ಮಾಜಿ ಶಾಸಕರ ಪುತ್ರನಿಗೆ ವಂಚಕರು ವಿಡಿಯೋ ಕಾಲ್ ಮಾಡಿ ನಂತರ ಅದಕ್ಕೆ ಹುಡುಗಿ ಜೊತೆಗಿನ ಬೇರೆ ವ್ಯಕ್ತಿಗೆ ಮುಖ ಜೋಡಿಸಿ ಹಣ ಪೀಕಿದ ಘಟನೆ ರಾಜ್ಯದಲ್ಲಿ ನಡೆದಿದೆ. ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ ಪುತ್ರ ನವೀನ ಕೋನರಡ್ಡಿ ಅವರಿಗೆ ವಿಡಿಯೋ ಕಾಲ್ ಒಂದು ಬಂದಿದೆ. ಅದು ಯಾರೆಂದು ಅರಿಯದೇ, ಕಾಲ್ ಕಟ್ ಮಾಡಿದ್ದಾರೆ. ಸ್ವಲ್ಪ ಹೊತ್ತಿಗೆ ಮತ್ತದೇ, ನಂಬರ್ ನಿಂದ ಕೆಲ ಸ್ಕ್ರೀನ್ ಶಾಟ್ ಗಳು ಬಂದಿವೆ. ಅದರಲ್ಲಿ ನವೀನ್ ಮುಖ ಮತ್ತು ಜೊತೆಗೆ ನ-ಗ್ನ ಚಿತ್ರವಿರುವ ಹು-ಡುಗಿಯ ಫೋಟೋ ಬಂದಿದೆ.
ಇದನ್ನು ಕಂಡು ನವೀನ್ ಗಾಬರಿಗೊಂಡಿದ್ದಾರೆ. ಇದನ್ನು ಬಹಿರಂಗೊಳಿಸಬಾರದು ಎಂದರೆ ಕೂಡಲೇ ತಮ್ಮ ಅಕೌಂಟ್ಗೆ ಹಣ ಹಾಕುವಂತೆ ಪೀಡಿಸಿದ್ದಾರೆ. ಕೂಡಲೇ ತಮ್ಮ ತಂದೆಗೆ ವಿಷಯ ತಿಳಿಸಿದ ನವೀನ್ ಖದೀಮರ ಅಕೌಂಟ್ ಗೆ ಬಹಿರಂಗಗೊಳ್ಳಬಾರದು ಎನ್ನುವ ಉದ್ದೇಶದಿಂದ ಅವರಿಗೆ 13 ಸಾವಿರ ರೂ ಹಣವನ್ನು ಪೇಟಿಎಮ್ ಮಾಡಿದ್ದಾರೆ. ತಕ್ಷಣವೇ ಸೈ-ಬರ್ ಕ್ರೈಂ-ಗೆ ದೂರು ನೀಡಿದ್ದಾರೆ.
ನೋಡಿದ್ರಲ್ಲಾ ಫ್ರೆಂಡ್ಸ್ ಇದೇ ರೀತಿ ವಂಚಕರು ನಿಮಗೂ ಬಲೆ ಬೀಸಬಹುದು ಎಚ್ಚರ..