿಂದ ನಾವು ಪಾರಾಗಬಹುದು. ಈ ಬೆಳ್ಳುಳ್ಳಿಯು ಕರುಳಿನಲ್ಲಿರುವ ಗಂಟು ಮೂಲವ್ಯಾಧಿ ಮಲಬದ್ಧತೆ ಕಿವಿ ನೋವು ಹಸಿವು ಕೊಲೆಸ್ಟ್ರಾಲ್ ಹಾಗೆ ನಮ್ಮ ದೇಹದಲ್ಲಿ ಇರುವಂತಹ ಕೆಟ್ಟ ಪದಾರ್ಥಗಳನ್ನು ಗುದದ್ವಾರದ ಮೂಲಕ ಹೊರಹಾಕಲು ಇದು ತುಂಬಾ ಸಹಕಾರಿಯಾಗುತ್ತದೆ.

ಹಾಗೆಯೆ ಈ ಬೆಳ್ಳುಳ್ಳಿಯನ್ನು ಸುಟ್ಟು ತಿನ್ನುವುದರಿಂದ ಕ್ಯಾನ್ಸರ್ ಎಂಬ ಮಹಾಮಾರಿಯಿಂದ ಕೂಡ ತಪ್ಪಿಸಿಕೊಳ್ಳಬಹುದು. ಈ ಬೆಳ್ಳುಳ್ಳಿಯನ್ನು ಪ್ರತಿದಿನ ನಾವು ಸೇವಿಸುವುದರಿಂದ ನಮ್ಮ ದೇಹದಲ್ಲಿ ಚಯಾಪಚಯ ಕ್ರಿಯೆಯೂ ಸರಾಗವಾಗಿ ನಡೆದು ನಮ್ಮ ದೇಹವು ಆರೋಗ್ಯವಾಗಿರಲು ಸಹಕರಿಸುತ್ತದೆ. ಹೆಚ್ಚು ಬ್ಲಡ್ ಪ್ರೆಶರ್ ಇರುವಂತಹ ವ್ಯಕ್ತಿಗಳು ಬೆಳ್ಳುಳ್ಳಿಯನ್ನು ತಿನ್ನುವುದರಿಂದ ಅವರ ದೇಹದಲ್ಲಿರುವ ರಕ್ತ ಪ್ರಸರಣವನ್ನು ಈ ಬೆಳ್ಳುಳ್ಳಿಯು ನಿವಾರಿಸುತ್ತದೆ. ಹಾಗೆ ಶ್ವಾಸಕೋಶದ ಸಮಸ್ಯೆಗಳಾದ ಅಸ್ತಮಾ ಕೆಮ್ಮು ಇನ್ನೂ ಮುಂತಾದ ರೋಗಗಳನ್ನು ಈ ಬೆಳ್ಳುಳ್ಳಿಯು ನಿವಾರಿಸುತ್ತದೆ. ಈ ಬೆಳ್ಳುಳ್ಳಿಯನ್ನು ನಾವು ಪ್ರತಿದಿನ ಅಡುಗೆಯಲ್ಲಾಗಲಿ ಅಥವಾ ಹಾಗೆ ಹಸಿ ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ನಮ್ಮ ದೇಹವು ಅನೇಕ ರೋಗ ಲಕ್ಷಣಗಳಿಂದ ಪಾರಾಗುತ್ತದೆ.

ಹಾಗೆಯೇ ನಮ್ಮ ದೇಹದಲ್ಲಿನ ಚರ್ಮರೋಗಗಳಲ್ಲಿ ಫಂಗಸ್ ಹುಳುಕಡ್ಡಿ ಇಂತಹ ಮುಂತಾದ ಚರ್ಮ ರೋಗಗಳಿಗೆ ಈ ಬೆಳ್ಳುಳ್ಳಿಯನ್ನು ಆ ಜಾಗದಲ್ಲಿ ಹಚ್ಚುವುದರಿಂದ, ಈ ಚರ್ಮರೋಗಗಳು ಕೂಡ ನಿವಾರಣೆಯಾಗುತ್ತವೆ.ಹಾಗೆ ಈ ಬೆಳ್ಳುಳ್ಳಿಯ ಹಸಿವನ್ನೂ ಕೂಡಾ ಹೆಚ್ಚಿಸುವಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತದೆ. ಏಕೆಂದರೆ ನಾವು ಊಟವಾದ ನಂತರ ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ನಾವು ತಿಂದ ಆಹಾರವು ಒಂದು ಗಂಟೆಯಲ್ಲಿ ಅರಗೆ ನಮಗೆ ಮತ್ತೆ ಹೊಟ್ಟೆ ಹಸಿವು ಆಗುತ್ತದೆ. ನೋಡಿದ್ರಲ್ಲ ಸ್ನೇಹಿತರೇ ನಾವು ಪ್ರತಿ ದಿನ ನಿಯಮಬದ್ಧವಾಗಿ ಬೆಳ್ಳುಳ್ಳಿಯನ್ನು ಉಪಯೋಗಿಸುವುದರಿಂದ ನಮ್ಮ ದೇಹಕ್ಕಾಗುವ ಪ್ರಯೋಜನಗಳು ಇವು. ಈ ಆಯುರ್ವೇದ ಔಷಧಿ ಗುಣವುಳ್ಳ ಬೆಳ್ಳುಳ್ಳಿಯನ್ನು ಉಪಯೋಗಿಸುವ ಮುನ್ನ ಒಮ್ಮೆ ಡಾಕ್ಟರ್ ಸಲಹೆ ಪಡೆಯುವುದು ಉತ್ತಮ ಧನ್ಯವಾದಗಳು.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...