ಜನರು ತಮ್ಮ ಆರೋಗ್ಯ ಮತ್ತು ಸೌಂದರ್ಯವನ್ನು ಕಾಪಾಡಿಕೊಳ್ಳಲು ಅನೇಕ ಮನೆಮದ್ದುಗಳನ್ನು ಅನುಸರಿಸುವುದನ್ನು ನೋಡಿದ್ದೇವೆ. ಹುಡುಗಿಯಾಗಿರಬಹುದು, ಹುಡುಗನಾಗಿರಬಹುದು ಇಬ್ಬರೂ ಸೌಂದರ್ಯದ ವಿಷಯಕ್ಕೆ ಬಂದರೆ ತಮ್ಮ ಚರ್ಮದ ಸೌಂದರ್ಯ ಹೆಚ್ಚಿಸಿಕೊಳ್ಳಲು ವಿಭಿನ್ನ ರೀತಿಯ ಫೇಸ್ ಪ್ಯಾಕ್, ಫೇಸ್ ಮಾಸ್ಕ್  ಪ್ರಯೋಗ ಮಾಡುವುದನ್ನು ನಾವು ನೋಡಿದ್ದೇವೆ. ಆದರೆ ಕೆಲವೊಮ್ಮೆ ಜನರು ತಮ್ಮ ಸೌಂದರ್ಯ ಹೆಚ್ಚಿಸಿಕೊಳ್ಳಲು ಯಾರೂ ಊಹಿಸಿದಂತಹ ಕೆಲಸಗಳನ್ನು ಮಾಡುತ್ತಾರೆ. ಅದನ್ನು ನೀವು ಯೋಚಿಸಲು ಸಹ ಸಾಧ್ಯವಿಲ್ಲ. ಹೌದು, ಇಂತಹ ಸುದ್ದಿ ಕೇಳಿಬರುತ್ತಿರುವುದು ಅಮೆರಿಕದಿಂದ. ಯುವತಿಯೊಬ್ಬರು ಸೌಂದರ್ಯ ಹೆಚ್ಚಿಸಿಕೊಳ್ಳಲು ಏನು ಮಾಡುತ್ತಾಳೆಂಬುದನ್ನು ಕೇಳಿದರೆ ಕೆಲವರಿಗೆ ಅಸಹ್ಯ ಎನಿಸಬಹುದು, ಇನ್ನು ಕೆಲವರಿಗೆ ವಿಚಿತ್ರ ಎನಿಸಬಹುದು. ಹೌದು, ಆ ಸುಂದರ ಯುವತಿ ಸೌಂದರ್ಯ ಹೆಚ್ಚಿಸಿಕೊಳ್ಳಲು ನಾಯಿ ಮೂತ್ರವನ್ನು ಕುಡಿಯುತ್ತಾಳೆ. ಇದನ್ನು ಓದಿ ನಿಮಗೆ ಆಶ್ಚರ್ಯವಾದರೂ, ಅದು ನಿಜ.

dog

ಕಾಂತಿಯುತವಾಗಿ ಹೊಳೆಯುವ ಚರ್ಮ

ಯುಎಸ್’ನಲ್ಲಿ ವಾಸಿಸುವ ಲೀನಾ ಎಂಬ ಸುಂದರ ಮಹಿಳೆ ತನ್ನ ನಾಯಿಯ ಮೂತ್ರವನ್ನು ಪ್ರತಿ ದಿನ ಕುಡಿಯುತ್ತಾಳೆ. ಇದರಿಂದ ಆಕೆಯ ಸೌಂದರ್ಯ ಹೆಚ್ಚುವುದಲ್ಲದೆ, ಚರ್ಮ ಕಾಂತಿಯುತವಾಗಿ ಹೊಳೆಯುತ್ತದೆಯಂತೆ. ಲೀನಾಗೆ ಪ್ರತಿಯೊಬ್ಬರೂ ನಿಮ್ಮ ಹೊಳೆಯುವ ಚರ್ಮದ ರಹಸ್ಯವೇನು ಎಂದು ಜನರು ಯಾವಾಗಲೂ ಕೇಳುತ್ತಾರಂತೆ. ಆಗ ಆಕೆ “ಪ್ರತಿದಿನ ನಾಯಿಯ ಮೂತ್ರವನ್ನು ಕುಡಿಯುತ್ತೇನೆ ಇದರಿಂದ ಮುಖ ಯಾವಾಗಲೂ ಹೊಳೆಯುತ್ತದೆ, ಚರ್ಮದ ಮೇಲಿನ ಕಲೆಗಳು ಗುಣವಾಗುತ್ತವೆ. ನಾನು ನನ್ನ ನಾಯಿಯ ಮೂತ್ರವನ್ನು ಕುಡಿಯುವವರೆಗೂ ಖಿನ್ನತೆಗೆ ಒಳಗಾಗಿದ್ದೆ, ದುಃಖಿತಳಾಗಿದ್ದೆ. ನನಗೆ ಕೆಟ್ಟ ಮೊಡವೆಗಳು ಇದ್ದವು” ಎಂಬುದನ್ನು ಲೀನಾ ಹೇಳಿಕೊಂಡಿದ್ದಾರೆ. ಆಕೆಯ ಈ ವಿಧಾನ ಕೇಳಿ ಎಲ್ಲರಿಗೂ ಆಶ್ಚರ್ಯವಾಗಿದೆ. ಯಾರು ಮೊದಮೊದಲು ನಂಬಲಿಲ್ಲ. ಅಂದರೆ ಉತ್ತಮ ಚರ್ಮಕ್ಕಾಗಿ ಹೀಗೂ ಮಾಡಬಹುದು ಎಂದು ಯಾರೂ ಊಹಿಸಲು ಸಾಧ್ಯವಾಗಲಿಲ್ಲ.

ಲೀನಾ ಅವರ ಅನಿಸಿಕೆಯೇನು?

ಲೀನಾ ಪ್ರಕಾರ ನಾಯಿಯ ಮೂತ್ರವು ವಿಟಮಿನ್ ಎ, ಇ ಮತ್ತು ಕ್ಯಾಲ್ಸಿಯಂ ಗುಣಲಕ್ಷಣಗಳನ್ನು ಹೊಂದಿದೆ. ಇದು ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಹಳ ಸಹಾಯಕವಾಗಿದೆ ಎಂದು ಸಾಬೀತಾಗಿದೆ. ಸ್ವಲ್ಪ ಸಮಯದ ಹಿಂದೆ ಅವರ ಮುಖದಲ್ಲಿ ಸಾಕಷ್ಟು ಗುಳ್ಳೆಗಳು ಇದ್ದವು ಎಂಬುದನ್ನು ಸ್ವತಃ ಲೀನಾಳೆ ಹೇಳುತ್ತಾರೆ. ಮೊದಲು ಮೂತ್ರ ಸೇವಿಸಿದಾಗ ವಿಚಿತ್ರವೆನಿಸಿತ್ತು. ಆದರೆ ನಿಧಾನವಾಗಿ ನಾನು ಅದನ್ನು ಬಳಸತೊಡಗಿದೆ ಎಂಬುದನ್ನು ಲೀನಾ ಹೇಳಿದ್ದಾರೆ. ಮೊದಲಿಗೆ ಇದನ್ನು ಕೇಳಿದ ನಂತರ ಯಾರೊಬ್ಬರೂ ನಂಬಲಿಲ್ಲವಂತೆ.

ಮೂತ್ರ ಸೇವಿಸುವುದರಿಂದ ಗುಳ್ಳೆಗಳು ಗುಣವಾಗುತ್ತವೆ

ಯಾವಾಗ ಲೀನಾ ಮೂತ್ರ ಕುಡಿಯಲು ಆರಂಭಿಸಿದರೂ ಆಗ ಗುಳ್ಳೆಗಳು ಸಂಪೂರ್ಣವಾಗಿ ಗುಣವಾಗಿವೆ. ಮುಖದ ಸೌಂದರ್ಯ ಕೂಡ ಹೆಚ್ಚಿದೆ. ಲೀನಾ ತಮ್ಮ  ಸೌಂದರ್ಯ ಮತ್ತು ಅನುಸರಿಸುತ್ತಿರುವ ಸಲಹೆಗಳಿಗಾಗಿ ವಿಶ್ವದಾದ್ಯಂತ ಸುದ್ದಿಯಾಗಿದ್ದಾರೆ. ಸುಂದರವಾದ ಲೀನಾ ತನ್ನ ನಾಯಿಯನ್ನು ಉದ್ಯಾನವನಕ್ಕೆ ಕರೆದೊಯ್ಯುತ್ತಾಳೆ, ನಂತರ ಅದರ ಮೂತ್ರವನ್ನು ಸಂಗ್ರಹಿಸಿ ಕುಡಿಯುತ್ತಾಳೆ.

ತಜ್ಞರ ಅಭಿಪ್ರಾಯವೇನು?

ಕೆಲವು ತಜ್ಞರು ಈ ರೀತಿ ನಾಯಿ ಮೂತ್ರ ಕುಡಿಯುವ ಪದ್ಧತಿ ಮೊದಲಿನಿಂದಲೂ ಇದೆ. ಆದರೆ ಆರೋಗ್ಯಕರವಾಗಿರಲು ನಾಯಿ ಮೂತ್ರಕ್ಕಿಂತ ರುಚಿಯಾದ ಬೇರೆ ಪಾನೀಯಗಳೂ ಇವೆ.ಅದನ್ನು ಜನರು ಉಪಯೋಗಿಸಬಹುದು. ಆಪಲ್ ಸೈಡರ್ ವಿನೆಗರ್ ಮತ್ತು ಟ್ಯಾಪ್ ವಾಟರ್ ನಿಮಗೆ ಮೂತ್ರದಂತೆಯೇ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಇವು ತುಂಬಾ ಸುರಕ್ಷಿತ ಆಯ್ಕೆಗಳಾಗಿವೆ ಎಂದು ತಿಳಿಸಿದ್ದಾರೆ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •