ನಮ್ಮ ದೇಶದಲ್ಲಿ ಪ್ರತಿಯೊಂದು ಕಾಯಿಲೆಗೂ ಕೂಡ ಅಥವಾ ಪ್ರತಿಯೊಂದು ಸಮಸ್ಯೆಗೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ನಮ್ಮ ಸುತ್ತಮುತ್ತಲೇ ಪರಿಹಾರ ಇರುವುದನ್ನು ನಾವು ಗಮನಿಸಬಹುದು. ಈ ಸಮಸ್ಯೆ ಅಥವಾ ಕಾಯಿಲೆ ಇದರ ಬಗ್ಗೆ ನಾನು ಈ ದಿನ ಯಾಕೆ ಪ್ರಸ್ತಾಪಿಸುತ್ತಿದ್ದೇನೆ ಎಂದರೆ ಅದರಲ್ಲೂ ಮುಖ್ಯವಾಗಿ ಕಾಯಿಲೆಗೆ ಸಂಬಂಧಪಟ್ಟ ಹಾಗೆ ನಾನು ನಿಮಗೆ ಒಂದು ಉತ್ತಮ ಔಷಧಿಯನ್ನು ಹೇಳುತ್ತೇನೆ. ಮನುಷ್ಯನ ದೇಹದಲ್ಲಿ ಅನೇಕ ಸಮಸ್ಯೆಗಳಿರುವುದನ್ನು ನಾವು ಗಮನಿಸಬಹುದು. ರಕ್ತದೊತ್ತಡ, ಪೌಷ್ಟಿಕಾಂಶದ ಕೊರತೆ, ಪೊಟಾಶಿಯಂ ಕೊರತೆ, ಕಬ್ಬಿಣಾಂಶದ ಕೊರತೆ, ಸುಸ್ತು, ನಿಶ್ಯಕ್ತಿ ಹೀಗೆ ಸಾವಿರಾರು ಕಾಯಿಲೆಗಳಿಗೆ ಮನುಷ್ಯನ ದೇಹ ಆಗರವಾಗಿದೆ.

water

ಈ ಎಲ್ಲ ಕಾಯಿಲೆಗಳಿಗೂ ಕೂಡ ಒಂದೊಂದು ರೀತಿಯಾದಂತಹ ಔಷಧಿಯನ್ನು ತೆಗೆದುಕೊಳ್ಳಬೇಕು. ಆದರೆ ನಾನು ಈ ದಿನ ನಿಮಗೆ ಒಂದು ಮುಖ್ಯವಾದ ವಿಷಯವನ್ನು ಪ್ರಸ್ತಾಪಿಸುತ್ತಿದ್ದೇನೆ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಈ ಎಲ್ಲಾ ಕಾಯಿಲೆಗಳಿಂದ ಕೂಡ ನೀವು ವಿಮುಕ್ತಿಯನ್ನು ಪಡೆಯಬಹುದು. ಅದು ಹೇಗೆ ಅದು ಯಾವುದರಿಂದ ಎಂಬ ಯೋಚನೆ ಬರುತ್ತಿದೆ ಅಲ್ಲವೇ ಸ್ನೇಹಿತರೇ? ಅದೇನೆಂದರೆ ಎಳನೀರು. ಎಳನೀರು ಸಾಮಾನ್ಯವಾಗಿ ನಮಗೆ ರಸ್ತೆ ಬದಿಯಲ್ಲಿ ಸಿಗುತ್ತದೆ.

ಹಳ್ಳಿಗಳ ಕಡೆ ಗ್ರಾಮೀಣ ಪ್ರದೇಶಗಳಲ್ಲಿ ಕಡೆ ಮರದಲ್ಲಿ ಹೊಲಗಳಲ್ಲಿ ತೋಟದಲ್ಲಿ ಗದ್ದೆಗಳಲ್ಲಿ ಈ ತೆಂಗಿನ ಮರವನ್ನು ನೆಟ್ಟಿರುತ್ತಾರೆ. ಈ ತೆಂಗಿನ ಮರದಿಂದ ತೆಂಗಿನಕಾಯಿ ಆಗುವ ಮೊದಲು ಸಿಗುವಂತಹ ಕಾಯಿಗೆ ಎಳನೀರು ಎನ್ನುತ್ತೇವೆ. ಈ ಎಳನೀರು ಸಾಮಾನ್ಯವಾಗಿ ಈಗಿನ ಜನಕ್ಕೆ ಎಲ್ಲಿ ಬೆಳೆಯುತ್ತದೆ ಎಂಬುದೇ ಗೊತ್ತಿರುವುದಿಲ್ಲ. ರಸ್ತೆ ಬದಿಯಲ್ಲಿ ಸಿಗುತ್ತದೆ ಎಂಬ ಜ್ಞಾನ ಅಷ್ಟೇ ಈಗಿನ ಜನರಿಗಿರುತ್ತದೆ. ಆದರೆ ಈ ಎಳನೀರು ಹೇಗೆ ಬರಲಿ ಈ ಎಳನೀರಿನಿಂದ ಸಿಗುವಂತಹ ಉಪಯೋಗ ಮಾತ್ರ ಎಲ್ಲರಿಗೂ ತಿಳಿದಿರುತ್ತದೆ. ಅದೇನೆಂದರೆ ಈ ಎಳನೀರು ಎಂಬುದು ಪ್ರತಿಯೊಬ್ಬರ ದೇಹಕ್ಕೂ ಕೂಡ ತಂಪನ್ನು ನೀಡುತ್ತದೆ.

ಎಳನೀರಿನಿಂದ ಸಾಮಾನ್ಯವಾಗಿ ಆದಷ್ಟು ಕಾಯಿಲೆಗಳನ್ನು ನಾವು ಗುಣ ಮಾಡಿಕೊಳ್ಳಬಹುದು. ಅದೇನೆಂದರೆ ಈ ಎಳನೀರನ್ನು ದಿನನಿತ್ಯ ನಾವು ಕುಡಿಯುವುದರಿಂದ ರಕ್ತದ ಒತ್ತಡ ಕಡಿಮೆಯಾಗುತ್ತದೆ ಮತ್ತು ಎಳನೀರಿನಲ್ಲಿ ಪೊಟಾಶಿಯಂ ಅಂಶ ಜಾಸ್ತಿ ಇರುವುದರಿಂದ ಇದು ದೇಹಕ್ಕೆ ಅತ್ಯುತ್ತಮ. ದೇಹದಲ್ಲಿ ಸುಸ್ತಾದರೆ ಎಳನೀರಿನ ಜೊತೆಗೆ ಸ್ವಲ್ಪ ಗ್ಲೂಕೋಸನ್ನು ಹಾಕಿಕೊಂಡು ಕುಡಿಯುವುದು ಉತ್ತಮ. ಜೊತೆಗೆ ಈ ಎಳನೀರನ್ನು ಬೆಳಗ್ಗೆ ಎದ್ದ ಕೂಡಲೇ ಸೇವಿಸುವುದರಿಂದ ದೇಹದಲ್ಲಿ ಯಾವುದಾದರೂ ಕಲ್ಮಶಗಳಿದ್ದರೆ ಹೋಗುತ್ತದೆ ಮತ್ತು ಕಿಡ್ನಿಯಲ್ಲಿ ಕಲ್ಲಿದ್ದರೆ ಎಳನೀರನ್ನು ಅತಿ ಹೆಚ್ಚಾಗಿ ಕುಡಿಯುವುದು ಕೂಡ ಒಳ್ಳೆಯದು ಮತ್ತು ನಾವು ಸಾಮಾನ್ಯವಾಗಿ ಗ್ಯಾಸ್ಟಿಕ್ ಎಂಬ ಒಂದು ಕಾಯಿಲೆಯಿಂದ ಪ್ರತಿಯೊಬ್ಬರೂ ಬಳಲುತ್ತಿರುತ್ತಾರೆ.

ಈ ಕಾಯಿಲೆಯಿಂದ ಬಳಲುತ್ತಿರುವವರು ಎಲ್ಲರೂ ಕೂಡ ಬೆಳಗ್ಗೆ ಎದ್ದ ಕೂಡಲೇ ಒಂದು ಎಳನೀರಿಗೆ ಸ್ವಲ್ಪ ನಿಂಬೆರಸವನ್ನು ಹಾಕಿಕೊಂಡು ಕುಡಿಯುವುದರಿಂದ ಗ್ಯಾಸ್ಟಿಕ್ ಕಡಿಮೆಯಾಗುತ್ತದೆ. ಈ ರೀತಿ ರಸ್ತೆ ಬದಿಯಲ್ಲಿ ಸಿಗುವ ಎಳನೀರು ಎಷ್ಟೊಂದು ಉಪಯೋಗಗಳನ್ನು ಹೊಂದಿದೆ ನೋಡಿ. ದಿನ ಎದ್ದ ಕೂಡಲೇ ಒಂದು ಎಳನೀರನ್ನು ಕುಡಿಯುವ ಅಭ್ಯಾಸವನ್ನು ಮಾಡಿಕೊಳ್ಳಿ. ಇದು ದೇಹಕ್ಕೆ ತಂಪು ಮತ್ತು ಆರೋಗ್ಯಕ್ಕೆ ಉತ್ತಮವಾದಂತಹ ಔಷಧಿಯಾಗಿದೆ ಶುಭ ದಿನ ಧನ್ಯವಾದಗಳು

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •