ವಾಹನ ಸವಾರರಿಗೆ ಗುಡ್ ನ್ಯೂಸ್,ಇನ್ನುಮುಂದೆ ಪೋಲಿಸರು ಅಡ್ಡಾದಿಡ್ಡಿಯಾಗಿ‌ ಫೈನ್ ಹಾಕೋಕು ಮುನ್ನ ಈ ಕೆಲಸ ಮಾಡಲೇಬೇಕು

Home Kannada News/ಸುದ್ದಿಗಳು ಸರ್ಕಾರೀ ಉಚಿತ ಯೋಜನೆಗಳು

ದೇಶಾದ್ಯಂತ ಸಂಭವಿಸುವ ರಸ್ತೆ ಅಪಘಾತಗಳಿಂದಾಗಿ ಪ್ರತಿ ವರ್ಷ ಸುಮಾರು 1.5 ಲಕ್ಷ ಜನರು ಸಾವನ್ನಪ್ಪುತ್ತಿದ್ದಾರೆ ಎಂಬುದು ಅಂಕಿ ಅಂಶಗಳಿಂದ ಸಾಬೀತಾಗಿದೆ. ಸಂಚಾರ ನಿಯಮಗಳ ಉಲ್ಲಂಘನೆಯೇ ರಸ್ತೆ ಅಪಘಾತಗಳಿಗೆ ಪ್ರಮುಖ ಕಾರಣವಾಗಿದೆ.

ಸಂಚಾರ ನಿಯಮ ಉಲ್ಲಂಘನೆಗಳಲ್ಲಿ ಸಿಗ್ನಲ್ ಜಂಪ್, ಡ್ರಿಂಕ್ ಅಂಡ್ ಡ್ರೈವ್, ಹೆಲ್ಮೆಟ್ ಧರಿಸದೇ ದ್ವಿಚಕ್ರ ವಾಹನ ಚಾಲನೆ ಮಾಡುವುದು ಸೇರಿವೆ. ವಾಹನ ಸವಾರರು ಸಂಚಾರ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಲಿ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರವು 2019 ರಲ್ಲಿ ಹೊಸ ಮೋಟಾರು ವಾಹನ ಕಾಯ್ದೆಯನ್ನು ಜಾರಿಗೊಳಿಸಿತು.

ಕಾಯ್ದೆಯನ್ವಯ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವ ವಾಹನ ಸವಾರರಿಗೆ ಭಾರೀ ಪ್ರಮಾಣದ ದಂಡವನ್ನು ವಿಧಿಸಲಾಗುತ್ತದೆ. ಭಾರೀ ಪ್ರಮಾಣದ ದಂಡ ವಿಧಿಸುವುದರ ವಿರುದ್ಧ ದೇಶದ ಹಲವು ರಾಜ್ಯಗಳಲ್ಲಿ ವ್ಯಾಪಕ ಪ್ರತಿಭಟನೆ ನಡೆಸಲಾಗಿತ್ತು.

ಜನಾಕ್ರೋಶಕ್ಕೆ ಮಣಿದ ಕೆಲವು ರಾಜ್ಯ ಸರ್ಕಾರಗಳು ದಂಡದ ಮೊತ್ತವನ್ನು ಕಡಿಮೆ ಮಾಡಿದ್ದವು. ನಮ್ಮ ಬೆಂಗಳೂರಿನಲ್ಲೂ ಸಂಚಾರಿ ಪೊಲೀಸರು ವಾಹನಗಳ ತಪಾಸಣೆ ನಡೆಸಿ ದಂಡ ವಿಧಿಸುತ್ತಿದ್ದಾರೆ.

ಸಂಚಾರಿ ಪೊಲೀಸರು ರಸ್ತೆಗಳ ಮೂಲೆಗಳಲ್ಲಿ, ಸಿಗ್ನಲ್‌ನಲ್ಲಿ, ಮರಗಳ ಮರೆಯಲ್ಲಿ ನಿಂತು ವಾಹನ ದಟ್ಟಣೆ ಹೆಚ್ಚಾಗಿರುವ ಸಂದರ್ಭದಲ್ಲೂ ವಾಹನ ತಡೆದು ದಂಡ ವಿಧಿಸುತ್ತಾರೆ. ಪೊಲೀಸರ ಈ ಕ್ರಮಕ್ಕೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಕೆಲವೊಮ್ಮೆ ವಾಹನ ಸವಾರರು ಹಾಗೂ ಸಂಚಾರಿ ಪೊಲೀಸರ ನಡುವೆ ಮಾತಿನ ಚಕಮಕಿ ಸಹ ನಡೆಯುತ್ತದೆ.

ಇನ್ನು ಕೆಲವು ಬಾರಿ ಸಂಚಾರಿ ಪೊಲೀಸರು ಹಾಗೂ ನಿಯಮ ಉಲ್ಲಂಘಿಸುವ ವಾಹನ ಸವಾರರ ನಡುವೆ ‘ರಾಜಿ ಸಂಧಾನಗಳು’ ನಡೆಯುತ್ತಿವೆ. ಸಂಚಾರಿ ಪೊಲೀಸರು ಹೇಗೆಂದರೆ ಹಾಗೆ ವಾಹನಗಳನ್ನು ತಡೆದು ನಿಲ್ಲಿಸುತ್ತಿದ್ದ ಕಾರಣಕ್ಕೆ ಟ್ರಾಫಿಕ್ ಜಾಮ್ ಸಹ ಉಂಟಾಗುತ್ತಿದೆ.

ನಿಯಮದ ಪ್ರಕಾರ, ಟ್ರಾಫಿಕ್ ಪೊಲೀಸರು ಈಗ ಚಲನ್ ಮಾಡಲು ನಿಯಮಗಳನ್ನು ಉಲ್ಲಂಘಿಸುವ ವಾಹನದ ಚಿತ್ರ ತೆಗೆಯುವುದರ ಜೊತೆಗೆ ವಿಡಿಯೋ ಮಾಡಬೇಕಾಗುತ್ತದೆ. ಈ ಹೊಸ ನಿಯಮವು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದಿಂದ ಸಾಮಾನ್ಯ ಜನರಿಗೆ ರಿಲೀಫ್ ನೀಡಿದೆ. ಸಚಿವಾಲಯ ಬಿಡುಗಡೆ ಮಾಡಿರುವ ಹೊಸ ಮಾಹಿತಿಯ ಪ್ರಕಾರ, ಈಗ ಟ್ರಾಫಿಕ್ ಪೋಲಿಸರು ಕೇವಲ ಛಾಯಾಚಿತ್ರಗಳನ್ನು ತೆಗೆಯುವ ಮೂಲಕ ಚಲನ್ ಅನ್ನು ಕಡಿತಗೊಳಿಸಲು ಸಾಧ್ಯವಿಲ್ಲ. ಪೋಲಿಸರು ಈಗ ಚಾಲನಿಂಗ್‌ಗಾಗಿ ಜನರ ವೀಡಿಯೊವನ್ನು ಮಾಡಬೇಕಾಗುತ್ತದೆ. ಇದಲ್ಲದೇ, ಸಂಚಾರಿ ನಿಯಮಗಳ ಉಲ್ಲಂಘನೆಯ ನೋಟಿಸ್‌ನ್ನ ಚಲನ್ ಮಾಡಿದ 15 ದಿನಗಳಲ್ಲಿ ಕಳುಹಿಸಬೇಕಾಗುತ್ತದೆ.

ಈಗ ಬದಲಾದ ನಿಯಮದ ಪ್ರಕಾರ, ಫೋಟೋ ತೆಗೆಯುವ ಮೂಲಕ ಚಲನ್ ಅನ್ನು ವಿಧಿಸುವಂತಿಲ್ಲ

ಈಗ ಬದಲಾದ ನಿಯಮಗಳ ಪ್ರಕಾರ, ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸುವ ಚಾಲಕರ ಛಾಯಾಚಿತ್ರಗಳನ್ನು ತೆಗೆಯುವ ಮೂಲಕ ಟ್ರಾಫಿಕ್ ಪೋಲಿಸರಿಗೆ ಚಲನ್ ಅನ್ನು ಕಡಿತಗೊಳಿಸಲು ಸಾಧ್ಯವಾಗುವುದಿಲ್ಲ. ಇದಕ್ಕಾಗಿ ಪೋಲೀಸರು ವಿಡಿಯೋಗಳನ್ನು ಕೂಡ ಮಾಡಬೇಕಾಗುತ್ತದೆ. ಅಧಿಸೂಚನೆಯ ಪ್ರಕಾರ, ಚಲನ್ ನೀಡಲು ಎಲೆಕ್ಟ್ರಾನಿಕ್ ಎನ್ಫೋರ್ಸ್‌ಮೆಂಟ್ ಡಿವೈಸ್‌ನ್ನ ಬಳಸಲಾಗುತ್ತದೆ.

ತಂತ್ರಜ್ಞಾನ ಬಳಸಿ, ಪೊಲೀಸರು ಈಗ ಎಲ್ಲರ ರೆಕಾರ್ಡ್ ಇಟ್ಟುಕೊಳ್ಳುತ್ತಾರೆ

ಕೆಲವು ಹೊಸ ನಿಯಮಗಳ ಪ್ರಕಾರ, ಎಲೆಕ್ಟ್ರಾನಿಕ್ ಎನ್ಫೋರ್ಸ್‌ಮೆಂಟ್ ಡಿವೈಸ್‌ ಗಳಲ್ಲಿ ಸ್ಪೀಡ್ ಕ್ಯಾಮೆರಾಗಳು, ಕ್ಲೋಸ್ಡ್-ಸರ್ಕ್ಯೂಟ್ ಟೆಲಿವಿಷನ್ ಕ್ಯಾಮೆರಾಗಳು, ಸ್ಪೀಡ್ ಗನ್‌ಗಳು, ಬಾಡಿ ವೇರಬಲ್ ಕ್ಯಾಮೆರಾಗಳು, ಡ್ಯಾಶ್‌ಬೋರ್ಡ್ ಕ್ಯಾಮೆರಾಗಳು, ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವಿಕೆ, ತೂಕದ ಯಂತ್ರಗಳು ಮತ್ತು ಇತರ ಹಲವು ಸಾಧನಗಳು ಸೇರಿವೆ. ಸಂಚಾರಿ ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, ಹೊಸ ತಂತ್ರಜ್ಞಾನದ ಬಳಕೆಯು ನಿಯಮಗಳನ್ನು ಉಲ್ಲಂಘಿಸುವ ಚಾಲಕರ ನಿಂದನೀಯ ನಡವಳಿಕೆಯನ್ನು ದಾಖಲಿಸಲು ಪೊಲೀಸರಿಗೆ ಸಹಾಯ ಮಾಡುತ್ತದೆ. ಈ ದಾಖಲೆಯನ್ನ ಪ್ರಕರಣ ಇತ್ಯರ್ಥವಾಗುವವರೆಗೂ ಇರಿಸಲಾಗುತ್ತದೆ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...