gangavati-pranesh

ಉತ್ತರ ಕರ್ನಾಟಕದ ಜನರ ಮುಗ್ಧತೆ ದುರುಪಯೋಗ ಪಡಿಸಿಕೊಳ್ಳುವ ಗಂಗಾವತಿ ಪ್ರಾಣೇಶ್

Cinema/ಸಿನಿಮಾ Home Kannada News/ಸುದ್ದಿಗಳು

ವಿದೂಷಕ ಗಂಗಾವತಿ ಪ್ರಾಣೇಶ್ ಅವರು ಪ್ರಸಿದ್ಧ ಹಾಸ್ಯ ಕಲಾಕಾರ . ಜನರನ್ನು ನಗಿಸುವದರಲ್ಲಿ ನಿಸ್ಸಿಮರು   ಖ್ಯಾತ ಹಾಸ್ಯ ಸಾಹಿತಿ, ವಿದೂಷಕ ಗಂಗಾವತಿ ಪ್ರಾಣೇಶ್‌ ಅವರು ತಾವು ಭಾಗವಹಿಸುವ ಕಾರ್ಯಕ್ರಮಗಳಲ್ಲಿ ಜನರನ್ನು ನಗಿಸಲು ಹೆಚ್ಚಾಗಿ ಉತ್ತರ ಕರ್ನಾಟಕದ ಭಾಷೆ ಹಾಗೂ ಅಲ್ಲಿನ ಜನರ ಜೀವನ ಶೈಲಿಯ ಕುರಿತು ಮಾತನಾಡುತ್ತಾರೆ. 

ಹೀಗೆ ಮಾತನಾಡುವ ಭರದಲ್ಲಿ ಭಾಷೆಯ ವೈವಿಧ್ಯತೆಯ ಬಗ್ಗೆ ಹೇಳುತ್ತ ಸುಳ್ಳುಗಳನ್ನೂ ಸೃಷ್ಟಿಸುತ್ತಿದ್ದಾರೆ. ಹಾಗೂ ಉತ್ತರ ಕರ್ನಾಟಕದ ಜನರ ಭಾಷೆಯ ವಿಷಯವಾಗಿ ಹೀಯಾಳಿಸುವುದು, ಅಲ್ಲಿನ ಜನರ ಮುಗ್ಧತೆಯನ್ನು ದುರುಪಯೋಗ ಪಡಿಸಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ ಎಂದಿದ್ದಾರೆ ಖ್ಯಾತ ಪತ್ರಕರ್ತ ಸಂಗಮೇಶ್‌ ಮೆಣಸಿನಕಾಯಿ.

ಭಾಷೆಯ ವೈವಿಧ್ಯತೆಯ ಬಗ್ಗೆ ಹೇಳುತ್ತ ಸುಳ್ಳುಗಳನ್ನೂ ಸೃಷ್ಟಿಸುತ್ತಿದ್ದಾರೆ. ಈ ಆರೋಪಕ್ಕೆ ಒಂದು ಉದಾಹರಣೆ ಇವತ್ತು ಸಂಜೆ ೭.೩೦ಕ್ಕೆ ಟಿ.ವಿ.-೯ ಚಾನೆಲ್ನಲ್ಲಿ ಪ್ರಸಾರವಾದ ಕಾರ್ಯಕ್ರಮ. ಇದರಲ್ಲಿ ಪ್ರಾಣೇಶ್ ಅವರು ಹೇಳಿದ್ದು-‘ಚಿಕ್ಕಪ್ಪನಿಗೆ ಬಿಜಾಪುರ ಕಡೆ ಕಾಕಾ ಅಂತಾರ. ನಮ್ಮ ಹೈದರಾಬಾದ್-ಕರ್ನಾಟಕದ ಕಡೆ ಕಕ್ಕ ಅಂತಾರ’. ನನ್ನ ಸ್ವಂತ ಊರು ಯಲಬುರ್ಗಾ ತಾಲೂಕಿನ ಕಾತರಾಳ.

gangavati-pranesh

 ನನ್ನ ಅನುಭವದ ವ್ಯಾಪ್ತಿ ಚಿಕ್ಕದಿರಬಹುದು ಎಂಬ ಗುಮಾನಿಯಿಂದ ಕಲಬುರಗಿ, ಬಳ್ಳಾರಿ, ರಾಯಚೂರು, ಬೀದರ್ ಕಡೆ ನೆಲೆಸಿರುವ ನನ್ನ ಸಂಬಂಧಿಕರು, ಸ್ನೇಹಿತರಿಗೆ ಕರೆ ಮಾಡಿ ವಿಚಾರಿಸಿದೆ. ಎಲ್ಲರೂ ಕಾಕಾಗೆ, ‘ಕಕ್ಕ’ ಎಂದು ಕರೆಯುವುದನ್ನು ಕೇಳಿಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.ನಿಮ್ಮ ಗಳಿಕೆಗೆ ನಮ್ಮನ್ನು ಹೀಯಾಳಿಸುವುದನ್ನು ದಯವಿಟ್ಟು ನಿಲ್ಲಿಸುತ್ತೀರಾ? ನಿಮ್ಮ ಭಾಷಣಗಳಿಂದ ಉತ್ತರ ಕರ್ನಾಟಕದವರೆಂದರೆ ‘ದಡ್ಡರು’, ‘ಶಾಲೆಗೆ ಹೋಗದವರು’, ‘ಚಡ್ಡಿ ಹಾಕದವರು’, ‘ಸಿಂಬಳ ಒರೆಸಿಕೊಳ್ಳದವರು’, ‘ರಿಸಲ್ಟ್ ನೋಡದವರು’ ಇನ್ನೂ ಏನೇನೋ ಆಗಿಬಿಟ್ಟಿದ್ದೇವ  

ವೈಯಕ್ತಿಕ ನೆಲೆಯ ಅನುಭವಗಳನ್ನು ಒಮ್ಮೆ-ಎರಡು ಸಲ ತಮಾಷೆಗೆ ಒಳಪಡಿಸಿದರೆ ಅದು ಹಾಸ್ಯ ಎನ್ನಿಸುತ್ತದೆ, ಸ್ವೀಕೃತವೂ ಆಗುತ್ತದೆ.

ಉ.ಕ.ದ ಜನ, ಭಾಷೆ, ನೆಲದ ಬಗ್ಗೆ ಪ್ರೊ. ಕೃಷ್ಣೇಗೌಡ, ರಿಚರ್ಡ್ ಲೂಯಿಸ್, ಸುಧಾ ಬರಗೂರು ಕೂಡ ಹಾಸ್ಯ ಮಾಡುತ್ತಾರೆ. ಆದರೆ ಅವರು ಎಲ್ಲಿಯೂ ನಮ್ಮನ್ನು ಹೀಯಾಳಿಸುವುದಿಲ್ಲ

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...