ಬೇಸಿಗೆ ಬಂತು ಅಂದರೆ ಹೆಚ್ಚಿನ ಜನರಿಗೆ ಕಣ್ಣಿಗೆ ಕಾಣುವುದು ಜಾಮೂನ್ ಅಂದರೆ ಇದು ಸಿಹಿ ತಿನಿಸಿನ ಜಾಮೂನು ಅಲ್ಲ ನೇರಳೆ ಹಣ್ಣು. ಹೌದು ದೇಶಕ್ಕೆ ಬಂದಾಗ ನೇರಳೆ ಹಣ್ಣು ತಿನ್ನದೇ ಇದ್ದರೆ ಆ ಬೇಸಿಗೆ ಕಾಲದಲ್ಲಿ ಏನೋ ಮಿಸ್ ಮಾಡಿಕೊಂಡಂತೆ ಬೇಸಿಗೆ ಸಮಯದಲ್ಲಿ ಹೆಚ್ಚಾಗಿ ಕಾಣಿಸುವ ಈ ನೇರಳೆ ಹಣ್ಣನ್ನು ತಿನ್ನುವುದರಿಂದ ಏನೆಲ್ಲಾ ಆರೋಗ್ಯಕರ ಪ್ರಯೋಜನವಿದೆ ಗೊತ್ತ ಅದರಲ್ಲಿಯೂ ಶುಗರ್ ಕಾಯಿಲೆ ಇರುವವರಿಗೆ ವರದಾನ ಎಂದೇ ಹೇಳಬಹುದು ನೇರಳೆ ಹಣ್ಣು. ಹಾಗಾದರೆ ನೇರಳೆಹಣ್ಣು ಏನೆಲ್ಲ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ ತಿಳಿಯೋಣ ಬನ್ನಿ ಈ ಮಾಹಿತಿಯಲ್ಲಿ.

ಆ್ಯಂಟಿ ಆಕ್ಸಿಡೆಂಟ್ಸ್ ಹೇರಳವಾಗಿ ಇರುವಂತಹ ನೇರಳೆ ಹಣ್ಣನ್ನು ತಿನ್ನುವುದರಿಂದ ಹೇರಳವಾಗಿ ದೇಹಕ್ಕೆ ವಿಟಮಿನ್ ಸಿ ಜೀವಸತ್ವ ದೊರೆತರೆ ಹಾಗೂ ಆರೋಗ್ಯ ಉತ್ತಮವಾಗಿರುತ್ತದೆ ಹೌದು ಆ್ಯಂಟಿಆಕ್ಸಿಡೆಂಟ್ಸ್ ಪ್ರಯೋಜನವನ್ನು ಹೇಳುವುದಾದರೆ ಆ್ಯಂಟಿ ಆಕ್ಸಿಡೆಂಟ್ಸ್ ಗಳು ದೇಹಕ್ಕೆ ಅತ್ಯವಶ್ಯಕ ಹಾಗೂ ಆರೋಗ್ಯವನ್ನು ವೃದ್ಧಿಸಲು ಸಹಕಾರಿ ಯಾಗಿರುವ ಆ್ಯಂಟಿ ಆಕ್ಸಿಡೆಂಟ್ಸ್ ಗಳು ಹೆಚ್ಚಾಗಿ ಎಲ್ಲಾ ಆಹಾರ ಪದಾರ್ಧಗಳಲ್ಲಿಯೂ ಇರುವುದಿಲ್ಲ. ಆದರೆ ಪ್ರಕೃತಿ ಅಲ್ಲಿ ದೊರೆಯುವ ಕೆಲವೊಂದು ಹಣ್ಣು ತರಕಾರಿಗಳಲ್ಲಿ ಇರುವ ಆ್ಯಂಟಿ ಆಕ್ಸಿಡೆಂಟ್ಸ್ ಗಳು ಹೇರಳವಾಗಿರುತ್ತದೆ.

ಆ್ಯಂಟಿ ಆಕ್ಸಿಡೆಂಟ್ ಗಳ ಕೊರತೆ ಉಂಟಾದರೆ ದೇಹದಲ್ಲಿ ಅನೇಕ ವಿಧದ ಅನಾರೋಗ್ಯ ಸಮಸ್ಯೆಗಳು ಉಂಟಾಗುತ್ತದೆ ಆದರೆ ಆ್ಯಂಟಿ ಆಕ್ಸಿಡೆಂಟ್ಸ್ ಗಳು ಹೇರಳವಾಗಿ ದೇಹಕ್ಕೆ ದೊರೆತರೆ ಆಹಾರದ ಪೋಷಕಾಂಶಗಳನ್ನು ದೇಹ ಚೆನ್ನಾಗಿ ಹೀರಿಕೊಳ್ಳುತ್ತದೆ. ಇನ್ನೂ ನೇರಳೆಹಣ್ಣಿನ ವಿಚಾರಕ್ಕೆ ಬಂದರೆ ನೇರಳೆಹಣ್ಣಿನಲ್ಲಿ ಹೇರಳವಾಗಿ ಆಂಟಿ ಆಕ್ಸಿಡೆಂಟ್ಸ್ ಗಳು ದೊರೆಯುತ್ತದೆ ಈ ನೇರಳೆ ಹಣ್ಣು ಬೇಸಿಗೆ ಸಮಯದಲ್ಲಿ ದೊರೆಯುವ ಕಾರಣ ಸೀಸನಲ್ ಫ್ರುಟ್ ಆಗಿದ್ದರಿಂದ ತಪ್ಪದೆ ನೇರಳೆ ಹಣ್ಣು ದೊರೆಯುವ ಕಾಲದಲ್ಲಿ ನೇರಳೆ ಹಣ್ಣನ್ನು ಸೇವನೆ ಮಾಡಿ.

ಮಾರುಕಟ್ಟೆಯಲ್ಲಿ ನೇರಳೆ ಕಾರುಬಾರು : ಅನ್‍ಲಾಕ್‍ನಲ್ಲಿ ವ್ಯಾಪಾರಿಗಳ ಕೈಹಿಡಿದ ಹಣ್ಣು!! | Prajapragathi

ಇನ್ನು ಸಕ್ಕರೆ ಕಾಯಿಲೆಯಿಂದ ಬಳಲುವವರ ದೇಹದಲ್ಲಿ, ಗ್ಲುಕೋಸ್ ಅಂಶ ಹೇರಳವಾಗಿರುತ್ತದೆ ಯಾವಾಗ ನೇರಳೆ ಹಣ್ಣನ್ನು ಸೇವನೆ ಮಾಡುತ್ತಾರೆ ಈ ಸಕ್ಕರೆ ಅಂಶ ದೇಹದಲ್ಲಿ ಕಡಿಮೆಯಾಗುತ್ತದೆ ಹಾಗೂ ಸಕ್ಕರೆ ಕಾಯಿಲೆಯಿಂದ ಬಳಲುವವರಿಗೆ ಉತ್ತಮ ಆರೋಗ್ಯವನ್ನು ನೀಡುತ್ತದೆ ಈ ನೇರಳೆ ಹಣ್ಣು. ಈ ನೇರಳೆ ಹಣ್ಣನ್ನು ಮಿತಿಯಾಗಿ ಸೇವನೆ ಮಾಡಿಕೊಂಡು ಬಂದ ದೇಹದಲ್ಲಿ,

ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿ ತರಬಹುದು ಇತ್ತೀಚಿನ ದಿವಸಗಳಲ್ಲಿ ನೇರಳೆ ಹಣ್ಣು ಸೀಸನಲ್ ಆಗಿ ದೊರೆತರೂ ಸಹ ಮೆಡಿಕಲ್ ಶಾಪ್ ಗಳಲ್ಲಿ ನೇರಳೆ ಹಣ್ಣಿನ ಜ್ಯೂಸ್ ದೊರೆಯುತ್ತದೆಇದನ್ನು ಸಕ್ಕರೆ ಕಾಯಿಲೆಯಿಂದ ಬಳಲುವವರು ವೈದ್ಯರ ಸಲಹೆಯ ಮೇರೆಗೆ ತೆಗೆದುಕೊಳ್ಳಬಹುದು ಆದರೆ ವೈದ್ಯರ ಸಲಹೆ ಪಡೆಯದೆ ಈ ಜ್ಯೂಸ್ ತೆಗೆದುಕೊಳ್ಳುವುದು ಒಳ್ಳೆಯದಲ್ಲ.

ಈ ರೀತಿ ಪ್ರಕೃತಿ ನೀಡಿರುವ ಈ ಸುಂದರ ಹಣ್ಣು ಬಹಳ ರುಚಿಯಾಗಿದ್ದು ತಪ್ಪದೆ ನೀವು ಸಹ ಬೇಸಿಗೆ ಸಮಯದಲ್ಲಿ ಈ ಹಣ್ಣನ್ನು ಸೇವನೆ ಮಾಡಿ ಹಾಗೂ ಉತ್ತಮ ಅಂಶಗಳು ಇರುವ ಈ ನೇರಳೆ ಹಣ್ಣನ್ನು ಸೇವನೆ ಮಾಡುವುದರಿಂದ ರಕ್ತಹೀನತೆ ಸಹ ದೂರವಾಗುತ್ತದೆ ಹಾಗೂ ರಕ್ತ ಶುದ್ಧೀಕರಣವಾಗುತ್ತದೆ ಇನ್ನೂ ನೇರಳೆ ಹಣ್ಣಿನ ಜ್ಯೂಸ್ ತಯಾರಿಸುವಾಗ ನೇರಳೆ ಹಣ್ಣಿನ ಬೀಜದ ಸಮೇತ ಇದನ್ನು ರುಬ್ಬಿ ಜ್ಯೂಸ್ ಮಾಡಿ ಸೇವನೆ ಮಾಡಿದರೆ ಆರೋಗ್ಯಕ್ಕೆ ಬಹಳ ಉತ್ತಮ.
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •