ನಿಮ್ಮ ಹೆಂಡತಿ ನಿಮಗೆ ಪರಿಚಯವಾಗಿದ್ದು, ಮುಂಬೈ ಅಥವಾ ಬೆಂಗಳೂರಿನಲ್ಲಾ.? ನಮ್ಮ ಅಕ್ಕನ ಮಗಳು ಅವಳು, ಮನೆಗೆ ಬಂದಿದ್ದಾಗ ಅವರ ಪರಿಚಯವಾಯ್ತು. ಆಕೆ ಪರಿಚಯವಾದ ಮೇಲೆ ಒಂದು ನಾನು ಕಂಪ್ಯೂಟರ್ ಸೆಂಟರ್ ಓಪನ್ ಮಾಡಬೇಕೆಂದು ಓಡಾಡುತ್ತಿದ್ದೆ, ಆಗ ನನಗಾಕೆ ಪರಿಚಯವಾದಳು. ಪರಿಚಯವಾಗಿ ಅದು ಪ್ರೀತಿಗೆ ತಿರುಗಿ ಆ ರೀತಿ ಮುನ್ನಡೆದು ಮದುವೆಯಾಯ್ತು. ಇಷ್ಟೆಲ್ಲ ಆದ ಮೇಲೆ ನೀವು ಈ ಕೇಸ್ ಒಂದನ್ನು ಕೂಡ ಮುಂದುವರೆಸುತ್ತಾ ಬಂದಿದ್ದೀರಿ. ಹೇಗೆ.? ಇದಕ್ಕೆ ನೀವು ಯಾವೆಲ್ಲಾ ತೊಂದರೆ ಎದುರಿಸುತ್ತಿದ್ದೀರಿ.? ಎಂದಾಗ ಲಾಯರ್ ಜಗದೀಶ್ ಹೇಳಿದ್ದು ಹೀಗೆ.!

ನನ್ನ ಮೇಲೆ ಹನ್ನೆರಡು- ಹದಿಮೂರು ಕೇಸುಗಳು ಎದುರಾದವು. ಆ ಮೇಲೆ ತಮ್ಮಂದಿರು ದೂರವಾಗುತ್ತಾರೆ. ನನ್ನ ತಮ್ಮನೇ ನನ್ನ ಮೇಲೆ ಫಾಲ್ಸ್ ಕೇಸ್ ಹಾಕುತ್ತಾರೆ. ನಾನೇ ಸಾಕಿ ಸಲವಿ ಬೆಳೆಸಿದ ನನ್ನ ಎರಡನೇ ತಮ್ಮನನ್ನು ಬೆಳೆಸಿದ್ದೆ. ಅವನೇ ನನ್ನ ಮೇಲೆ ಕೇಸ್ ಹಾಕಿದ ಇನ್ನೊಬ್ಬರ ಜತೆ ಸೇರಿಕೊಂಡು. ಮಾಜಿ ಕಾರ್ಪೊರೇಟರ್ ಒಬ್ಬರು 5 ಕೇಸ್ ನನ್ನ ಮೇಲೆ ಹಾಕಿದ್ದಾರೆ. ಅಶ್ವತ್ಥ್ ನಾರಾಯಣ್ ಅವರು ಕೂಡ ನನ್ನ ಒಳ್ಳೆಯ ಸ್ನೇಹಿತರು.

 

ನನ್ನ ಜೊತೆಯಲ್ಲಿದ್ದು, ನನ್ನ ಮೇಲೆ ಸುಳ್ಳು ಕೇಸ್ ಹಾಕಿ ನನ್ನ ಮೇಲೆ ಸ್ಟಂಟ್ ಮಾಡಲು ಅವರಿಂದ ಸಾಧ್ಯವಾಗಲಿಲ್ಲ. ಆತ ಕಾರ್ಪೋರೇಟರ್ ಆಗೋಕೂ ಮುಂಚೆ ನನ್ನ ಸ್ನೇಹಿತನಾಗಿದ್ದ. ಒಮ್ಮೆ ಕಾರ್ಪೋರೇಟರ್ ಆದ ಮೇಲೆ ಅವನ ಒಂದು ಬಿಹೇವಿಯರ್, ನಮ್ಮ ಜೊತೆ ಬದಲಾವಣೆ ಕಂಡಿತು. ಸಾಮಾನ್ಯವಾಗಿ ಪೊಲಿಟಿಷಿಯನ್ ಎಂದು ಬಂದರೆ ಭ್ರಷ್ಟಾಚಾರ ಎಂದು ಬರುತ್ತದೆ. ಆ ಭ್ರಷ್ಟಾಚಾರವನ್ನು ಸತತವಾಗಿ ವಿರೋಧ ಪಡಿಸಿಕೊಂಡು ಬಂದ ವ್ಯಕ್ತಿ.

ನಾನು ಒಬ್ಬ ಸ್ನೇಹಿತ ಕಾರ್ಪೋರೇಟರ್ ಆದಾಗ ಅವನು ಭ್ರಷ್ಟಾಚಾರ ವಿರುದ್ಧವಾಗಿ ಕೆಲಸ ಮಾಡುತ್ತಾನೆ ಅಂದುಕೊಂಡಿದ್ದೆ, ಆದರೆ ಅದು ಆಗದಿದ್ದಾಗ ಎಲ್ಲೋ ಒಂದು ಕಡೆ ಬೇಜಾರಾಯ್ತು. ನಾನು ಅವನಿಂದ ದೂರವಾಗಿದ್ದಕ್ಕೆ ಅವನು ನನ್ನ ಮೇಲೆ ಕೇಸ್ ಹಾಕಿದ. ನನ್ನ ಸಂಸಾರವೂ ಈ ಹೋರಾಟದಿಂದ ಹಾಳಾಗಿ ಹೋಗಿದೆ. ಅದರ ನಡುವೆ ಇವರೆಲ್ಲಾ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ನನ್ನ ಕುಟುಂಬವನ್ನು ದೂರ ಮಾಡಿಕೊಳ್ಳಲೂ ನನ್ನ ಹೋರಾಟ ಎಷ್ಟು ಕಾರಣವೋ, ಈ ವಿರೋಧಿಗಳು ಸಹ ಅಷ್ಟೇ ಕಾರಣರಾಗುತ್ತಾರೆ ಎಂದು ಜಗದೀಶ್ ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •