ಮೊಟ್ಟೆಯ ಹಳದಿ ಭಾಗವನ್ನು ತಿನ್ನುವುದರಿಂದ ಆರೋಗ್ಯಕ್ಕೆ ಒಳ್ಳೆಯದು ಅಥವಾ ಕೆಟ್ಟದ್ದು ಈ ಗೊಂದಲದಲ್ಲಿ ಹಲವಾರು ಜನರು ಇರುತ್ತಾರೆ ಇನ್ನು ಕೆಲವರು ಮೊಟ್ಟೆಯ ಬಿಳಿ ಭಾಗವನ್ನು ಮಾತ್ರ ಸೇವಿಸಬೇಕು.

ಮೊಟ್ಟೆಯ ಹಳದಿ ಭಾಗವನ್ನು ತಿನ್ನುವುದರಿಂದ ನಾನಾ ತರಹದ ಸಮಸ್ಯೆಗಳು ಎದುರಾಗು ವುದರ ಜೊತೆಗೆ ಹೃದಯ ಸಂಬಂಧಿ ಸಮಸ್ಯೆಗಳು ಹಾಗೂ ಕೊಲೆಸ್ಟ್ರಾಲ್ ಹೆಚ್ಚುತ್ತದೆ ಎಂಬ ಭಾವನೆಯಲ್ಲಿ ಇರುತ್ತಾರೆ ಹಾಗಾದರೆ ಈ ದಿನದ ಮಾಹಿತಿಯಲ್ಲಿ ತಿಳಿಯೋಣ ಮೊಟ್ಟೆಯ ಹಳದಿ ಭಾಗವನ್ನು ತಿನ್ನೋದ್ರಿಂದ ಉತ್ತಮನು ಇಲ್ಲವೋ ಎಂದು .

ಮೊಟ್ಟೆ ತಿನ್ನುವ ಪ್ರತಿಯೊಬ್ಬರೂ ಕೂಡ ಈ ಪೂರ್ತಿ ಮಾಹಿತಿಯನ್ನು ತಿಳಿಯಿರಿ ಯಾಕೆಂದರೆ ಮೊಟ್ಟೆ ಎಂದ ಕೂಡಲೇ ಎಲ್ಲರೂ ಕೂಡ ಇಷ್ಟಪಡುವುದು ಮೊಟ್ಟೆಯ ಹಳದಿ ಭಾಗವನ್ನು ಆದರೆ ನಾನಾ ತರಹದ ಕಾರಣಗಳಿಂದಾಗಿ ಮೊಟ್ಟೆಯ ಹಳದಿ ಭಾಗವನ್ನು ತಿನ್ನಲು ಜನರು ಬಿಟ್ಟು ಬಿಟ್ಟಿರುತ್ತಾರೆ .

ಆದರೆ ಈ ಮೊಟ್ಟೆಯ ಹಳದಿ ಭಾಗವನ್ನು ತಿನ್ನುವ ಬೇಡವಾ ಎಂಬ ಪ್ರಶ್ನೆಗೆ ಪರಿಹಾರವೇನು ಎಂದರೆ ಮೊಟ್ಟೆಯ ಬಿಳಿ ಭಾಗದಲ್ಲಿ ಮಾತ್ರವಲ್ಲದೆ ಮೊಟ್ಟೆಯ ಹಳದಿ ಭಾಗವನ್ನು ತಿನ್ನುವುದರಿಂದ ಕೂಡ ಆರೋಗ್ಯ ವರ್ಧಿಸುತ್ತದೆ ಇದು ಹೇಗೆ ಎಂದು ಹೇಳುವುದಾದರೆ ಈ ಪೂರ್ತಿ ಮಾಹಿತಿಯನ್ನು ತಿಳಿಯಿರಿ .

Egg

ಹೌದು ಸ್ನೇಹಿತರ ಮೊಟ್ಟೆಯ ಬಿಳಿ ಭಾಗದಲ್ಲಿ ದೇಹಕ್ಕೆ ಬೇಕಾಗಿರುವ ವೈಟ್ ಮೆನ್ಸ್ ಗಳು ಇರುತ್ತವೆ ಆದರೆ ಮೊಟ್ಟೆಯ ಹಳದಿ ಭಾಗದಲ್ಲಿ ಪ್ರೋಟೀನ್ ವಿಟಮಿನ್ಸ್ ಅಮೈನೋ ಆಸಿಡ್ಸ್ ಕೊಲೆಸ್ಟ್ರಾಲ್ ಅಂಶವು ಹೇರಳವಾಗಿ ದೊರೆಯುತ್ತದೆ .

ಆದರೆ ಮೊಟ್ಟೆ ಹಳದಿ ಭಾಗ ಅಂದ ಕೂಡಲೇ ಎಲ್ಲರಿಗೂ ನೆನಪಿಗೆ ಬರೋದು ಅದರಲ್ಲಿ ಇರುವಂತಹ ಕೊಲೆಸ್ಟ್ರಾಲ್ ಅಂಶವು ಇದನ್ನು ತಿನ್ನುವುದರಿಂದ ತೂಕ ಹೆಚ್ಚುತ್ತದೆ ಬೊಜ್ಜು ಬರುತ್ತದೆ ಹಾಗೆ ಹೃದಯ ಸಂಬಂಧಿ ಸಮಸ್ಯೆಗಳು ಎದುರಾಗುತ್ತವೆ ಎಂದು .

ಈ ಮೊಟ್ಟೆ ಒಂದು ಉತ್ತಮ ಪೌಷ್ಟಿಕಾಂಶವುಳ್ಳ ಆಹಾರ ಇದನ್ನು ತಿಂದರೆ ಯಾವ ಸಮಸ್ಯೆಗಳು ಕೂಡ ಎದುರಾಗುವುದಿಲ್ಲ ಅದರಲ್ಲಿಯೂ ಮೊಟ್ಟೆಯ ಹಳದಿ ಭಾಗವನ್ನು ತಿನ್ನುವುದರಿಂದ ಲಾಭಗಳೇ ಹೆಚ್ಚು ಆದ್ದರಿಂದ ಮೊಟ್ಟೆಯ ಹಳದಿ ಭಾಗವನ್ನು ತಿನ್ನಲು ಭಯ ಬೇಡ ಇದರಿಂದ ಹೃದಯ ಸಂಬಂಧಿ ಸಮಸ್ಯೆಗಳು ಬರುವುದಿಲ್ಲ .

ಅದು ಹೇಗೆ ಅಂತೀರಾ ಹೌದು ಸ್ನೇಹಿತರ ಮೊಟ್ಟೆಯ ಹಳದಿ ಭಾಗದಲ್ಲಿ ಇರುವಂತಹ ಕೊಲೆಸ್ಟ್ರಾಲ್ ಅಂಶವು ದೇಹಕ್ಕೆ ಬೇಕಾಗಿರುವಂತಹ ಕೊಬ್ಬಿನಾಂಶವೂ ಆಗಿರುತ್ತದೆ . ನಮ್ಮ ದೇಹಕ್ಕೆ ಸೇರುವಂತಹ ಕೊಲೆಸ್ಟ್ರಾಲ್ ಅಂಶದಲ್ಲಿ ಎರಡು ವಿಧ ಇರುತ್ತದೆ ಅದೇನೆಂದರೆ ಎಚ್ಡಿಎಲ್ ಮತ್ತು ಎಲ್ಡಿಎಲ್ ಎಂದು ಈ ಎಲ್ಡಿಎಲ್ ಕೊಬ್ಬಿನಾಂಶವೂ ಹಾನಿಕಾರಕ ಕೊಬ್ಬಿನಾಂಶ ಆಗಿರುತ್ತದೆ ಮತ್ತು ಎಚ್ಡಿಎಲ್ ಕೊಬ್ಬಿನಾಂಶವು ದೇಹಕ್ಕೆ ಬೇಕಾಗಿರುವಂತಹ ಉತ್ತಮ ಕೊಬ್ಬಿನಾಂಶ ಆಗಿರುತ್ತದೆ .

ಮೊಟ್ಟೆಯ ಹಳದಿ ಭಾಗವನ್ನು ತಿನ್ನುವುದರಿಂದ ನಮ್ಮ ದೇಹಕ್ಕೆ ಸೇರುವುದು ಎಚ್ಡಿಎಲ್ ಕೊಬ್ಬಿನಾಂಶ ಅಂದರೆ ಇದು ದೇಹಕ್ಕೆ ಬೇಕಾಗಿರುವಂತಹ ಕೊಬ್ಬಿನಾಂಶ ಆಗಿರುವುದರಿಂದ ಇದು ಯಾವ ಅನಾರೋಗ್ಯ ಸಮಸ್ಯೆಯನ್ನು ಉಂಟು ಮಾಡುವುದಿಲ್ಲ .ಮತ್ತೊಂದು ವಿಚಾರವೇನು ಅಂದರೆ ನಾವು ಆಹಾರದಲ್ಲಿ ತೆಗೆದುಕೊಳ್ಳುವ ಕೊಬ್ಬಿನಾಂಶ ಕೇವಲ ಇಪ್ಪತ್ತೈದು ಪರ್ಸೆಂಟ್ ಮಾತ್ರ ಇನ್ನು ಉಳಿದ ಕೊಬ್ಬಿನಾಂಶವನ್ನು ನಮ್ಮ ದೇಹದಲ್ಲಿರುವ ಲಿವರ್ ಉತ್ಪತ್ತಿ ಮಾಡುತ್ತದೆ .

ಆದರೆ ಮೊಟ್ಟೆಯ ಹಳದಿ ಭಾಗವನ್ನು ತಿನ್ನುವುದರಿಂದ ನಮ್ಮ ದೇಹಕ್ಕೆ ಬೇಕಾಗುವ ಅದರಲ್ಲಿಯೂ ಲಿವರ್ ಉತ್ಪತ್ತಿ ಮಾಡುವಂತಹ ಕೊಬ್ಬಿನಾಂಶ ಇರುತ್ತದೆ .ಹೀಗೆ ಮೊಟ್ಟೆಯ ಹಳದಿ ಭಾಗವನ್ನು ತಿಂದರೇ ನಮಗೆ ಕೊಬ್ಬಿನಾಂಶ ದೊರೆತಂತೆ ಆಗ ಲಿವರ್ ಈ ಕೊಬ್ಬಿನಾಂಶವನ್ನು ಉತ್ಪತ್ತಿ ಮಾಡೋದನ್ನು ಕಡಿಮೆಗೊಳಿಸುತ್ತದೆ ಅಷ್ಟೇ .

ಮೊಟ್ಟೆಯ ಹಳದಿ ಭಾಗದಲ್ಲಿ ಇರುವಂತಹ ಕೊಬ್ಬಿನಾಂಶವು ಒಳ್ಳೆಯದು ಎಂದು ತಿಳಿದುಕೊಂಡಿದ್ದ ಆಯ್ತು ಇನ್ನು ನಮ್ಮ ದೇಹದಲ್ಲಿ ಈ ಉತ್ತಮ ಕೊಬ್ಬಿನಾಂಶ ಕಡಿಮೆಯಾದರೆ ಟೆಸ್ಟೋಸ್ಟೀರೋನ್ ಎಂಬ ಹಾರ್ಮೋನ್ ಉತ್ಪತ್ತಿ ಕಡಿಮೆಯಾಗುತ್ತದೆ ಇದರಿಂದ ಬೆಳವಣಿಗೆ ಕುಂಠಿತವಾಗುತ್ತದೆ.

.ಆದ್ದರಿಂದ ಪ್ರತಿ ದಿನ ಮಕ್ಕಳಿಗೆ ಮೊಟ್ಟೆಯನ್ನು ನೀಡುವುದರಿಂದ ಮಕ್ಕಳ ಬೆಳವಣಿಗೆ ಕೂಡ ಉತ್ತಮವಾಗುತ್ತದೆ ಜೊತೆಗೆ ನಮ್ಮ ಆರೋಗ್ಯವನ್ನು ಕೂಡ ಕಾಪಾಡಿಕೊಳ್ಳಬಹುದು .ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿಗಳು ವೈದ್ಯರ ಸಲಹೆಯನ್ನು ಪಡೆದು ಮೊಟ್ಟೆಗಳನ್ನು ತಿನ್ನುವುದು ಉತ್ತಮ ಯಾಕೆಂದರೆ ಅಂತಹ ವ್ಯಕ್ತಿಗಳ ದೇಹದಲ್ಲಿ ಕೊಲೆಸ್ಟ್ರಾಲ್ ಅಂಶವು ಅಧಿಕವಾಗಿರುತ್ತದೆ ಆದ್ದರಿಂದ ಒಮ್ಮೆ ಸಲಹೆ ಪಡೆದು ನಂತರ ಮೊಟ್ಟೆ ತಿನ್ನುವುದು ಒಳ್ಳೆಯದು .

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •