ಇಸ್ಲಾಮಾಬಾದ್: ಆರು ದಿನ 15 ಜನರು ಇಬ್ಬರು ಅಪ್ರಾಪ್ತ ಸೋದರಿಯರನ್ನು ಸಾಮೂಹಿಕ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ಪಾಕಿಸ್ತಾನದ ಫೆಸ್ಲಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆಗೆ ಆಕ್ರೋಶ ವ್ಯಕ್ತಪಡಿಸಿ ಮಹಿಳೆ ಸಂಘಟನೆಗಳು ಸೇರಿದಂತೆ ಬಹುತೇಕರು ರಸ್ತೆಗಿಳಿದು ಪ್ರತಿಭಟನೆ ನಡೆಸಿ, ಕಾಮುಕರನ್ನ ಬಂಧಿಸಬೇಕೆಂದು ಆಗ್ರಹಿಸಿದ್ದಾರೆ.

15 ಮತ್ತು 17 ವರ್ಷದ ಬಾಲಕಿಯರನ್ನ 11 ಜನ ಪ್ಲಾನ್ ಮಾಡಿ ಅಪಹರಿಸಿದ್ದಾರೆ. ನಂತರ ಇಬ್ಬರನ್ನ ಪ್ರತ್ಯೇಕವಾಗಿ ಫೆಸ್ಲಾಬಾದ್ ವ್ಯಾಪ್ತಿಯಲ್ಲಿರಿಸಿದ್ದಾರೆ. ಆರು ದಿನವೂ ಇಬ್ಬರನ್ನ ನಶೆಯಲ್ಲಿರುವಂತೆ ನೋಡಿಕೊಂಡ ನೀಚರು ನಿರಂತರವಾಗಿ ಅತ್ಯಾಚಾರ ಎಸಗಿದ್ದಾರೆ. ಆರು ದಿನಗಳ ಬಳಿಕ ಓರ್ವ ಬಾಲಕಿಯನ್ನ ಜಂಗ್ ಬಜಾರ್ ಮತ್ತು ಮತ್ತೋರ್ವಳನ್ನ ಗುಜರಾನ್ವಾಲ್ ಮಾರುಕಟ್ಟೆಯ ಜನಸಂದಣಿಯಲ್ಲಿ ಬಿಟ್ಟು ಎಸ್ಕೇಪ್ ಆಗಿದ್ದಾರೆ.

Gangrape-on-Sisters

ತಾಯಿಯ ಕಣ್ಣೀರು: ಸೆಪ್ಟೆಂಬರ್ 11ರಂದು ಇಬ್ಬರು ಮಕ್ಕಳನ್ನ ಅಪಹರಿಸಲಾಗಿತ್ತು. ಆರು ದಿನಗಳ ಬಳಿಕ ಮಕ್ಕಳು ಮನೆಗೆ ಬಂದಾಗ ಅತ್ಯಾಚಾರ ನಡೆದಿರುವ ವಿಷಯ ತಿಳಿಯಿತು. ಎಲ್ಲ 15 ಜನ ಮಕ್ಕಳಿಗೆ ಆರು ದಿನ ನಶೆ ಪದಾರ್ಥ ನೀಡುವ ಮೂಲಕ ಮಂಪರಿನಲ್ಲಿರುವಂತೆ ನೋಡಿಕೊಂಡಿದ್ದರು. ಆರ್ಥಿಕವಾಗಿ ಸಬಲರಾಗಿರದ ಕಾರಣ ಕಾನೂನು ಹೋರಾಟ ನಡೆಸಲು ನಮ್ಮಿಂದ ಸಾಧ್ಯವಿಲ್ಲ. ಹಾಗಾಗಿ ಈ ಊರು ತೊರೆದು ಬೇರೆ ಸ್ಥಳದಲ್ಲಿ ನೆಲಸಲು ತೀರ್ಮಾನಿಸಿದ್ದೇವೆ ಎಂದು ಸಂತ್ರಸ್ತ ಬಾಲಕಿಯರ ತಾಯಿ ಕಣ್ಣೀರು ಹಾಕುತ್ತಾರೆ.

ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದರೂ ಇದುವರೆಗೂ ಯಾವ ಆರೋಪಿಯನ್ನ ಬಂಧಿಸಿಲ್ಲ. ಪೊಲೀಸರ ನಡೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಬಹುತೇಕ ಸಂಘಟನೆಗಳ ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿವೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •