ಬೊಜ್ಜಿನಿಂದ ತೊಂದರೆ ಅನುಭವಿಸುತ್ತಿರುವ ಅನೇಕ ಜನರು ಪ್ರಪಂಚದಾದ್ಯಂತ ಇದ್ದಾರೆ. ಬೊಜ್ಜು ವ್ಯಕ್ತಿಯ ದೇಹದ ಆಕಾರವನ್ನು ಇನ್ನಷ್ಟು ಹದಗೆಡಿಸುತ್ತದೆ. ಆದರೂ ಕೆಲವು ಜನರು ಸ್ಥೂಲಕಾಯದಿಂದ ಹೊರಬಂದು ಸುಂದರವಾದ ಮೈ ಮಾಟ ಹೊಂದಿರುವುದನ್ನು ನೋಡಬಹುದು.ಇದೆಲ್ಲಾ ಹೇಳಲು ಸುಲಭ, ಮಾಡುವುದು ಕಷ್ಟ ಅಂತೀರಾ?, ಆದರೆ ಇಲ್ಲೊಬ್ಬಳು ಯುವತಿ ಅದನ್ನು ಮಾಡಿ ತೋರಿಸಿದ್ದಾಳೆ. ಹೌದು, ಅಮೆರಿಕದಲ್ಲಿ ದಪ್ಪಗಿದ್ದ ಹುಡುಗಿಯೊಬ್ಬಳು, ಬಳಕುವಂತಹ ದೇಹವನ್ನು ಪಡೆದು, ಎಲ್ಲರ ಹುಬ್ಬೇರುವಂತೆ ಮಾಡಿದ್ದಾಳೆ. ಇಂಟ್ರೆಸ್ಟಿಂಗ್ ಸಂಗತಿ ಎಂದರೆ ಈ ಯುವತಿಗೆ ಬೊಜ್ಜಿದೆ ಎಂಬ ಕಾರಣದಿಂದ ಬಿಟ್ಟುಹೋದ ಗೆಳೆಯ ಈಗ ಪಶ್ಚಾತಾಪ ಪಡುತ್ತಿದ್ದಾನೆ.

Bold

ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಇತ್ತೀಚಿನ ದಿನಗಳಲ್ಲಿ ಜೋಸಿ ಎಂಬ ಹುಡುಗಿ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಚರ್ಚೆಯಾಗುತ್ತಿದೆ. ಜೋಸಿ ಅವರ ಮೊದಲಿನ ತೂಕ 137 ಕೆ.ಜಿ. ಈ ಕಾರಣದಿಂದಾಗಿ, ಆಕೆಯ ಗೆಳೆಯ ಯಾವಾಗಲೂ ಹೀಯಾಳಿಸುತ್ತಿದ್ದ. ಜೋಸಿ ಸ್ಥೂಲಕಾಯತೆಯಿಂದಾಗಿ ಅವರಿಬ್ಬರ ಸಂಬಂಧ ಬ್ರೇಕಪ್ ಆಯಿತು. ಅದರ ನಂತರ ಜೋಸಿ ವರ್ಕ್ ಔಟ್ ಪ್ರಾರಂಭಿಸಿದಳು,  ಆಹಾರದಲ್ಲಿ ಕಂಟ್ರೋಲ್ ಮಾಡಿದಳು. ಹೀಗೆ ತೂಕವನ್ನು ಗಮನಾರ್ಹವಾಗಿ ಕಡಿಮೆ ಮಾಡಿದಳು.

“ನಾನು 3 ವರ್ಷಗಳ ಕಾಲ ರಿಲೇಶನ್ಶಿಪ್’ನಲ್ಲಿದ್ದೆ. ಈ ಸಂಬಂಧ ವಿಷಕಾರಿಯಾಗಿತ್ತು ಮತ್ತು ನಾನು ನನ್ನ ತನವನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದೆ. ಹೌದು, ಸ್ಥೂಲಕಾಯದಿಂದಾಗಿ ನನ್ನ ಗೆಳೆಯ ಹೊಸ ವರ್ಷದ 2 ದಿನಗಳ ನಂತರ ನನ್ನನ್ನು ತೊರೆದನು. ಇದರ ನಂತರ, ಈ ವಿಷಯವು ತೂಕ ಇಳಿಸಿಕೊಳ್ಳಲು ನನ್ನನ್ನು ಪ್ರೇರೇಪಿಸಿತು ಮತ್ತು ನನ್ನ ತೂಕ ಇಳಿಸುವ ಪ್ರಯಾಣ ಇಲ್ಲಿಂದ ಪ್ರಾರಂಭವಾಯಿತು” ಎಂದು ಜೋಸಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

woman

ಬ್ರೇಕಪ್ ಆಗಿ ಎರಡು ವಾರಗಳ ನಂತರ, ಜೋಸಿ ತನ್ನ ದೇಹವನ್ನು ಬದಲಾಯಿಸಿಕೊಳ್ಳುವ ಪ್ರಯಾಣ ಪ್ರಾರಂಭಿಸಿದಳು. ಇದಕ್ಕಾಗಿ ಆಕೆ ವೈಯಕ್ತಿಕ ತರಬೇತುದಾರರನ್ನು ಸಹ ನೇಮಿಸಿಕೊಂಡಳು. ಜೋಸಿ ಆರೋಗ್ಯಕರ ಆಹಾರ ಸೇವಿಸಲು ಶುರು ಮಾಡಿದಳು. ಹಾಗೆಯೇ ಜಂಕ್ ಫುಡ್’ನಿಂದ ದೂರವಿರಲು ಪ್ರಾರಂಭಿಸಿದಳು. “ನಾನು ದಪ್ಪಗಿದ್ದಾಗ, ನಾನು ಬಯಸಿದಾಗ ನಾನು ಏನು ಬೇಕಾದರೂ ತಿನ್ನುತ್ತಿದ್ದೆ”  ಎಂದು ಜೋಸಿ ಹೇಳಿದ್ದಾರೆ. ಆದರೆ ತಾಲೀಮು ಪ್ರಾರಂಭಿಸಿದ ನಂತರ ಆರೋಗ್ಯಕರ ಆಹಾರ ತಿನ್ನಲು ಪ್ರಾರಂಭಿಸಿದೆ, ದೈಹಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡೆ ಎಂದು ತಿಳಿಸಿದ್ದಾರೆ ಜೋಸಿ.

“ತೂಕವನ್ನು ಕಳೆದುಕೊಂಡ ನಂತರ, ಜನರು ನನ್ನೊಂದಿಗೆ ಮಾತನಾಡುವ ರೀತಿ ಬದಲಾಗಿದೆ” ಎಂದು ಜೋಸಿ ಹೇಳುತ್ತಾರೆ. “ನಾನು ದಪ್ಪಗಿದ್ದಾಗ ಯಾರೂ ನನ್ನೊಂದಿಗೆ ಮಾತನಾಡುತ್ತಿರಲಿಲ್ಲ ಅಥವಾ ನನ್ನತ್ತ ನೋಡಲಿಲ್ಲ. ನನ್ನನ್ನು ನೋಡಿದ ಜನರು ಒಂದು ತರಹ ವರ್ತಿಸುತ್ತಿದ್ದರು ಎಂದು ಜೋಸಿ ಹೇಳಿಕೊಂಡಿದ್ದಾರೆ”

woman

ತಾಲೀಮು ಮತ್ತು ಆರೋಗ್ಯಕರ ಆಹಾರದ ಸಹಾಯದಿಂದ ಜೋಸಿ 63 ಕೆಜಿ ತೂಕವನ್ನು ಕಳೆದುಕೊಂಡಿದ್ದಾರೆ. ಅಂದಹಾಗೆ, ಜೋಸಿ ತನ್ನ ಗೆಳೆಯನ ಮೇಲೆ ಸೇ#ಡು ತೀರಿಸಿಕೊಳ್ಳಲು ತೂಕ ಇಳಿಸಿಕೊಳ್ಳುವ ತನ್ನ ಪ್ರಯಾಣವನ್ನು ಪ್ರಾರಂಭಿಸಿದರು. ಆದರೆ ಸ್ವಲ್ಪ ಸಮಯದ ನಂತರ, ಈ ಪ್ರಯಾಣ ತಮಗಾಗಿ ಎಂದು ಅವರು ಅರಿತುಕೊಂಡರು. ಫಿಟ್ನೆಸ್ ಅನ್ನು ಪ್ರೀತಿಸತೊಡಗಿದರು. ಇದು ಪ್ರತೀಕಾರದ ಪ್ರಯಾಣವಾಗಿರಲಿಲ್ಲ. ಸ್ವ-ಪ್ರೀತಿಯ ಪ್ರಯಾಣವಾಯಿತು.  ಈಗ ಜೋಸಿ ಹೈಕಿಂಗ್’ನಂತಹ ಹೊರಾಂಗಣ ಚಟುವಟಿಕೆಗಳನ್ನೂ ಸಹ ಇಷ್ಟಪಡುತ್ತಿದ್ದಾರೆ. ಜೋಸಿ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ತೂಕ ಇಳಿಸಿಕೊಂಡ ಬಗ್ಗೆ ಕೆಲವು ಸಲಹೆಗಳನ್ನು ನೀಡಿದ್ದಾರೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •