ಕಾಲೇಜ್ ಹುಡುಗಿಯರನ್ನು ಗೋವಾ ಟ್ರಿಪ್ ಗೆ ಕರೆದೊಯ್ದ ಬಸ್ ಚಾಲಕನ ಲೈಸೆನ್ಸ್ ರದ್ದುಗೊಂಡಿರುವ ಘಟನೆ ಕೇರಳದ ವೈನಾಡಿನಲ್ಲಿ ನಡೆದಿದೆ.ಇದಕ್ಕೆ ಕಾರಣವೆಂದರೆ, ಆ ಹುಡುಗಿಯರ ಕೈಗೆ ಬಸ್ ನ ಗೇರ್ ಚೇಂಜ್ ಮಾಡಲು ಬಿಟ್ಟಿರುವುದು.

ಕಾಲೇಜ್ ಹುಡುಗಿರ ಗುಂಪನ್ನು ಕಂಡ ತಕ್ಷಣ ರೋಮಾಂಚನಗೊಂಡ ಬಸ್ ಚಾಲಕ , ಬಸ್ ಚಲಿಸುತ್ತಿರುವಾಗಲೇ ಗೇರ್ ಬದಲಾಯಿಸಲು ಅವಕಾಶ ನೀಡಿದ್ದಾನೆ. ಅದೇ ಅವನಿಗೆ ಸಂಕಷ್ಟ ತಂದಿದೆ.ಕೇರಳದಿಂದ ಹೊರಟ ಬಸ್ ನಲ್ಲಿ ಮಾಮೂಲಿಯಂತೆ ಮೋಜು-ಮಸ್ತಿ ಆರಂಭವಾಗಿದೆ, ಈ ನಡುವೆ ಮೂರ್ನಾಲ್ಕು ಹುಡುಗಿಯರು ಬಸ್ ಚಾಲಕನ ಬಳಿ ತೆರಳಿದ್ದಾರೆ.

ಹತ್ತಿರ ಬಂದ ಹುಡುಗಿಯರು ನೃತ್ಯ ಮಾಡುತ್ತಾ, ಬಸ್ ಗೇರ್ ಬದಲಾಯಿಸಲು ಮುಂದಾಗಿದ್ದಾರೆ, ಚಾಲಕ ಪ್ರತಿಕ್ರಯಿಸದೆ ಬದಲಾಯಿಸಲು ಅನುವು ಮಾಡಿಕೊಟ್ಟಿದ್ದಾನೆ. ಆ ಹುಡುಗಿಯರು ಹಲವು ಬಾರಿ ಗೇರ್ ಬದಲಾಯಿಸಿದ್ದು, ಸಂಭ್ರಮಿಸಿದ್ದಾರೆ.ಅಂದ ಹಾಗೆ ಈ ಹುಡುಗಿಯರು ಗೇರ್ ಗಳನ್ನು ಬದಲಿಸುತ್ತಿದ್ದ ವೇಳೆ ಸಹಪಾಠಿಗಳು ವಿಡಿಯೋ ಚಿತ್ರೀಕರಿಸಿಕೊಂಡು

ಅದನ್ನು ಸೋಷಿಯಲ್ ಮಿಡಿಯಾದಲ್ಲಿ ಅಪ್ಲೋಡ್ ಮಾಡಿದ್ದರು. ಆರ್.ಟಿ.ಓ ಅಧಿಕಾರಿಗಳು ಈ ವಿಡಿಯೋವನ್ನು ನೋಡಿ, ಬಸ್ ಚಾಲಕನೊಂದಿಗೆ ವಿಚಾರಣೆ ನಡೆಸಿ ಸಾರ್ವಜನಿಕರ ಪ್ರಾಣದೊಂದಿಗೆ ಚೆಲ್ಲಾಟವಾಡಿದ ಹಾಗೂ ಅಸುರಕ್ಷತೆಯ ಚಾಲನೆಯಡಿಯಲ್ಲಿ ಆರು ತಿಂಗಳ ಕಾಲ ಡ್ರೈವಿಂಗ್ ಲೈಸೆನ್ಸ್ ರದ್ದುಗೊಳಿಸಿದ್ದಾರೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •