ತಂದೆ ತಾಯಿಯರು ಮಕ್ಕಳ ಸಂತೋಷವೇ ತಮ್ಮ ಸಂತೋಷ ಎಂದು ಬದುಕುತ್ತಾರೆ.ಮಕ್ಕಳನ್ನು ಅಪ್ಪನಿಗಿಂತ ಹೆಚ್ಚಾಗಿ ಅಮ್ಮನೇ ಭಾವನಾತ್ಮಕವಾಗಿ ಹಚ್ಚಿಕೊಂಡಿರುತ್ತಾಳೆ ಎಂಬುದು ಗೊತ್ತೇ ಇದೆ.ಅದರಲ್ಲೂ ಅಮ್ಮ-ಮಗಳ ಸಂಬಂಧದಲ್ಲಿ, ಇಬ್ಬರೂ ಒಂದೇ ಜೈವಿಕ ರಚನೆ-ಭಾವನಾತ್ಮಕ ನೆಲೆಗಟ್ಟು ಹೊಂದಿರುತ್ತಾರೆ. ಅಂದರೆ, ಮಗಳು ಹಾದು ಹೋಗುವ ಹದಿಹರೆಯ-ಮುಟ್ಟು-ಮದುವೆ-ಬಸಿರು-ಬಾಣಂತನ ಎಲ್ಲವನ್ನೂ ಹಿಂದೊಮ್ಮೆ ಅಮ್ಮನೂ ಅನುಭವಿಸಿರುತ್ತಾಳೆ. ಹೀಗಾಗಿ ಮಗಳ ಬದುಕಿನ ಬರುವ ಬದಲಾವಣೆಯನ್ನು,

ಸಲಹೆ ನೀಡುತ್ತಾ ಸಲೀಸಾಗಿ ನಿಭಾಯಿಸಿಕೊಂಡು ಹೋಗುತ್ತಾಳೆ ಅಮ್ಮ.ಹಾಗಾಗಿ ಅಮ್ಮ ಮಗಳ ಸಂಬಂಧವು ಬಹಳ ವಿಶೇಷವಾಗಿರುತ್ತದೆ. ಅಮ್ಮನ ಪಾಲಿಗೆ ಮಗಳು ಎಂದರೆ ಒಂದು ರೀತಿಯ ವಾತ್ಸಲ್ಯದ ಪ್ರತಿರೂಪ. ಮಗಳ ತಾಯಿ ಮಮತೆ ಪ್ರೀತಿಯನ್ನು ವಿವರಿಸಲು ಯಾವುದೇ ಪದಗಳು ಸಾಲುವುದಿಲ್ಲ. ಮಗಳು ಎಂದರೆ ಯಾಕೆ ಅಷ್ಟು ವಿಶೇಷತೆ ಎಂದರೆ ಮಗಳು ಎಂಬ ಪದದಲ್ಲಿ ಮಗನೂ ಇದ್ದಾನೆ.

ಒಬ್ಬ ಮಗಳು ಮಗನ ಸ್ಥಾನವನ್ನುನಿಭಾಯಿಸಬಲ್ಲಳು.  ಮಗಳು ಮಗನಿಗಿಂತ ಹೆಚ್ಚಾಗಿ ಧೈರ್ಯ ತುಂಬುವ ಜಾಣ್ಮೆ ಹೆಣ್ಣು ಮಗಳಿಗಿದೆ. ಅದಕ್ಕೆ ಮಗಳನ್ನು ಬೋಧಿಸುವಾಗ ಮಗನೇ ಅನ್ನುತ್ತಾರೆ. ಆದರೆ ಮಗ ಪದದಲ್ಲಿ ಮಗಳು ಇಲ್ಲ. ಅದಕ್ಕೆ ಮಗನನ್ನು ಮಗಳೇ ಎಂದು ಕರೆಯುವುದಿಲ್ಲ. ಹಿಂದಿನ ಕಾಲದಲ್ಲಿ ಹೆಣ್ಣು ಮೂಲೆ ಗುಂಪಾಗಿದ್ದಳು. ಅವಳ ಪ್ರತಿಭೆಯನ್ನು ಅನಾವರಣಗೊಳಿಸಲು ಸಾಧ್ಯವಾಗುತ್ತಿಲ್ಲ. ಈಗ ಕಾಲ ಬದಲಾಗಿದೆ. ಹೆಣ್ಣು ಮಗಳು ಗಂಡಿನಷ್ಟೇ ಸ್ವಾತಂತ್ರ್ಯ ಹೊಂದಿದ್ದಾಳೆ. ಹೆಣ್ಣು ಸಮಾಜದಲ್ಲಿ ಸಮೃದ್ದಿ ಮಹಿಳೆಯಾಗಿ ಬೆಳೆದು ನಿಂತಿದ್ದಾಳೆ. ಸಾಕಷ್ಟು ತಾಯಂದಿರು ತಮ್ಮ ಮಗಳ ಆಸೆಯನ್ನು ನೆರವೇರಿಸಿದ್ದಾರೆ.

ಅಂತೆಯೇ ಇಲ್ಲೊಬ್ಬರು ತಾಯಿ ತನ್ನ ಮಗಳ ಆಸೆಯನ್ನು ಈಡೇರಿಸಿದ್ದಾರೆ. ಮಗಳ ಆಸೆಯಂತೆ ನೃತ್ಯ ಮಾಡಿದ್ದಾರೆ. ಯಾವ ರೀತಿ ನೃತ್ಯ ಮಾಡಿದ್ದಾರೆ ಎಂದರೆ ಆಂಧ್ರಪ್ರದೇಶದಲ್ಲಿ ಇವರು ತುಂಬಾ ಫೇಮಸ್. ಹೌದು ಟಿಕ್ ಟಾಕ್ ಶಾರ್ಟ್ ವೀಡಿಯೋ ಅಪ್ಲಿಕೇಶನ್ ಯಾವ ಮಟ್ಟಿಗೆ ಖ್ಯಾತಿ ಗಳಿಸಿತ್ತು ಎಂಬುದು ನಿಮಗೆ ತಿಳಿದೇ ಇದೆ. ಇನ್ನೂ ಈ ಅಪ್ಲಿಕೇಶನ್ ನನ್ನು ಲಾಕ್ ಡೌನ್ ಸಮಯದಲ್ಲಿ ಸರಿಯಾಗಿ ಉಪಯೋಗಿಸಿಕೊಂಡ ಯುವ ಪ್ರತಿಭೆಗಳು ಇಂದು ಸೆಲೆಬ್ರಿಟಿಗಳಾಗಿದ್ದಾರೆ.  ಜೊತೆಗೆ ಒಂದಷ್ಟು ಫ್ಯಾನ್ಸ್ ಫಾಲ್ಲೋರ್ಸ್ ಅನ್ನು ಸಂಪಾದಿಸಿಕೊಂಡಿದ್ದಾರೆ.

ಈ ಸಾಲಿನಲ್ಲಿ ಈ ತಾಯಿ ಹಾಗೂ ಮಗಳು ಕೂಡ ಹೌದು. ಮೂಲತಃ ತೆಲಂಗಾಣ ದವರಾದ ಡಾಕ್ಟರ್ ಸಿರಿ ಚೆಲ್ಲಾ ಎಂಬ ಯುವತಿ ಈಗ ತಾನೇ ಬಿಡಿಎಸ್ ಮುಗಿಸಿದ್ದಾರೆ. ಗೃಹಿಣಿಯಾಗಿರುವ ಅವರ ತಾಯಿ ಜಯಪ್ರದಾ ಅವರಿಗೆ ಸಿನಿಮಾಗಳೆಂದರೆ ಬಹಳ ಇಷ್ಟವಂತೆ. ಅದು ಅಲ್ಲದೇ ಲಾಕ್ ಡೌನ್ ಸಮಯದಲ್ಲಿ ಬಹಳ ಬೇಸರವಾಗುತ್ತಿದ್ದರಿಂದ ಇವರಿಬ್ಬರು ಟಿಕ್ ಟಾಕ್ ಮಾಡಲು ಪ್ರಾರಂಭಿಸಿದ್ದಾರೆ. ತೆಲುಗಿನ ಪುಟ್ಟ ಬೊಮ್ಮ ಎಂಬ ಫೇಮಸ್ ಹಾಡು ಸೇರಿದಂತೆ ಎಲ್ಲಾ ಚಿತ್ರದ ಹಾಡುಗಳಿಗೂ ನೃತ್ಯ ಮಾಡಿರುವ ಈ ಅಮ್ಮಮಗಳ ಜೋಡಿ ಸಾಮಾಜಿಕ ಜಾಲತಾಣದಲ್ಲಿ ಸೆನ್ಸೇಷನ್ ಮೂಡಿಸಿದ್ದಾರೆ. ಹಾಗೂ ತಾಯಿ ಜಯಪ್ರದಾ ಅವರ ಎನರ್ಜಿಗೆ ನೆಟ್ಟಿಗರು ಹ್ಯಾಟ್ಸಾಫ್ ಹೇಳುತ್ತಿದ್ದಾರೆ. ಒಟ್ಟಿನಲ್ಲಿ ತಾಯಿ ಮಗಳ ಎನರ್ಜಿಟಿಕ್ ಸ್ಟೆಪ್ ಗೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •