ಕರ್ನಾಟಕದ ಅತಿದೊಡ್ಡ ರಿಯಾಲಿಟಿ ಶೋ ಮತ್ತೊಮ್ಮೆ ಶುರುವಾಗಿದೆ. ಖ್ಯಾತ ನಟ ಸುದೀಪ್ ರ ನೇತೃತ್ವದಲ್ಲಿ ಭರ್ಜರಿಯಾಗಿ ಬಿಗ್ ಬಾಸ್ ನ ಎಂಟನೇ ಸೀಸನ್ ಆರಂಭವಾಗಿದ್ದು, ಬರೋಬ್ಬರಿ 17 ಸ್ಫರ್ಧಿಗಳು ಬಿಗ್ ಬಾಸ್ ಮನೆ ಪ್ರವೇಶಿಸಿದ್ದಾರೆ. ಕನ್ನಡದ ಖ್ಯಾತ ನಟಿ ಶುಭಾ ಪೂಂಜಾ ಕೂಡ ಪ್ರವೇಶವನ್ನು ಪಡೆದಿದ್ದಾರೆ. ನಟಿ ಶುಭಾ ಪೂಂಜಾ ಸ್ಯಾಂಡಲ್ವುಡ್ನಲ್ಲಿ ಮಿಂಚಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಅವಕಾಶ ವಂಚಿತರಾಗಿ ಹಲವು ದಿನಗಳ ಕಾಲ ತೆರೆ ಮೇಲಿಂದ ದೂರವೇ ಉಳಿದಿದ್ದರು.
ಇವೆಲ್ಲದರ ನಡುವೆ ಅವರು ಬಿಗ್ ಬಾಸ್ ಮನೆ ಪ್ರವೇಶಿಸಿದ್ದಾರೆ. ಹಲವು ಬಾರಿ ಆಫರ್ ಬಂದಿದ್ದರೂ ಅವಕಾಶವನ್ನು ನಿರಾಕರಿಸಿದ್ದ ಶುಭಾ ಪೂಂಜಾ ಈ ಬಾರಿ ಬಿಗ್ ಬಾಸ್ ಗೆ ತೆರಳಿದ್ದಾರೆ. ಮೊದಲ ದಿನವೇ ಕಣ್ಣೀರು ಕೂಡ ಹಾಕಿದ್ದಾರೆ. ಹೀಗಿರುವಾಗಲೇ ಅವರ ಬಗ್ಗೆ ಫೇಸ್ ಬುಕ್ ನಲ್ಲಿ ಕೆ-ಟ್ಟ ಕಮೆಂಟ್ ಒಂದು ಬಂದಿದೆ! ಆದರೆ ಕಾಮೆಂಟ್ ಗೆ ಉತ್ತರ ನೀಡುವುದಕ್ಕೆ ಶುಭರವರಿಂದ ಸಾಧ್ಯವಿಲ್ಲ. ಏಕೆಂದರೆ ಅವರು ಸದ್ಯ ಮೊಬೈಲ್ ಉಪಯೋಗಿಸೋ ಹಾಗಿಲ್ಲ. ಆದರೆ ಅವರ ತಂಡ ಖಡಕ್ ಆಗಿಯೇ ಆ ಕಾಮೆಂಟ್ ಗೆ ಉತ್ತರ ನೀಡಿದೆ.
ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧಿಗಳ ಬಗ್ಗೆ ಹೊರಗೆ ಚರ್ಚೆ ನಡೆಯುತ್ತಲೇ ಇರುತ್ತದೆ. ಸದ್ಯ ಶುಭಾ ಪೂಂಜಾ ರ ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ಅವರ ತಂಡದವರು ನೋಡಿಕೊಳ್ಳುತ್ತಿದ್ದಾರೆ. ಶುಭಾ ಪೂಂಜಾ ಅವರ ಫೇಸ್ಬುಕ್ ಹ್ಯಾಂಡಲ್ ಮಾಡುತ್ತಿರುವವರು ಬಿಗ್ ಬಾಸ್ ಮನೆ ಒಳಗೆ ಅವರು ಇರುವ ಫೋಟೋ ಒಂದನ್ನು ಹಾಕಿದ್ದರು. ಕೆಲವರು ಮಾತ್ರ ಕೆಟ್ಟದಾಗಿ ಕಮೆಂಟ್ ಹಾಕಿದ್ದರು. ಇದಕ್ಕೆ ಶುಭಾ ಪೂಂಜಾರ ಖಾತೆ ನೋಡಿಕೊಳ್ಳುತ್ತಿರುವವರಿಂದ ಖಡಕ್ ಉತ್ತರ ಸಿಕ್ಕಿದೆ. ನಿಮಗೂ ಅಕ್ಕ-ತಂಗಿ ಇದ್ದಾರೆ ಅಲ್ಲವೇ? ಎಂದು ಪ್ರಶ್ನೆ ಮಾಡಿದ್ದಾರೆ. ಈ ಮೂಲಕ ಕೆಟ್ಟದಾಗಿ ಪ್ರಶ್ನೆ ಮಾಡಿದವರಿಗೆ ಶುಭಾರ ತಂಡ ಕ್ಲಾಸ್ ತೆಗೆದುಕೊಂಡಿದೆ.