ಕನ್ನಡ ಚಲನ ಚಿತ್ರರಂಗದಲ್ಲಿ ಸುಧಾರಾಣಿಯವರು ಮನಮೋಹಕ ನಟಿ ಅಂತನೇ ಹೇಳಬಹುದು ತಮ್ಮ 16 ವಯಸ್ಸಿನಲ್ಲಿಯೇ ಕನ್ನಡ ಚಲನಚಿತ್ರ ರಂಗವನ್ನು ಪಾದರ್ಪಣೆ ಮಾಡಿದ್ದರು. ಸುಧಾರಾಣಿ ಅವರು ಮೊಟ್ಟಮೊದಲ ಬಾರಿಗೆ ಡಾಕ್ಟರ್ ಶಿವರಾಜ್ ಕುಮಾರ್ ಅವರು ಅಭಿನಯಿಸಿದ ಆನಂದ್ ಸಿನಿಮಾದಲ್ಲಿ ನಾಯಕಿಯಾಗಿ ಆಯ್ಕೆಗೊಂಡರು. ಇವರನ್ನು ಡಾಕ್ಟರ್ ರಾಜಕುಮಾರ್ ಹಾಗೂ ಪಾರ್ವತಮ್ಮನವರು ಆಯ್ಕೆ ಮಾಡಿಕೊಂಡು ಈ ಒಂದು ಸಿನಿಮಾದ ನಾಯಕಿ ಎಂದು ಪರಿಗಣಿಸಿದರು. ನಂತರ ಅಲ್ಲಿಂದ ಸುಧಾರಾಣಿ ಅವರ ಸಿನಿಮಾದ ಜೀವನ ಆರಂಭವಾಯಿತು ಇವರು ಅಭಿನಯಿಸಿದ ಮೊದಲ ಚಿತ್ರದಲ್ಲಿಯೇ ಅತ್ಯುತ್ತಮವಾಗಿ ನಟಿಸಿದರು ಇದನ್ನು ನೋಡಿದಂತಹ ಅಭಿಮಾನಿಗಳು ತುಂಬಾನೇ ಮೆಚ್ಚಿಕೊಂಡರು. ಅಷ್ಟೇ ಅಲ್ಲದೆ ಇವರು ನಟಿಸಿದ ಆನಂದ್ ಸಿನಿಮಾ ನೂರು ದಿನಗಳನ್ನು ಕೂಡ ಪೂರೈಸಿತು. ತದನಂತರ ಸುಧಾರಣೆ ಅವರು ಒಂದರ ಮೇಲೊಂದರಂತೆ ಹಿಟ್ ಸಿನಿಮಾಗಳನ್ನು ನೀಡುವುದರ ಮೂಲಕ ಕನ್ನಡದ ಜನರಿಗೆ ಚಿರಪರಿಚಿತ ನಾಯಕಿಯಾಗಿ ಉಳಿದುಕೊಂಡರು‌

ಚಂದನವನದಲ್ಲಿ ಆ ಕಾಲದಲ್ಲಿ ಬಹು ಬೇಡಿಕೆಯನ್ನು ಪಡೆದುಕೊಂಡಂತಹ ನಟಿ ಎಂದರೆ ಅದು ಸುಧಾರಾಣಿ ಅವರು ಮಾತ್ರ. ನಂತರ ಡಾಕ್ಟರ್ ರಾಜಕುಮಾರ್ ಅವರ 200ನೇ ಸಿನಿಮಾ ವಾದಂತಹ ದೇವತಾ ಮನುಷ್ಯ ಎಂಬ ಸಿನಿಮಾದಲ್ಲಿ ಕೂಡ ಸುಧಾರಾಣಿ ಅವರ ಪಾತ್ರವನ್ನು ಮಾಡಬೇಕು ಎಂದು ಅಪ್ಪಾಜಿಯವರು ಕೇಳಿಕೊಂಡರಂತೆ‌ ಇದಾದ ಮೇಲೆ ರವಿಚಂದ್ರನ್ ಅವರ ಬಹಳಷ್ಟು ಚಿತ್ರವನ್ನು ಸುಧಾರಣೆ ಅವರು ನಿರಾಕರಿಸಿದರು‌. ಆದರೆ ಮನೆ ದೇವರು ಎಂಬ ಚಿತ್ರವನ್ನು ಯಾವುದೇ ಕಾರಣಕ್ಕೂ ನೀನು ನಿರಾಕರಿಸಲು ಸಾಧ್ಯವಿಲ್ಲ ಈ ಚಿತ್ರವನ್ನು ನೀನು ಮಾಡಬೇಕು ಅಂತ ರವಿಚಂದ್ರನ್ ಹೇಳಿಕೊಂಡರಂತೆ. ಈ ಚಿತ್ರಕಥೆ ಬಹಳ ಚೆನ್ನಾಗಿ ಇದ್ದ ಕಾರಣ ಈ ಒಂದು ಸಿನಿಮಾ ಒಪ್ಪಿಕೊಂಡರು ಇದು ಬಹಳ ದೊಡ್ಡ ಯಶಸ್ಸು ತಂದುಕೊಟ್ಟ ಚಲನಚಿತ್ರವಾಗಿದೆ. ನಂತರ ಸುಧಾರಾಣಿ ಅವರು ಅಮೆರಿಕಾಕ್ಕೆ ಹೋದರು ಅಲ್ಲಿ ನಡೆದ ಘಟನೆ ಕೇಳಿದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ.
ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •