ಕೊರೊನಾ ಎರಡನೇ ಅಲೆ ಭೀತಿ ಎಲ್ಲೆಡೆ ಶುರುವಾಗಿದ್ದು, ನಟ ನಟಿಯರು ಕೊವಿಡ್ ಸೋಂಕಿಗೆ ಒಳಗಾಗಿದ್ದಾರೆ. ಈಗ ಈ ಪಟ್ಟಿಗೆ ನಟಿ ಅನು ಪ್ರಭಾಕರ್ ಕೂಡ ಸೇರಿದ್ದಾರೆ. ಇಂದು ಈ ಕುರಿತು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿವರ ಹಂಚಿಕೊಂಡಿರುವ ಅನು ಪ್ರಭಾಕರ್, ತಾನು ಕೊವಿಡ್ ಪಾಸಿಟಿವ್ ಆಗಿದ್ದು, ಎಲ್ಲ ತರಹದ ಮುಂಜಾಗ್ರತೆ ತೆಗೆದುಕೊಂಡಿದ್ದರೂ ಕೊರೊನಾಗೆ ತುತ್ತಾಗಿರುವುದಾಗಿ ಹೇಳಿದ್ದಾರೆ.

ಕುಟುಂಬದಲ್ಲಿ ಬೇರೆಲ್ಲ ಸದಸ್ಯರಿಗೆ ಕೊವಿಡ್‌ ನೆಗೆಟಿವ್ ವರದಿ ಬಂದಿದ್ದು, ತಾನು ಡಾಕ್ಟರ್‌ಗಳ ಸಲಹೆ ಪಡೆದುಕೊಂಡು ಮನೆಯಲ್ಲೇ ಸೆಲ್ಫ್ ಐಸೋಲೇಟ್ ಆಗಿರುವುದಾಗಿ ತಿಳಿಸಿದ್ದಾರೆ. ನನ್ನ ಸಂಪರ್ಕದಲ್ಲಿ ಬಂದಿರುವವರೆಲ್ಲರೂ ಟೆಸ್ಟ್ ಮಾಡಿಸಿಕೊಳ್ಳಿ, ಹಾಗೇ ಕೊರೊನಾ ಎರಡನೇ ಅಲೆಯನ್ನು ಹಗುರವಾಗಿ ತೆಗೆದುಕೊಳ್ಳಬೇಡಿ ಎಂದು ತಿಳಿಸುವ ಮೂಲಕ ಜಾಗರೂಕರಾಗಿರಿ ಎಂದು ತಿಳಿಸಿದ್ದಾರೆ.

ಆದರೆ, ವರದಿ ತಡವಾಗಿ ಬಂದಿದ್ದರಿಂದ ಅನು ಪ್ರಭಾಕರ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಕೊರೊನಾ ಟೆಸ್ಟ್ ಮಾಡಿಸಿ ಮೂರು ದಿನ ಕಳೆದರೂ ವರದಿ ಬಂದಿರಲಿಲ್ಲ. ಹೀಗಾಗಿ ಅನುಪ್ರಭಾಕರ್ ಸಿಟ್ಟಾಗಿದ್ದರು. ಇತ್ತೀಚೆಗಷ್ಟೇ, ನಟಿ ಸಂಜನಾ ಗಲ್ರಾನಿ ಕೊರೊನಾ ಸೋಂಕಿಗೆ ತುತ್ತಾಗಿರುವುದನ್ನು ಹೇಳಿಕೊಂಡಿದ್ದರು. ಈ ಮಧ್ಯೆ ನಿರ್ದೇಶಕ, ಗುರುಪ್ರಸಾದ್ ಒಂದು ವಿಡಿಯೋ ಹೊರಹಾಕಿ ಸಂಚಲನ ಮೂಡಿಸಿದ್ದಾರೆ. ತನಗೆ ಕೊವಿಡ್ ಸೋಂಕು ತಗುಲಿದ್ದು ತಾನು ಸತ್ತರೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಕಾರಣ ಎಂದು ಹೇಳಿದ್ದರು.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •