ಸ್ನೇಹಿತರೆ, ತಾನು ಮದುವೆಯಾಗುವ ಹುಡುಗಿ ಸುಂದರವಾಗಿರಬೇಕು, ಒಳ್ಳೆಯ ಗುಣದವಳಾಗಿರಬೇಕು ಸಂಪ್ರದಾಯಸ್ಥ ಕುಟುಂಬದಿಂದ ಬರಬೇಕು ಎಂಬುದು ಬಹುತೇಕ ಹುಡುಗರು ನಿರೀಕ್ಷೆ. ಇನ್ನು ಜ್ಯೋತಿಷ್ಯ ಶಾಸ್ತ್ರಗಳ ಪ್ರಕಾರ ಕೂಡ ಮದುವೆಯಾಗುವ ಹುಡುಗಿಯಲ್ಲಿ ಯಾವ ಲಕ್ಷಣವಿದ್ದರೆ ಅವರ ಮುಂದಿನ ಜೀವನ ಹೇಗಿರುತ್ತೆ ಎಂಬುದರ ಬಗ್ಗೆ ಹೇಳಲಾಗಿದೆ. ಅದರಲ್ಲಿ ಒಂದು ಮುಖ್ಯವಾಗಿ ಮದುವೆಯಾಗುವ ಹುಡುಗಿಯ ಕಾಲಿನ ಎರಡನೇ ಬೆರಳು ಉದ್ದವಾಗಿದ್ದರೆ ಅಂತಹವರ ಜೀವನ ಹೇಗಿರಲಿದೆ ಗೊತ್ತಾ..

Finger-length

ಇನ್ನು ನಮಗೆಲ್ಲಾ ಗೊತ್ತಿರುವಂತೆ ಕೈ ಬೆರುಳುಗಳಾಗಲಿ, ಕಾಲ್ಬೆರುಳುಗಳಾಗಲಿ ಒಂದೇ ಸಮ ಇರುವುದಿಲ್ಲ. ಇನ್ನು ಕಾಲಿನ ಎರಡನೆಯ ಬೆರಳು ಬೇರೆ ಬೆರಳುಗಳಿಗಿಂತ ಉದ್ದವಾಗಿದ್ದರೆ, ಇಲ್ಲವೇ ಹೆಬ್ಬೆಟ್ಟು ಉದ್ದವಾಗಿರುವವರ ಸ್ವಭಾವ ಹೇಗಿರಲಿದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಹೆಬ್ಬೆಟ್ಟು ಉದ್ದವಾಗಿರುವ ಹುಡುಗಿಯರು ತುಂಬಾ ಬುದ್ಧಿವಂತರಾಗಿದ್ದು ಅವರಲ್ಲಿ ನಾಯಕತ್ವದ ಗುಣ ಇದೆ ಎಂದು ಹೇಳಲಾಗಿದೆ. ಇನ್ನು ಹೆಬ್ಬೆಟ್ಟಿನ ಪಕ್ಕದ ಬೆರಳು ಉದ್ದವಾಗಿರುವ ಹುಡುಗಿಯರು ಸಹ ಬುದ್ಧಿವಂತರಾಗಿದ್ದು ಅವರಲ್ಲೂ ಕೂಡ ನಾಯುಕತ್ವದ ಗುಣ ಇರುತ್ತದೆ ಎಂಬ ಉಲ್ಲೇಖ ಇದೆ.

Finger-length

ಇನ್ನು ಈ ರೀತಿಯಾಗಿ ಇರುವ ಹುಡುಗಿಯರು ತಾವು ಮದುವೆಯಾಗುವ ಪುರುಷನ ಬಗ್ಗೆ ತುಂಬಾ ಕಾಳಜಿವಹಿಸುತ್ತಾರೆ. ತನ್ನ ಗಂಡನ ಕಷ್ಟ ಸುಖ ಎರಡರಲ್ಲೂ ಭಾಗಿಯಾಗುತ್ತಾರೆ. ಹೆಬ್ಬಟ್ಟಿನ ಪಕ್ಕದ ಬೆರಳು ಚಿಕ್ಕದಾಗಿರುವ ಹುಡುಗಿಯರು ಮೃದು ಸ್ವಭಾವದವರಾಗಿದ್ದು ಹೊಂದಿಕೊಂಡು ಹೋಗುವ ಉತ್ತಮ ಗುಣವನ್ನ ಹೊಂದಿರುತ್ತಾರೆ. ತನ್ನ ಗಂಡನ ತಂದೆ ತಾಯಿಯನ್ನ ತನ್ನ ತಂದೆ ತಾಯಿಯಂತೆ ನೋಡಿಕೊಳ್ಳುತ್ತಾರೆ. ಇನ್ನು ಈ ಗುಣಲಕ್ಷಣವನ್ನ ಹೊಂದಿರುವ ಹುಡುಗಿಯರಿಗೆ ಗಂಡನೇ ಸರ್ವಸ್ವವಾಗಿರುತ್ತಾನೆ.

Finger-length

ಮೇಲೆ ಹೇಳಿದಂತಹ ಲಕ್ಷಣಗಳನ್ನ ಹೊಂದಿರುವ ಹುಡುಗಿಯರು ತುಂಬಾ ಧೃಡ ಸ್ವಭಾವದವರಾಗಿದ್ದು ಜೀವನದಲ್ಲಿ ಏನೇ ಕಷ್ಟಗಳು ಬಂದರೂ ಕೂಡ ಅವನ್ನೆಲ್ಲಾ ನಿಭಾಯಿಸಿಕೊಂಡು ಹೋಗುವ ಸಾಮರ್ಥ್ಯ ಹೊಂದಿರುತ್ತಾರೆ. ತಾವು ಮದುವೆಯಾಗಿ ಹೋಗುವ ಮನೆಗೆ ತುಂಬಾ ಪ್ರಾಮುಖ್ಯತೆ ನೀಡುವ ಈ ಹುಡುಗಿಯರು ತನ್ನ ತವರಿನ ಕುಟುಂಬಕ್ಕಿಂತ ಹೆಚ್ಚಾಗಿ ಗಂಡನ ಮನೆಯನ್ನ ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂದು ಜೋತಿಷ್ಯ ಶಾಸ್ತ್ರಗಳಲ್ಲಿ ಉಲ್ಲೇಖ ಮಾಡಲಾಗಿದೆ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •