ನಮ್ಮ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ದೇಶದಲ್ಲಿ ಹಲವು ಯೋಜನೆಗಳನ್ನ ಜಾರಿಗೆ ತಂದಿದೆ ಮತ್ತು ಇಂದಿಗೂ ಕೂಡ ಹಲವು ಯೋಜನೆಗಳನ್ನ ಜಾರಿಗೆ ತರುತ್ತಲೇ ಇದೆ. ಇನ್ನು ದೇಶದಲ್ಲಿ ಮಹಿಳಾ ಸಬಲೀಕರಣದ ಉದ್ದೇಶದಿಂದ ಮತ್ತು ಹೆಣ್ಣು ಮಕ್ಕಳ ಭವಿಷ್ಯದ ಉದ್ದೇಶದಿಂದ ಈಗಾಗಲೇ ಹಲವು ಯೋಜನೆಗಳನ್ನ ಜಾರಿಗೆ ತರಲಾಗಿದೆ ಮತ್ತು ಇಂದಿಗೂ ಕೂಡ ಹಲವು ಯೋಜನೆಗಳನ್ನ ಜಾರಿಗೆ ತರಲಾಗುತ್ತಲೇ ಇದೆ. ಹೌದು ಕೇಂದ್ರ ಮತ್ತು ರಾಜ್ಯ ಸರ್ಕಾರ ಮಹಿಳಾ ಸಬಲೀಕರಣ ಮತ್ತು ಹೆಣ್ಣು ಮಕ್ಕಳ ಶುಶು ರಕ್ಷಣೆ ಹಾಗೆ ಹೆಣ್ಣು ಮಕ್ಕಳ ಶಿಕ್ಷಣ ಮತ್ತು ವಿದ್ಯಾಭ್ಯಾಸಕ್ಕಾಗಿ ಹಲವಾರು ಯೋಜನೆಗಳನ್ನ ಈಗಾಗಲೇ ಜಾರಿಗೆ ತರಲಾಗಿದೆ ಮತ್ತು ಅದರಲ್ಲಿ ಪ್ರಮುಖವಾಗಿ ಸುಕನ್ಯಾ ಸಮೃದ್ಧಿ ಯೋಜನೆ ಕೂಡ ಒಂದು ಎಂದು ಹೇಳಬಹುದು.

ಇನ್ನು ಈ ಯೋಜನೆ ದೇಶದಲ್ಲಿ ಇರುವ ಹೆಣ್ಣು ಮಕ್ಕಳಿಗೆ ಮಾತ್ರ ಲಭ್ಯವಿದೆ, ಮಗು ಹುಟ್ಟಿದಾಗಿನಿಂದ ಆಕೆಗೆ 18 ವರ್ಷ ತುಂಬಿದ ನಂತರ ಈ ಯೋಜನೆಯ ಸಂಪೂರ್ಣ ಲಾಭವನ್ನ ಪಡೆದುಕೊಳ್ಳಬಹುದಾಗಿದೆ. ಇನ್ನು ಈ ಬಂದಿರುವ ಮಾಹಿತಿ ಏನು ಅಂದರೆ ಈ ಯೋಜನೆಯ ಗಡುವು ನಿನ್ನೇನು ಕೆಲವೇ ದಿನಗಳು ಮಾತ್ರ ಇರಲಿದ್ದು ಈ ಯೋಜನೆಗೆ ಹೆಸರನ್ನ ನೋಂದಾವಣೆ ಮಾಡದ ಎಲ್ಲರೂ ಆದಷ್ಟು ಬೇಗ ನೋಂದಾವಣೆ ಮಾಡಿಕೊಳ್ಳಬೇಕಾಗಿದೆ. ಇನ್ನು ಈಗ ವಿಷಯಕ್ಕೆ ಬರುವುದಾದರೆ ಈ ಯೋಜನೆಯ ಲಾಭವನ್ನ ಪಡೆಯುವುದು ಹೇಗೆ ಮತ್ತು ಈ ಯೋಜನೆಯಿಂದ ಏನೇನು ಲಾಭ ಸಿಗುತ್ತದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಯೋಜನೆಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Femal-child

ಕೇಂದ್ರ ಸರ್ಕಾರದಿಂದ ಹೆಣ್ಣು ಮಗುವಿನ ವಿದ್ಯಾಭ್ಯಾಸ ಹಾಗು ಆಕೆಯ ಮದುವೆಯಾಗಾಗಿ ಆರ್ಥಿಕವಾಗಿ ಸಹಾಯವಾಗಲಿ ಅನ್ನುವ ಕೇಂದ್ರ ಸರ್ಕಾರ ಈ ಯೋಜನೆಯನ್ನ ಜಾರಿಗೆ ತಂದಿದೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಈ ಯೋಜನೆ ಬಡ ಕುಟುಂಬದಲ್ಲಿ ಹುಟ್ಟುವ ಹೆಣ್ಣು ಮಕ್ಕಳಿಗೆ ಬಹಳ ಸಹಾಯಕವಾಗಲಿದೆ. ಇನ್ನು ಹತ್ತು ವರ್ಷದ ಒಳಗಿನ ಹೆಣ್ಣು ಮಗುವನ್ನ ಹೊಂದಿರುವ ತಂದೆ ತಾಯಿ ಅಥವಾ ಪಾಲಕರು ಪೋಸ್ಟ್ ಆಫೀಸ್ ನಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯ ಖಾತೆಯನ್ನ ತೆರೆಯಬೇಕು ಮತ್ತು ಪ್ರತಿ ವರ್ಷ ಈ ಖಾತೆಗೆ ನಿಮ್ಮ ಕೈಯಲ್ಲಿ ಆಗುವಷ್ಟು ಹಣವನ್ನ ಜಮಾವಣೆ ಮಾಡಬೇಕು.

ಇನ್ನು ಮಗು ಹುಟ್ಟಿದಾಗಿನಿಂದ ಆಕೆಗೆ 14 ವರ್ಷ ತುಂಬುವ ತನಕ ಪೋಷಕರು ಮತ್ತು ಪಾಲಕರು ಪ್ರತಿ ವರ್ಷ ತಮ್ಮ ಕೈಯಲ್ಲಿ ಆದಷ್ಟು ಹಣವನ್ನ ಈ ಖಾತೆಗೆ ಜಮಾವಣೆ ಮಾಡಬೇಕು ಮತ್ತು ಮುಂದಿನ ದಿನಗಳಲ್ಲಿ ತಂದೆ ತಾಯಿ ಅಥವಾ ಪೋಷಕರು ದೊಡ್ಡ ಮೊತ್ತದ ಲಾಭವನ್ನ ಪಡೆಯಬಹುದಾಗಿದೆ. ಇನ್ನು ಪೋಸ್ಟ್ ಆಫೀಸ್ ನಲ್ಲಿ ಈ ಖಾತೆಯನ್ನ ತೆರೆಯಲು ಕೇವಲ 250 ರೂಪಾಯಿ ಸಾಕು. ಪ್ರತಿ ವರ್ಷ ಅಥವಾ ಪ್ರತಿ ತಿಂಗಳು ನಿಮ್ಮ ಕೈಯಲ್ಲಿ ಸಾಧ್ಯವಾದಷ್ಟು ಹಣವನ್ನ ಈ ಖಾತೆಗೆ ಜಮಾವಣೆ ಮಾಡಬಹುದಾಗಿದೆ, ಆದರೆ ಒಂದು ವರ್ಷಕ್ಕೆ 1.50 ಲಕ್ಷ ಹಣಕ್ಕಿಂತ ಹೆಚ್ಚಿನ ಹಣವನ್ನ ಈ ಖಾತೆಗೆ ಜಮಾ ಮಾಡುವ ಹಾಗಿಲ್ಲ ಮತ್ತು ಹೆಚ್ಚು ಹಣ ಹಾಕಿದರೆ ಕೇಂದ್ರ ಸರ್ಕಾರ ಆ ಹಣಕ್ಕೆ ಯಾವುದೇ ಬಡ್ಡಿಯನ್ನ ನೀಡುವುದಿಲ್ಲ.

ಇನ್ನು ಜಮಾ ಮಾಡಿದ ಎಲ್ಲಾ ಹಣವನ್ನ ಮಗುವಿಗೆ 18 ವರ್ಷ ವಯಸ್ಸು ಆದಮೇಲೆ ಶಿಕ್ಷಣದ ಉದ್ದೇಶಕ್ಕಾಗಿ ಸ್ವಲ್ಪ ಹಣವನ್ನ ಡ್ರಾ ಮಾಡಿಕೊಳ್ಳಬಹುದು ಮತ್ತು 21 ವರ್ಷ ವಯಸ್ಸು ಆದಮೇಲೆ ಆಕೆಯ ಮದುವೆಗಾಗಿ ಸಂಪೂರ್ಣ ಹಣವನ್ನ ತಂದೆ ತಾಯಿ ಅಥವಾ ಪೋಷಕರು ಪಡೆಯಬಹುದಾಗಿದೆ. ಇನ್ನು ಈ ಯೋಜನೆ ದೇಶದಲ್ಲಿ ಜಾರಿಗೆ ಬಂದು ಹಲವು ತಿಂಗಳುಗಳು ಕಳೆದಿದ್ದು ದೇಶದಲ್ಲಿ ಈಗಾಗಲೇ ಹಲವು ಮಂದಿ ಪೋಸ್ಟ್ ಆಫೀಸ್ ನಲ್ಲಿ ಖಾತೆ ತೆರೆದಿದ್ದಾರೆ, ಆದರೆ ಇನ್ನು ಹಲವು ಜನರು ಇನ್ನು ಕೂಡ ಈ ಖಾತೆಯನ್ನ ತೆರೆದಿಲ್ಲ. ಇನ್ನು ಈ ಯೋಜನೆ ಇದೆ ತಿಂಗಳು 30 ನೇ ತಾರೀಕಿನಂದು ಕೊನೆಗೊಳ್ಳಲಿದ್ದು ಸ್ನೇಹಿತರೆ ಈ ಮಾಹಿತಿಯನ್ನ ಹೆಣ್ಣು ಮಗುವನ್ನ ಹೊಂದಿರುವ ಎಲ್ಲಾ ತಂದೆ ತಾಯಿ ಮತ್ತು ಪೋಷಕರಿಗೆ ತಲುಪಿಸಿ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •