ಅಪಾರ್ಟ್ಮೆಂಟ್

ಅಜ್ಜಿ ಜೊತೆ ಬೆಂಗಳೂರಿನ ಅಪಾರ್ಟ್ಮೆಂಟ್ ನ ಐದನೇ ಮಹಡಿಗೆ ಹೋದ ಕಂದಮ್ಮ ಮರಳಿ ಬಾರಲೇ ಇಲ್ಲ,ಅಷ್ಟಕ್ಕೂ ಆ ಮಹಡಿಯಲ್ಲಿ ಏನಾಯ್ತು ಗೊತ್ತಾ..

Home

ಮಕ್ಕಳಿಲ್ಲ ಅಂತ ಕೊರಗುವ ಅದೆಷ್ಟೋ ತಂದೆ ತಾಯಂದಿರನ್ನ ನಾವು ನೋಡಿದ್ದೇವೆ.. ಮಕ್ಕಳು ಆಗಲಿ ಎಂದು ಆಸ್ಪತ್ರೆಗಳಲ್ಲಿ ವೈದ್ಯರ ಬಳಿ ಸಾಲು ಗಟ್ಟಿ ನಿಂತು ಏನಾದರೂ ಮಾಡಿ ಒಂದು ಮಗುವಾಗಲಿ ಎಂದು ಮನವಿ ಮಾಡಿಕೊಳ್ಳುವವರನ್ನು ನೋಡಿದ್ದೇವೆ.. ಇತ್ತ ದೇವಸ್ಥಾನಗಳಲ್ಲಿ ಕುಟುಂಬಕ್ಕೊಂದು ಕಂದನ ನೀಡು ಎಂದು ಕಣ್ಣೀರಿಡುವವರನ್ನೂ ನೋಡಿದ್ದೇವೆ.. ಆದರೆ ಇರುವ ಚೆಂದದ ಮಕ್ಕಳನ್ನು ಸಣ್ಣ ಅಜಾಗರೂಕತೆಯಿಂದ ಕಳೆದುಕೊಳ್ಳುವ ಘಟನೆ ನಿಜಕ್ಕೂ ಸಂಕಟ ತರುತ್ತದೆ.. ಹೌದು ಅದರಲ್ಲೂ ಇತ್ತೀಚಿನ ದಿನಗಳಲ್ಲಿ‌ ಇಂತಹ ಘಟನೆಗಳು ಮರುಕಳಿಸುತ್ತಿರುವುದು ನಿಜಕ್ಕೂ ಬೇಸರವನ್ನುಂಟು ಮಾಡುತ್ತಿದೆ..

ಹೌದು ಮೊನ್ನೆಮೊನ್ನೆಯಷ್ಟೇ ಮೈಸೂರಿನ ದಸನಕೊಪ್ಪಲು ಗ್ರಾಮದಲ್ಲಿ ಮಗುವೊಂದು ಸ್ನಾನ ಮಾಡಿಸುವ ಸಮಯದಲ್ಲಿ ತಾಯಿ ತಣ್ಣೀರು ತರಲು ಒಳ ಹೋದ ಸಮಯದಲ್ಲಿ ಬಿಸಿ ನೀರಿಗೆ ಬಿದ್ದು ಜೀವವನ್ನೇ ಕಳೆದುಕೊಂಡ ಘಟನೆ ಮನಕಲಕುವಂತಿತ್ತು.. ಆ ಘಟನೆ ಮಾಸುವ ಮುನ್ನವೇ ಇದೀಗ ಮತ್ತೊಂದು ಅಂತಹುದೇ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು ಏನೂ ಅರಿಯದ ಎರಡು ವರ್ಷದ ಕಂದನೊಬ್ಬ ಪೋಷಕರ ಅಜಾಗರೂಕತೆಯಿಂದ ಇದೀಗ ಜಿವ ಕಳೆದುಕೊಳ್ಳುವಂತಾಗಿದೆ.. ಅದೂ ಸಹ ಐದನೇ ಮಹಡಿಯಿಂದ ಬಿದ್ದು ಜೀವ ಕಳೆದುಕೊಂಡಿದೆ ಎಂಬುದನ್ನು ನೆನೆದರೆ ಒಂದು ಕ್ಷಣ ಬೆಚ್ಚಿಬೀಳುವಂತಾಗಿದೆ.. ಆ ಮಗು ಆ ಕ್ಷಣದಲ್ಲಿ ಅದೆಷ್ಟು ನೋವು ಅನುಭವಿಸಿತೋ ಊಹಿಸಲೂ ಸಾಧ್ಯವಿಲ್ಲ..

ಹೌದು ಬೆಂಗಳೂರಿನ ಅಪಾರ್ಟ್ಮೆಂಟ್ ನಲ್ಲಿ‌ ಈ ಘಟನೆ ನಡೆದಿದ್ದು ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.. ಹೌದು ಆ ಕುಟುಂಬ ಬಾಡಿಗೆ ಮನೆಗಾಗಿ ಹುಡುಕಾಟ ನಡೆಸಿತ್ತು.. ಅಪಾರ್ಟ್ಮೆಂಟ್ ಒಂದನ್ನು ಬಾಡಿಗೆಗೆ ಪಡೆಯುವ ಸಲುವಾಗಿ ನೋಡಲು ಹೋದಾಗ ಐದನೇ ಮಹಡಿಯ ಅಪಾರ್ಟ್ಮೆಂಟ್ ಗೆ ಅಜ್ಜಿಯ ಜೊತೆ ಹೋದ ಎರಡು ವರ್ಷದ ಕಂದ ಮರಳಿ ಬಾರಲೇ ಇಲ್ಲ.. ಐದನೇ ಮಹಡಿಯ ಮೇಲಿನಿಂದ ಬಿದ್ದು ಜೀವ ಕಳೆದುಕೊಂಡಿದ್ದಾನೆ.. ಒಂದು ಕ್ಷಣ ಏನಾಯಿತು ಎನ್ನುವಷ್ಟರಲ್ಲಿ ಪುಟ್ಟ ಕಂದ ಇಲ್ಲವಾಗಿ ಹೋಗಿದ್ದಾನೆ..

ಹೌದು ಈ ಮಗುವಿನ ಹೆಸರು ದಿವ್ಯಾಂಶ್ ರೆಡ್ಡಿ.. ವಯಸ್ಸು ಎರಡು ವರ್ಷವಷ್ಟೇ.. ಈ ಕಂದನ ಅಜ್ಜಿ ಬಹಳ ದಿನಗಳಿಂದ ಬಾಡಿಗೆ ಮನೆಗಾಗಿ ಹುಡುಕಾಟ ನಡೆಸಿದ್ದರು.. ಸಾಕಷ್ಟು ಮನೆಗಳನ್ನು ನೋಡಿದ್ದರು.‌ ಆದರೆ ಯಾವುದೂ ಸರಿ ಬಂದಿರಲಿಲ್ಲ.. ಅದೇ ಕಾರಣಕ್ಕೆ ಅಪಾರ್ಟ್ಮೆಂಟ್ ಅನ್ನು ಬಾಡಿಗೆಗೆ ಪಡೆಯಲು ಮುಂದಾದರು.. ಅದರಂತೆ ಎಲೆಕ್ಟ್ರಾನಿಕ್ ಸಿಟಿಯಲ್ಲಿನ ಅಪಾರ್ಟ್ಮೆಂಟ್ ಒಂದರಲ್ಲಿ ಫ್ಲಾಟ್ ನೋಡಲು ಹೋದರು..

ದೊಡ್ಡವರು ಹೋಗಿದ್ದರೆ ಎಲ್ಲವೂ ಸರಿ ಇತ್ತು.. ಆದರೆ ಆ ಅಜ್ಜಿ ಎರಡು ವರ್ಷದ ಪುಟ್ಟ ಮಗುವನ್ನು ಮನೆ ನೋಡಲು ಕರೆದುಕೊಂಡು ಹೋಗಿ ತಪ್ಪು ಮಾಡಿಬಿಟ್ಟರು.. ಹೌದು ಎಲೆಕ್ಟ್ರಾನಿಕ್ ಸಿಟಿಯ ಇನ್ವೆಸ್ಟ್ ಮೆಂಟ್ ಲೇಔಟ್ ನ ಅಪಾರ್ಟ್ಮೆಂಟ್ ನ ಐದನೇ ಮಹಡಿಗೆ ಅಜ್ಜಿ ದಿವ್ಯಾಂಶ್ ನನ್ನು ಕರೆದುಕೊಂಡು ಹೋದರು.. ಅದೇ ಸಮಯದಲ್ಲಿ ಐದನೇ ಮಹಡಿಯಿಂದ ದಿವ್ಯಾಂಶ್ ಆಯ ತಪ್ಪಿ ಬಿದ್ದಿದ್ದಾನೆ.. ಬಿದ್ದ ಸ್ಥಳದಲ್ಲಿಯೇ ಪುಟ್ಟ ಕಂದ ಇಲ್ಲವಾಗಿ ಹೋಗಿದ್ದಾನೆ.. ಹೊಸ ಮನೆ ನೋಡಲು ಹೋದ ಕಂದನ ಮನೆಯೀಗ ಸೂತಕದ ಮನೆಯಾಗಿ ಹೋಗಿದೆ.. ಇತ್ತ ಆ ಕಂದನ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.. ನೂರಾರು ಕನಸು ಕಂಡಿದ್ದ ಮಗ ಇಲ್ಲ ಎಂದಾಗ ಆಗುವ ನೋವು ಯಾರಿಗೂ ಬಾರದಿರಲಿ..

ಹೌದು ಮಕ್ಕಳ ವಿಚಾರದಲ್ಲಿ ಎಷ್ಟು ಜಾಗರೂಕರಾಗಿದ್ದರೂ ಸಾಲದು.. ಕಣ್ಣ ರೆಪ್ಪೆಗಿಂತಲೂ ಹೆಚ್ಚು ಜೋಪಾನವಾಗಿ ನೋಡಬೇಕು.. ಅದರಲ್ಲೂ ದಿವ್ಯಾಂಶ್ ವಿಚಾರದಲ್ಲಿ ಅವರ ಪೋಷಕರು ಹಾಗೂ ಅಜ್ಜಿ ಸ್ವಲ್ಪ ಎಚ್ಚರಿಕೆ ವಹಿಸಿದ್ದರೂ ಸಹ ಇಂದು ಈ ಘಟನೆ ನಡೆಯುತ್ತಿರಲಿಲ್ಲ.. ಆ ಕುಟುಂಬ ಇಂದು ಇಂತಹ ನೋವನ್ನು ಅನುಭವಿಸುತ್ತಿರಲಿಲ್ಲ.. ಪ್ರತಿಯೊಬ್ಬ ಮಕ್ಕಳು ಸಹ ದೇವರು ಕೊಟ್ಟದ್ದು.. ದಯವಿಟ್ಟು ಮಕ್ಕಳನ್ನು ಜೋಪಾನವಾಗಿ ನೋಡಿಕೊಳ್ಳಿ.. ಸಣ್ಣ ಅಜಾಗರೂಕತೆಯೂ ಸಹ ಜೀವನ ಪೂರ್ತಿ ನೋವು ನೀಡುವಂತೆ ಮಾಡಿಬಿಡುವುದು.. ಅಷ್ಟಕ್ಕೂ ಆ ಮಗು ಮಾಡಿದ ತಪ್ಪಾದರು ಏನು.. ಅಷ್ಟು ನೋವು ಅನುಭವಿಸಿ ಹೋಗುವಂತಹಾ ತಪ್ಪಾದರು ಏನು ಮಾಡಿತ್ತು ಆ ಕಂದಮ್ಮ.. ದಯವಿಟ್ಟು ಪೋಷಕರು ಎಚ್ಚರವಹಿಸಿ..
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...