ಸಾಮಾನ್ಯವಾಗಿ ದೇಶದಲ್ಲಿ ಪ್ರತಿಯೊಂದು ಮನೆಯವರು ಕೂಡ ವಿದ್ಯುತ್ ಬಳಕೆ ಮಾಡೇ ಮಾಡುತ್ತಾರೆ ಮತ್ತು ವಿದ್ಯುತ್ ಬಳಸದ ಮನೆ ಇಲ್ಲ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ದೇಶದಲ್ಲಿ ಪ್ರತಿಯೊಂದು ಮನೆಯಲ್ಲಿ ಬೆಳಕು ಇರಬೇಕು ಅನ್ನುವ ಉದ್ದೇಶದಿಂದ ಹಲವು ಯೋಜನೆಗಳನ್ನ ಜಾರಿಗೆ ತಂದಿದ್ದು ಈ ಯೋಜನೆಯ ಮೂಲಕ ದೇಶದ ಪ್ರತಿಯೊಂದು ಮನೆಯವರು ವಿದ್ಯುತ್ ಬಳಕೆ ಮಾಡುತ್ತಿದ್ದಾರೆ ಎಂದು ಹೇಳಬಹುದು. ಇನ್ನು ದೇಶದಲ್ಲಿ ಪ್ರತಿ ವರ್ಷಕ್ಕೆ ಒಮ್ಮೆ ವಿದ್ಯುತ್ ದರವನ್ನ ಪರಿಷ್ಕರಣೆ ಮಾಡಿ ಹೊಸ ದರವನ್ನ ನಿಗಧಿ ಮಾಡಲಾಗುತ್ತದೆ, ಆದರೆ ಈಗ ರಾಜ್ಯ ಸರ್ಕಾರವು ವಿದ್ಯುತ್ ಬಳಕೆ ಮಾಡುವ ಪ್ರತಿಯೊಬ್ಬರಿಗೂ ಸಿಹಿ ಸುದ್ದಿಯನ್ನ ನೀಡಿದ್ದು ಇದು ಬಡವರಿಗೆ ತುಂಬಾ ಉಪಕಾರಿ ಎಂದು ಹೇಳಿದರೆ ತಪ್ಪಾಗಲ್ಲ.

ಹಾಗಾದರೆ ರಾಜ್ಯ ಸರ್ಕಾರ ವಿದ್ಯುತ್ ಬಳಕೆ ಮಾಡುವವರಿಗೆ ನೀಡಿದ ಸಿಹಿ ಸುದ್ದಿ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ದೇಶದಲ್ಲಿ ಯಾವಾಗ ಕರೋನ ಅನ್ನುವ ಮಹಾಮಾರಿ ಕಾಣಿಸಿಕೊಂಡಿತೋ ಅಂದಿನಿಂದ ಜನರ ಜೀವನ ಶೈಲಿ ಸಂಪೂರ್ಣವಾಗಿ ಬದಲಾಗಿ ಹೋಗಿದೆ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ದೇಶದಲ್ಲಿ ಕರೋನ ಮಹಾಮಾರಿ ಕಾಣಿಸಿಕೊಂಡ ದೇಶದ ಜನರ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟು ಹೋಯಿತು ಮತ್ತು ಜನರು ಊಟಕ್ಕೂ ಇಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣ ಆಗಿತ್ತು ಎಂದು ಹೇಳಬಹುದು.

Electricity-bill

ಇನ್ನು ಜನರ ಜೀವನ ಮಟ್ಟವನ್ನ ಸುಧಾರಿಸುವ ನಿಟ್ಟಿನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಸರ್ಕಾರದ ಹಲವು ಯೋಜನೆಯ ಮೇಲೆ ಭಾರಿ ಪ್ರಮಾಣವ ರಿಯಾಯಿತಿಯನ್ನ ನೀಡಿತ್ತು, ಆದರೆ ಒಮ್ಮೆಯೂ ಕೂಡ ವಿದ್ಯುತ್ ಬಳಕೆಯ ಮೇಲೆ ರಿಯಾಯಿತಿ ನೀಡಿರಲಿಲ್ಲ. ಹೌದು ದೇಶದಲ್ಲಿ ಕರೋನ ಮಹಾಮಾರಿ ಕಾಣಿಸಿಕೊಂಡ ನಂತರ ಕೂಡ ಜನರು ಯಾವುದೇ ರಿಯಾಯಿತು ಇಲ್ಲದೆ ಪ್ರತಿ ತಿಂಗಳು ವಿದ್ಯುತ್ ದರವನ್ನ ಕಟ್ಟುತ್ತಿದ್ದಾರೆ. ಇನ್ನು ಈಗ ಜನರ ಆರ್ಥಿಕ ಪರಿಸ್ಥಿತಿಯನ್ನ ಸಂಪೂರ್ಣವಾಗಿ ಅರ್ಥ ಮಾಡಿಕೊಂಡ ರಾಜ್ಯ ಸರ್ಕಾರ ದೊಡ್ಡ ನಿರ್ಧಾರವನ್ನ ಮಾಡಿದ್ದು ರಾಜ್ಯದ ಜನರಿಗೆ ಬಂಪರ್ ಸಿಹಿ ಸುದ್ದಿಯನ್ನ ಕೊಟ್ಟಿದೆ ಎಂದು ಹೇಳಬಹುದು.

ಹೌದು ರಾಜ್ಯ ಸರ್ಕಾರ ವಿದ್ಯುತ್ ಬಳಕೆ ಮಾಡುವವರಿಗೆ ನೆಮ್ಮದಿಯ ಸುದ್ದಿಯನ್ನ ನೀಡಿದ್ದು ಈ ಭಾರಿ ವಿದ್ಯುತ್ ದರವನ್ನ ಪರಿಷ್ಕರಣೆ ಮಾಡುವುದಿಲ್ಲ ಎಂದು ಹೇಳಿದೆ. ಹೌದು ಪ್ರತಿ ವರ್ಷ ವಿದ್ಯುತ್ ದರವನ್ನ ಪರಿಷ್ಕರಣೆ ಮಾಡಿ ದರದಲ್ಲಿ ಹೆಚ್ಚಳವನ್ನ ಮಾಡಲಾಗುತ್ತಿತ್ತು, ಆದರೆ ಈ ಭಾರಿ ಕರೋನ ಮಹಾಮಾರಿಯಿಂದ ಜನರು ಆರ್ಥಿಕ ಸಂಕಷ್ಟಕ್ಕೆ ಎದುರಾಗಿರುವ ಕಾರಣ ವಿದ್ಯುತ್ ದರವನ್ನ ಪರಿಷ್ಕರಣೆ ಮಾಡುವುದಿಲ್ಲ ಎಂದು ರಾಜ್ಯ ವಿದ್ಯುತ್ ನಿಯಂತ್ರಣ ಆಯೋಗ ಆದೇಶವನ್ನ ಹೊರಡಿಸಿದೆ ಮತ್ತು KERC ಮುಂದಿನ ಆದೇಶದ ತನಕ ವಿದ್ಯುತ್ ದರವನ್ನ ಏರಿಕೆ ಮಾಡಲಾಗಲ್ಲ.

ಇನ್ನು ಪ್ರತಿ ಯೂನಿಟ್ ಗೂ ದರವನ್ನ ಹೆಚ್ಚಳ ಮಾಡುವಂತೆ ವಿದ್ಯುತ್ ಸರಬರಾಜು ಕಂಪನಿಗಳು KERC ಗೆ ಪ್ರಸ್ತಾವನೆಯನ್ನ ಸಲ್ಲಿಸಿತ್ತು ಮತ್ತು ಈ ಪ್ರಸ್ತಾವನೆಯ ಮೇರೆಗೆ KERC ಸಾರ್ವಜನಿಕ ಅಭಿಪ್ರಾಯವನ್ನ ಸಂಗ್ರಹ ಮಾಡಿ ದರವನ್ನ ಹೆಚ್ಚಳ ಮಾಡಲು ಸಿದ್ಧತೆಯನ್ನ ಮಾಡಿತ್ತು, ಆದರೆ ಕರೋನ ಎಫೆಕ್ಟ್ ನಿಂದ ವಿದ್ಯುತ್ ದರ ಪರಿಷ್ಕರಣೆಯನ್ನ ಮುಂದೂಡಲಾಗಿದೆ. ಸ್ನೇಹಿತರೆ ರಾಜ್ಯ ಸರ್ಕಾರ ನಿರ್ಧಾರದ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ ಮತ್ತು ಈ ಮಾಹಿತಿಯನ್ನ ವಿದ್ಯುತ್ ಬಳಕೆ ಮಾಡುವ ಪ್ರತಿಯೊಬ್ಬರಿಗೂ ತಲುಪಿಸಿ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •