ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ತೋಟಗಾರಿಕೆ ಬೆಳೆಗಳಿಗೆ ಉಪಯೋಗಿಸುವ ಅನುಮೋದಿತ ಯಂತ್ರೋಪಕರಣ ಖರೀದಿಗೆ ಸಹಾಯಧನಕ್ಕಾಗಿ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.

ರೈತರು ತೋಟಗಾರಿಕೆ ಇಲಾಖೆಗೆ ಅರ್ಜಿ ಸಲ್ಲಿಸಿ ಸೌಲಭ್ಯವನ್ನು ಪಡೆಯಬಹುದು. ತೋಟಗಾರಿಕೆ ಕೆಲಸಕ್ಕೆ ಅನುಕೂಲ ಆಗುವಂಥ ಯಂತ್ರಗಳ ಖರೀದಿಗೆ ಸಹಾಯಧನ ನೀಡಲಾಗುತ್ತದೆ. ತೆಂಗಿನ ಮರ ಹತ್ತುವ ಯಂತ್ರದಿಂದ ಹಿಡಿದು, ಔಷಧಿ ಸಿಂಪರಣೆ, ಬೆಳೆ ಕಾಟಾವು ಎಲ್ಲ ರೀತಿಯ ಯಂತ್ರಗಳನ್ನು ಸಬ್ಸಿಡಿ ದರದಲ್ಲಿ ಪಡೆಯಬಹುದು.

ಯಾವ ಯಂತ್ರಗಳು ಸಿಗಲಿವೆ?

ಜೌಷಧಿ ಸಿಂಪರಣೆ ಮಾಡುವ ಯಂತ್ರ

ಕಸ ತೆಗೆಯುವ ಯಂತ್ರ

ಬೆಳೆ ಕಟಾವು ಯಂತ್ರಗಳು

ಸಾವಯವ ಅವಶೇಷ ಕತ್ತರಿಸುವ ಯಂತ್ರ

ಚೈನ್‍ಸಾ, ತೆಂಗಿನ ಮರ ಹತ್ತುವ ಯಂತ್ರ

ಅರಿಷಿಣ ಕುದಿಸುವ ಯಂತ್ರ

ಪ್ಲಾಸ್ಟಿಕ್ ಹೊದಿಕೆ ಮಾಡುವ ಯಂತ್ರ

ರೊಟೊವೆಟರ್, ಸೋಲಾರ್ ಡ್ರೈಯರ್

ಮೋಹಕ ಬಲೆ, ಪಲ್ಪರ್

ಗ್ರೇಡಿಂಗ್ ಮಷಿನ್, ಗುಂಡಿ ತೆಗೆಯುವ ಯಂತ್ರ

ನೀರು ಸಂಗ್ರಹಣಾ ಘಟಕಗಳಿಗೆ ಸಂರಕ್ಷಿತ ಬೇಸಾಯದಡಿ ಪಾಲಿಥಿನ್‍ಶಿಟ್ ಹಾಗೂ ಗಿಡಗಳ ಬದಲಾವಣೆಗಳಿಗೆ ಸಹಾಯಧನ ನೀಡಲಾಗುತ್ತದೆ. ಇದೆಲ್ಲದಕ್ಕೆ ಸಹಾಯಧನ ನೀಡಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ತೋಟಗಾರಿಕೆ ಬೆಳೆಗಾರರು ಆಯಾ ತಾಲ್ಲೂಕಿನ ತೋಟಗಾರಿಕೆ ಇಲಾಖೆ ಸಂಪರ್ಕಿಸಿ ಅರ್ಜಿ ಸಲ್ಲಿಸುವಂತೆ ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •