ವಿಜಯ ಲಕ್ಷ್ಮೀ ದರ್ಶನ್ ಅವರು ಮೈಸೂರಿನ ಫಾರ್ಮ್ ಹೌಸ್ ನಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ ಅದರ ಬಗ್ಗೆ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ವಿಜಯ ಲಕ್ಷ್ಮೀ ದರ್ಶನ್ ಅವರು ಇತ್ತೀಚೆಗೆ ರೈತರಿಗೆ ನೆರವಾಗಲು ಮೈ ಫ್ರೆಶ್ ಬಾಸ್ಕೆಟ್ ಎಂಬ ಆನ್ಲೈನ್ ಅಪ್ಲಿಕೇಷನ್ ತೆಗೆಯುವುದರ ಮೂಲಕ ರೈತರು ಬೆಳೆದ ಹಣ್ಣು, ತರಕಾರಿಗಳನ್ನು ಗ್ರಾಹಕರಿಗೆ ನೇರವಾಗಿ ತಲುಪಿಸುವ ಕೆಲಸದಲ್ಲಿ ನಿರತರಾಗಿದ್ದರು. ವಿಜಯ ಲಕ್ಷ್ಮೀ ಅವರ ಈ ಕೆಲಸವನ್ನು ಗುರುತಿಸಿ ಸಂಸ್ಥೆಯೊಂದು ಉದಯೋನ್ಮುಖ ಮಹಿಳಾ ಉದ್ಯಮಿ ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರೀಯರಾಗಿರುವ ವಿಜಯ ಲಕ್ಷ್ಮೀ ದರ್ಶನ್ ಅವರು ತಮ್ಮ ಸ್ನೇಹಿತರೊಂದಿಗೆ ಈ ವಿಷಯವನ್ನು ಹಂಚಿಕೊಂಡು ಸಂತಸ ಪಟ್ಟಿದ್ದರು. ಇವರು ಹೆಚ್ಚು ಮಗ ವಿನೀಶ್ ನ ಜೊತೆ ಕಾಲ ಕಳೆಯುತ್ತಾರೆ. ವಾರಾಂತ್ಯದಲ್ಲಿ ಮಗನನ್ನು ಮೈಸೂರಿನ ಫಾರ್ಮ್ ಹೌಸ್ ಗೆ ಕರೆದುಕೊಂಡು ಬಂದು ಮಗನಿಗೆ ಇಷ್ಟವಾದ ಹಾರ್ಸ್ ರೈಡ್ ಮಾಡಿಸುತ್ತಾರೆ ತಾವು ಕೂಡ ಹಾರ್ಸ್ ರೈಡ್ ಮಾಡಿದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಮನಸ್ಸಿಗೆ ಇಷ್ಟವಾಗುವ ಕೆಲಸ ಯಾವುದಾದರೂ ಆಗಿರಲಿ ಅದನ್ನು ಬಿಡದೆ ಮಾಡಬೇಕು ಅದು ನಮ್ಮನ್ನು ದೂರ ತಳ್ಳಿದರು ನಾವು ಬಿಗಿಯಾಗಿ ಅಪ್ಪಿಕೊಂಡು ಹಿಡಿಯಬೇಕು ಎಂದು ಪೋಸ್ಟ್ ಮಾಡಿದ್ದಾರೆ. ಮೈಸೂರಿನಲ್ಲಿ ಉಳಿದು ನಂತರ ಬೆಂಗಳೂರಿಗೆ ಬರುವ ಅಭ್ಯಾಸ ಇಟ್ಟುಕೊಂಡಿದ್ದಾರೆ.

vijayaLaxmi-Darshan

ಆಯುಧ ಪೂಜೆಯ ಸಮಯದಲ್ಲಿ ಮೈಸೂರಿಗೆ ಬಂದ ವಿಜಯ ಲಕ್ಷ್ಮೀ ಅವರು ಮೈಸೂರಿನಲ್ಲಿ ಉಳಿದು ಹಬ್ಬವನ್ನು ಆಚರಿಸಿದ್ದಾರೆ. ಕೊರೋನ ಹಾಗೂ ಲಾಕ್ ಡೌನ್ ಸಮಯದಲ್ಲಿ ದರ್ಶನ್ ಅವರು ಫಾರ್ಮ್ ಹೌಸ್ ನಲ್ಲಿಯೇ ಹೆಚ್ಚು ಸಮಯ ಕಳೆದಿದ್ದರೂ ಇತ್ತೀಚೆಗೆ ಹೊಸ ಟ್ರಾಕ್ಟರ್ ಕೊಂಡು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದರು ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈಗ ವಿಜಯಲಕ್ಷ್ಮೀ ಅವರು ದರ್ಶನ್ ಅವರಿಗೆ ಸಾಥ್ ನೀಡಿದ್ದಾರೆ. ತಾವೇ ಮುಂದೆ ನಿಂತು ಕೃಷಿಯನ್ನು ಮಾಡಿಸಿದರೆ ಇನ್ನಷ್ಟು ಕೃಷಿಯ ಬಗ್ಗೆ ಅನುಭವ ಸಿಗಬಹುದು ಎಂಬ ಕಾರಣದಿಂದ ಮೈಸೂರಿನಲ್ಲಿ ಕೃಷಿ ಚಟುವಟಿಕೆಯನ್ನು ಆರಂಭಿಸಿದ್ದಾರೆ.

ಅಲ್ಲದೇ ಮಗನಿಗೂ ಕೃಷಿ ಚಟುವಟಿಕೆ ಬಗ್ಗೆ ತಿಳುವಳಿಕೆ ನೀಡುತ್ತಿದ್ದಾರೆ. ಹೆಚ್ಚು ಕಾಲ ಮೈಸೂರಿನ ಫಾರ್ಮ್ ಹೌಸ್ ನಲ್ಲಿ ಕಳೆಯುವುದರಿಂದ ಮಗನೂ ಸುಲಭವಾಗಿ ಕೃಷಿ ಚಟುವಟಿಕೆಯನ್ನು ನೋಡುತ್ತಿರುತ್ತಾನೆ. ಒಟ್ಟಿನಲ್ಲಿ ದರ್ಶನ್ ಹಾಗೂ ವಿಜಯ ಲಕ್ಷ್ಮೀ ದರ್ಶನ್ ಅವರ ಕೆಲಸದಿಂದ ರೈತರಿಗೆ ಸಹಾಯವಾಗುತ್ತದೆ ಅವರ ಈ ಕೆಲಸ ಶ್ಲಾಘನೀಯ. ಇದರಿಂದ ಅಭಿಮಾನಿಗಳು ಸಂತಸ ಪಟ್ಟಿದ್ದಾರೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •