ಸೋಶಿಯಲ್ ಮೀಡಿಯಾ ಮೂಲಕ ಹಣ ಗಳಿಸಬಹುದು, ಅದರಲ್ಲೂ ಫೇಸ್ಬುಕ್, ಇನ್ಸ್ಟಾಗ್ರಾಮ್ ನಲ್ಲಿ ನೀವು ತಿಂಗಳಿಗೆ ಸಾಕಷ್ಟು ಹಣ ಗಳಿಸಬಹುದು. ಈಗಾಗಲೇ ಕರ್ನಾಟಕ ಸೇರಿದಂತೆ ಭಾರತದ ಹಲವಾರು ರಾಜ್ಯದ ಯುವಕ ಯುವತಿಯರು ಇದೇ ರೀತಿ ಫೇಸ್ಬುಕ್, ಇನ್ಸ್ಟಾಗ್ರಾಮ್ ಮೂಲಕ ಹಣ ಗಳಿಸುತ್ತಿದ್ದಾರೆ. ಹಣ ಗಳಿಸಲು ಇದು ಸುಲಭದ ಮಾರ್ಗ ಹೌದು..ನಾವೆಲ್ಲರೂ ಒಂದು ದಿನಕ್ಕೆ ಸಾಕಷ್ಟು ಸಮಯ ಫೇಸ್ಬುಕ್ ಹಾಗು ಇನ್ಸ್ಟಾಗ್ರಾಮ್ ಸೇರಿದಂತೆ ಹಲವಾರು ಸೋಶಿಯಲ್ ಮೆಡಿಯಗಳಾನ್ನು ಬಳಿಸುತ್ತೇವೆ! ಈಗ ನೀವು ಇದ್ದರಿಂದ ನಿಮ್ಮ ಜೀವನಕ್ಕೆ ಬೇಕಾಗುವ ಸಾಕಷ್ಟು ಹಣ ಕೂಡ ಗಳಿಸಬಹುದು! ಫೇಸ್ಬುಕ್, ಇನ್ಸ್ಟಾಗ್ರಾಮ್ ಮೂಲಕ ಗಣ ಗಳಿಸುವ ವಿಧಾನ ಹೇಗೆ ಗೊತ್ತಾ..? ಇದರ ಬಗ್ಗೆ ತಿಳಿಯಲು,ಸ್ಕ್ರಾಲ್ ಡೌನ್ ಮಾಡಿ ಮುಂದೆ ಓದಿ..

ನಮಗೆಲ್ಲ ತಿಳಿದಿರುವ ಹಾಗೆ ಟಿಕ್ ಟಾಕ್ ಬಹಳ ಜನಪ್ರಿಯತೆ ಹೊಂದಿತ್ತು. ಟಿಕ್ ಟಾಕ್ ಮೂಲಕ ಹಲವಾರು ಹುಡುಗಿಯರು ಸಾಕಷ್ಟು ಅಭಿಮಾನಿಗಳು ಮತ್ತು ಫಾಲೋವರ್ಸ್ ಗಳನ್ನು ಗಳಿಸಿದ್ದರು. ಸಾಮಾನ್ಯವಾಗಿ ಟಿಕ್ ಟಾಕ್ ನಲ್ಲಿ ಜನಪ್ರಿಯತೆ ಪಡೆದಿರುವವರು ಫೇಸ್ಬುಕ್, ಇನ್ಸ್ಟಾಗ್ರಾಮ್ ನಲ್ಲೂ ಅಧಿಕ ಫಾಲೋವರ್ಸ್ ಗಳನ್ನು ಹೊಂದಿರುತ್ತಾರೆ. ಈಗ ಟಿಕ್ ಟಾಕ್ ಬ್ಯಾನ್ ಆದಮೇಲೆ ರೊಪಾಸೋ, ಇನ್ಸ್ಟಾಗ್ರಾಮ್ ರೇಲ್ಸ್ ಸೇರಿದಂತೆ ಸಾಕಷ್ಟು ಅದೇ ತರಹದ ಅಪ್ ಗಳು ಬಂದಿವೆ! ನೀವು ಇದರಲ್ಲಿ ಹಾಸ್ಯ ವಿಡಿಯೋಗಳನ್ನು, ಹಾಡಿನ ವಿಡಿಯೋಗಳನ್ನು, ಡಾನ್ಸ್ ವಿಡಿಯೋಗಳನ್ನು, ಮಾಡಿ ಫೇಮಸ್ ಆಗಬಹುದು! ನಂತರ ನಿಮ್ಮ ಈ ವಿಡಿಯೋಗಳಿಂದ ನಿಮಗೆ ಫೇಸ್ಬುಕ್ ಹಾಗು ಇನ್ಸ್ಟಾಗ್ರಾಮ್ ನಲ್ಲಿ ಸಾಕಷ್ಟು ಜನ ಅಭಿಮಾನಿಗಳು ಬರುತ್ತಾರೆ.

facebook-instagram

ವಿಷಯ ಏನೆಂದರೆ.. ಇನ್ಸ್ಟಾಗ್ರಾಮ್ ಹಾಗು ಫೇಸ್ಬುಕ್ ನಲ್ಲಿ ನಿಮಗೆ ಅಧಿಕ ಫಾಲೋವರ್ಸ್ ಗಳಿದ್ದರೆ ನಿಮ್ಮ ಅಕೌಂಟ್ ಅನ್ನು ಹಲವಾರು ಬ್ರಾಂಡ್ ಕಂಪನಿಗಳು ಗಮನಿಸುತ್ತಾ ಇರುತ್ತಾರೆ. ನಿಮ್ಮ ಪೋಸ್ಟ್ ಗಳಿಗೆ ಎಷ್ಟು ಲೈಕ್ಸ್ ಬರುತ್ತದೆ, ನಿಮ್ಮ ಇನ್ಸ್ಟಾ ಸ್ಟೋರಿಯನ್ನು ಎಷ್ಟು ಜನ ವೀಕ್ಷಿಸುತ್ತಾರೆ ಎಂಬುದನ್ನು ಗಮನಿಸಿ, ಕಂಪನಿಯವರು ತಮ್ಮ ಪ್ರಾಡಕ್ಟ್ ಗಳನ್ನು ಪ್ರೊಮೋಟ್ ಮಾಡಲು ನಿಮ್ಮನ್ನು ಅಪ್ರೋಚ್ ಮಾಡುತ್ತಾರೆ. ಇದು ಹೇಗೆ ಎಂದರೆ ಕಂಪನಿಯ ಪ್ರಾಡಕ್ಟ್ ಬಗ್ಗೆ ಒಳ್ಳೆಯ ಅಭಿಪ್ರಾಯ ತಿಳಿಸಿ ಒಂದು ವಿಡಿಯೋ ಮಾಡಿ ನೀವು ಅದನ್ನು ನಿಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಬೇಕು. ಇದಕ್ಕೆ SOCIAL MEDIA INFLUENCER ಎಂದು ಕರೆಯುತ್ತಾರೆ.

ನಿಮ್ಮ ಪೋಸ್ಟ್ ಗೆ ಎಷ್ಟು ಲೈಕ್ಸ್ ಮತ್ತು ಕಮೆಂಟ್ ಬರುತ್ತದೆ ಹಾಗೂ ನೀವು ಆ ಪ್ರಾಡಕ್ಟ್ ಅನ್ನು ಪ್ರೊಮೋಟ್ ಮಾಡುವುದರಿಂದ ಹೆಚ್ಚಿನ ಜನ ಅದನ್ನು ಉಪಯೋಗಿಸುತ್ತಾರೆ, ಇದರಿಂದ ಕಂಪನಿಗೆ ಲಾಭ. ಜೊತೆಗೆ, ನೀವು ಪ್ರೊಮೋಟ್ ಮಾಡುವುದಕ್ಕಾಗಿ ಕಂಪನಿಯಿಂದ ನಿಮಗೆ ಹಣ ನೀಡುತ್ತಾರೆ. ಕಂಪನಿಯವರು ಆಫರ್ ಮಾಡುವ ಹಣಕ್ಕಿಂತ ಹೆಚ್ಚಿಗೆ ಹಣವನ್ನು ನೀವು ಕೇಳಬಹುದು. ಅದು ಕಂಪನಿಗೆ ಸರಿ ಅನ್ನಿಸಿದರೆ ಅಷ್ಟು ಹಣವನ್ನು ಕಂಪನಿ ಕಡೆಯಿಂದ ನಿಮಗೆ ನೀಡುತ್ತಾರೆ. ಒಂದು ಮೂಲದ ಪ್ರಕಾರ, ಒಂದು ಬ್ರಾಂಡ್ ಒಬ್ಬರಿಗೆ ಬರೋಬ್ಬರಿ ಒಂದು ಪ್ರಾಡಕ್ಟ್ ಬಗ್ಗೆ ಮಾತಾಡಲಿಕ್ಕೆ ಬರೋಬ್ಬರಿ, 40 ರಿಂದ 50 ಸಾವಿರ ನೀಡುತ್ತಾರಂತೆ! ನಿಮ್ಮ ಅಕೌಂಟ್ ನಲ್ಲಿ ಲಕ್ಷಕ್ಕೂ ಹೆಚ್ಚು ಜನ ಅಭಿಮಾನಿಗಳಿದ್ದಾರೆ, ನಿಮಗೆ ಇನ್ನೂ ಹೆಚ್ಚಿನ ಹಣ ನೀಡುತ್ತಾರೆ.

ಈ ರೀತಿಯೇ ಹಣ ಗಳಿಸುವವರು ಇನ್ಸ್ಟಾಗ್ರಾಮ್ ನಲ್ಲಿ ಹಲವಾರು ಜನ ಇದ್ದಾರೆ. ನೀವು ಗಮನಿಸಿದ್ದರೆ ಬಿಂದು ಗೌಡ, ಧನುಶ್ರೀ, ಸೋನು ಶ್ರೀನಿವಾಸ್ ಗೌಡ ಸೇರಿದಂತೆ ಹಲವರು ಟಿಕ್ ಟಾಕ್ ಸ್ಟಾರ್ ಗಳು ಇನ್ಸ್ಟಾಗ್ರಾಮ್ ನಲ್ಲಿ ಈ ರೀತಿ ಹಲವಾರು ಕಂಪೆನಿಯ ಪ್ರಾಡಕ್ಟ್ ಗಳನ್ನು ಪ್ರೊಮೋಟ್ ಮಾಡಿ ಹಣ ಗಳಿಸುತ್ತಾರೆ. ಈ ರೀತಿ ಹಣ ಗಳಿಸಲು ನಿಮಗೆ ಬೇಕಾಗಿರುವುದು ಅಧಿಕ ಫಾಲೋವರ್ಸ್ ಮಾತ್ರ..ಯಾವುದಕ್ಕೂ ನೀವು ಇದರ ಮೇಲೆ ಸಾಕಷ್ಟು ಸಮಯವನ್ನು ಮೀಸಲಿಡಬೇಕು! ಕಷ್ಟ ಪಟ್ಟು ವಿಡಿಯೋಗಳನ್ನು ಮಾಡಿದರೆ, ನೀವು ಕೂಡ ಪ್ರತಿ ನಿತ್ಯ ಸಾಕಷ್ಟು ಹಣವನ್ನು ಇದರ ಮೂಲಕ ಗಳಿಸಬಹುದು!

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •