ತಂದೆ ತಾಯಿಯರ ಕಷ್ಟಕ್ಕೆ ಮಕ್ಕಳು ನೆರವಾಗುತ್ತಾರೆ ಎಂದು ಕೇಳಿದ್ದೀವಿ ಆದರೆ ತ್ಯಾಗಗಳನ್ನು ಮಾಡಿ ,ಅದರಲ್ಲೂ ಈ ಕಲಿಯುಗದಲ್ಲೂ ಇಂತಹ ಕೆಲಸ ಮಾಡಿದ ಈ ಸಹೋದರಿಯರ ಧೈರ್ಯ ನಾವು ಮೆಚ್ಚಲೆಬೇಕು.ಉತ್ತರಪ್ರದೇಶದ ಈ ಇಬ್ಬರೂ ಸಹೋದರಿಯರು ತಮ್ಮ ಅಪ್ಪನ ಚಿಕಿತ್ಸೆಗೋಸ್ಕರ ತಮ್ಮ ಜೀವನದ ನಾಲ್ಕು ವರ್ಷವನ್ನು ಹುಡುಗರಂತೆ ವೇಷ ಧರಿಸಿ ನಡೆಸಿದ್ದಾರೆ.

ಇಬ್ಬರೂ ಸಹೋದರಿಯರು ಹುಡುಗರಂತೆ ಕಟಿಂಗ್ ಮಾಡಿಸಿಕೊಂಡು ಪುರುಷರಂತೆ ಕಾಣುವಂತೆ ಮಾಡಿಕೊಂಡು,ತಮ್ಮ ತಂದೆಯ ಸೆಲೂನ್ ಅನ್ನು ನಾಲ್ಕು ವರ್ಷಗಳ ಕಾಲ ನಡೆಸಿದ್ದಾರೆ.ಇಡಿ ಕುಟುಂಬಕ್ಕೆ ಅಪ್ಪನ ಸೆಲೂನ್ ಆಧಾರವಾಗಿತ್ತು,ಅಪ್ಪ ಹಾಸಿಗೆ ಇಡಿದರು ಜೀವನ ತೀರಾ ಕಷ್ಟಮಯವಾಗಿಬಿಟ್ಟಿತು‌.ಇತ್ತ ಊಟಕ್ಕೂ ಕಷ್ಟ ಅಪ್ಪನ ಚಿಕಿತ್ಸೆಗೂ ಹಣವಿಲ್ಲ.ಅಪ್ಪನ ಸೆಲೂನ್ ಮುಚ್ಚಬಾರದು ಎಂದು ತೀರ್ಮಾನಿಸಿದ ಸಹೋದರಿಯರು ಸೆಲೂನ್ ಗೆ ಹೊಸ ಹುರುಪು ಕೊಟ್ಟರು.

ಹದಿನೆಂಟು ವರ್ಷ ವಯಸ್ಸಿನ ಜ್ಯೋತಿ ಕುಮಾರಿ ಹಾಗೂ ಹದಿನಾರು ವರ್ಷ ವಯಸ್ಸಿನ ನೇಹಾ ಹುಡುಗರಂತೆ ವೇಷ ಧರಿಸಿಯೆಬಿಟ್ಟರು.ಕೆಲಸ ಶುರು ಮಾಡಿದ ಪ್ರಾರಂಭದ ದಿನಗಳಲ್ಲಿ ಜನರು ಇವರ ಬಳಿ ಕಟಿಂಗ್,ಶೇವಿಂಗ್ ಮಾಡಿಸಲು ಮುಜುಗರಪಡುತ್ತಿದ್ದರಂತೆ.ಈ‌ ಕಾರಣದಿಂದ ಇವರು ಹುಡುಗರಂತೆ ಕೈಗೆ ಸ್ಟೀಲ್ ಬ್ರಾಸ್ ಲೇಟ್ ಹಾಕಿ ರಾಜು ಹಾಗೂ ದೀಪಕ್ ಅಂತ ಹೆಸರಿಟ್ಟಕೊಂಡು ಕೆಲಸ ಮಾಡುಲು ಶುರು ಮಾಡಿದ್ದರಂತೆ.

Father

ಈ ಊರಿನವರು ಬಿಟ್ಟರೆ ಇನ್ನೂ ಹೊರಗಿನಿಂದ ಬಂದ ಗ್ರಾಹಕರಿಗೆ ಇವರು ಹುಡುಗಿಯರು ಎಂದು ತಿಳಿಯುತ್ತಿರಲಿಲ್ಲವಂತೆ. ಆರಂಭದಲ್ಲಿ ಊರಿನ ಗ್ರಾಮಸ್ಥರು ಇವರಿಬ್ಬರನ್ನೂ ನೋಡಿ ಚುಡಾಯಿಸುವುದು ಅಪಹಾಸ್ಯ ಮಾಡುವುದು ಮಾಡುತ್ತಿದ್ದರಂತೆ. ಎಲ್ಲವನ್ನೂ ಸಹಿಸಿಕೊಂಡ ಸಹೋದರಿಯರು ತಮ್ಮ ಗುರಿ ಬಿಡಲಿಲ್ಲ.ಸಹೋದರಿ ಜ್ಯೋತಿ ಈಗ ಕೆಲಸ ಮಾಡುತ್ತಲೇ ಡಿಗ್ರಿ ಮುಗಿಸಿದ್ದಾಳೆ,ನೇಹಾ ಇನ್ನೂ ವ್ಯಾಸಂಗ ಮಾಡುತ್ತಿದ್ದಾಳೆ.

Father

ಬೆಳಿಗ್ಗೆ ಕಾಲೇಜಿಗೆ ಹೋಗಿ ಮಧ್ಯಾಹ್ನ ಸೆಲೂನ್ ನಡೆಸಿ ಅಪ್ಪನ ಕಷ್ಟಕ್ಕೆ ನೆರವಾದ ಈ ಸಹೋದರಿಯರಿಗೆ ಒಂದು ಸೆಲ್ಯೂಟ್ ಹಾಕೋಣ. ತಂದೆ ಧ್ರುವ ನಾರಾಯಣ್ ಅವರು ಮಕ್ಕಳ ಬಗ್ಗೆ ಹೆಮ್ಮೆ ಪಡುತ್ತಾರೆ.ಈ ಸುದ್ದಿಯೂ ಸ್ಥಳಿಯ ಪತ್ರಿಕೆಯಲ್ಲಿ ಪ್ರಕಟವಾಯಿತು ಆಗ ಸರ್ಕಾರ ಈ ಇಬ್ಬರೂ ಸಹೋದರಿಯರಿಗೆ ನಗದು ಬಹುಮಾನ ಕೊಟ್ಟು ಗೌರವಿಸಿತು.ಏನೇ ಆಗಲಿ ಸ್ನೇಹಿತರೆ ಹೆಣ್ಣು ಬಾಳಿನ ಕಣ್ಣು ಎನ್ನುತ್ತಾರೆ ಇದನ್ನು ನಿರೂಪಿಸಿದ ಈ ಇಬ್ಬರೂ ಸಹೋದರಿಯರು ಎಲ್ಲರಿಗೂ ಮಾದರಿ.

Father

ಇವರ ಸಾಧನೆ ಹಠ ಛಲ ನಿಮಗೆ ಇಷ್ಟವಾದರೆ ತಪ್ಪದೆ ಒಂದೇ ಒಂದು ಶೇರ್ ಮಾಡಿ ಸೂಪರ್ ಅಂತ ಕಾಮೆಂಟ್ ಮಾಡಿ.ದೇಶದ ಎಲ್ಲರಿಗೂ ಈ ಸಹೋದರಿಯರ ಸಾಧನೆ ತಿಳಿಯಲಿ ಈಗಿನ ಯುವ ಪೀಳಿಗೆಗೆ ಸ್ಪೂರ್ತಿಯಾಗಲಿ ಧನ್ಯವಾದ ಸ್ನೇಹಿತರೆ. ಮತ್ತಷ್ಟು ಲೇಟೆಸ್ಟ್ ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •