ಕರ್ನಾಟಕ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ದಿಗಾಗಿ ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಅಭವೃದ್ದಿ ನಿಗಮವನ್ನು 1975ನೇ ಸಾಲಿನಲ್ಲಿ ಸ್ಥಾಪಿಸಲಾಯಿತು. ಈ ನಿಗಮವನ್ನು 1956ರ ಕಂಪನಿ ಕಾಯ್ದೆಯಡಿ ಸ್ಥಾಪಿಸಲಾಯಿತು. ನಂತರ ನಿಗಮವನ್ನು 13.10.2005ರಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ದಿ ನಿಗಮ ಎಂದು ಮರು ನಾಮಕರಣ ಮಾಡಲಾಯಿತು. ಗಂಗಾ ಕಲ್ಯಾಣ ವೈಯಕ್ತಿಕ ನೀರಾವರಿ ಕೊಳವೆಬಾವಿ ಯೋಜನೆಯನ್ನು 1984 ರಿಂದ ಅನುಷ್ಟಾನಗೊಳಿಸಲಾಗುತ್ತಿದೆ. ಆದ್ದರಿಂದ ನಾವು ಇಲ್ಲಿ ಈ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.

ಯೋಜನೆಯಡಿಯಲ್ಲಿ ವೈಯಕ್ತಿಕ ನೀರಾವರಿ ಬಾವಿಗಳನ್ನು ಕೊರೆದು ಪಂಪ್ಸೆಟ್ ಅಳವಡಿಸಲಾಗುತ್ತದೆ ನಂತರದಲ್ಲಿ ಘಟಕವನ್ನು ವಿದ್ಯುತೀಕರಣ ಗೊಳಿಸಲಾಗುತ್ತದೆ. ಯೋಜನೆ ಅಡಿಯಲ್ಲಿ ರೈತರಿಗೆ ಸುಮಾರು ಎರಡು ಲಕ್ಷದವರೆಗೆ ಕೊಳವೆಬಾವಿಯನ್ನು ತೆರೆಯಲು ಸಾಲವನ್ನು ನೀಡಲಾಗುತ್ತದೆ. ನಂತರದಲ್ಲಿ ಒಂದುವರೆ ಲಕ್ಷವನ್ನು ಸಹಾಯಧನವಾಗಿ ಸರ್ಕಾರವೇ ನೀಡುತ್ತದೆ. ಹಾಗಾಗಿ 50,000 ರೂಪಾಯಿಗಳನ್ನು ಮಾತ್ರ ತುಂಬಬೇಕಾಗುತ್ತದೆ. 50,000 ಹಣವನ್ನು ಬ್ಯಾಂಕ್ ಗಳಲ್ಲಿ ಆರು ಶೇಕಡದಷ್ಟು ಬಡ್ಡಿದರದಲ್ಲಿ 16 ಅರ್ಧವಾರ್ಷಿಕ ಕಂತುಗಳಲ್ಲಿ ನಿಗಮಕ್ಕೆ ಮರುಪಾವತಿ ಮಾಡಬೇಕಾಗುತ್ತದೆ. ಅಂದರೆ ಆರು ತಿಂಗಳಿಗೊಮ್ಮೆ ಹಣವನ್ನು ಕಟ್ಟಿ ಎಂಟು ವರ್ಷಗಳ ತನಕ ತುಂಬಬಹುದು.

ಹಾಗೆಯೇ ಯೋಜನೆಯ ಫಲಾನುಭವಿಯಾಗಲು ಹಲವಾರು  ಅರ್ಹತೆಗಳನ್ನು ಹೊಂದಿರಬೇಕಾಗುತ್ತದೆ. ಪರಿಶಿಷ್ಟ ಜಾತಿಗೆ ಸೇರಿರಬೇಕಾಗುತ್ತದೆ. ಹಾಗೆಯೇ ಅರ್ಜಿದಾರರು ವರ್ಷಗಳಿಂದ ಕರ್ನಾಟಕದಲ್ಲಿ ವಾಸವಾಗಿರಬೇಕಾಗುತ್ತದೆ. ಅರ್ಜಿದಾರರ ವಯಸ್ಸು 18 ರಿಂದ 60 ವರ್ಷದವರೆಗೆ ಇರಬೇಕಾಗುತ್ತದೆ.  ಅರ್ಜಿದಾರರ ಆದಾಯ 22,000 ಕಿಂತ ಹೆಚ್ಚು ಇರಬಾರದು ಮತ್ತು ಸಣ್ಣ ಮತ್ತು ಅತಿ ಸಣ್ಣ ಹಿಡುವಳಿದಾರರ ಆಗಿರಬೇಕಾಗುತ್ತದೆ. ಇವರ ಕುಟುಂಬದಲ್ಲಿ ಯಾರೂ ಕೂಡ ಸರಕಾರಿ ನೌಕರಿಯನ್ನು ಹೊಂದಿರಬಾರದು. ಹಾಗೆಯೇ ಇನ್ನೂ ಹಲವಾರು ಅರ್ಹತೆಗಳನ್ನು ಹೊಂದಿರಬೇಕಾಗುತ್ತದೆ.

ಅರ್ಜಿಯನ್ನು ಸಲ್ಲಿಸುವ ಹಲವಾರು ದಾಖಲಾತಿಗಳು ಬೇಕಾಗುತ್ತದೆ. ಅಂದರೆ ಪಾಸ್ಪೋರ್ಟ್ ಸೈಜಿನ ಇತ್ತೀಚಿನ ಭಾವಚಿತ್ರ, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಪಡಿತರ ಚೀಟಿ, ಗುರುತಿನ ಚೀಟಿ, ಇತ್ತೀಚಿನ ಪಹಣಿ, ಕೃಷಿ ಪಾಸ್ ಬುಕ್ ಅಥವಾ ಸಣ್ಣ ಮತ್ತು ಅತಿ ಸಣ್ಣ ಹಿಡುವಳಿದಾರರ ಪ್ರಮಾಣ ಪತ್ರ, ಭೂ ನಕ್ಷೆ ಇಷ್ಟು ದಾಖಲಾತಿಗಳು ಬೇಕಾಗುತ್ತದೆ. ಹಾಗೇ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ. ಅದಕ್ಕೆ ಹಲವಾರು ಹಂತಗಳಿವೆ. ಆಯ್ಕೆಮಾಡುವ ಹಂತಗಳಲ್ಲಿ ಎಲ್ಲಾ ದಾಖಲಾತಿಗಳನ್ನು ಸರಿಯಾಗಿ ಪರೀಕ್ಷಿಸಲಾಗುತ್ತದೆ. ಇದರ ನಂತರದಲ್ಲಿ ಯೋಜನೆ ಫಲಾನುಭವಿಗಳು ಆಗಬಹುದು.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •