ನಮ್ಮ ದೇಶ ಇಷ್ಟೊಂದು ಮುಂದುವರೆದಿದ್ದರು ಇವತ್ತಿಗೂ ಕೂಡ ಗಂಡು ಮಗ, ಹೆಣ್ಣು ಮಗಳು ಎಂಬ ತಾರತಮ್ಯ ಮಾಡುವುದನ್ನು ನಾವು ಕಾಣುತ್ತಿದ್ದೇವೆ. ಹೌದು ನಮ್ಮ ಈಗಿನ ಸಮಾಜದಲ್ಲಿ‌ ಗಂಡು ಮಗು ಹುಟ್ಟಿದಾಗ ಸಂಭ್ರಮ ಪಡುವಷ್ಟು ಹೆಣ್ಣು ಮಗು ಹುಟ್ಟಿದಾಗ ಸಂಭ್ರಮ ಪಡುವುದಿಲ್ಲ. ಬೇಸರ ಪಡುತ್ತಾರೆ. ವಂಶೋದ್ದಾರಕ ಬೇಕು ಹೆಣ್ಣು ಮಗು ಬೇಡ ಎಂದು ಹೇಳುವವರೇ ಹೆಚ್ಚು.

ಈ ದೇಶದಲ್ಲಿ ಲಿಂಗ ಅನುಪಾತದಲ್ಲಿ ಹೆಣ್ಣು ಮಕ್ಕಳಿಗಿಂತ, ಗಂಡು ಮಕ್ಕಳ ಸಂಖ್ಯೆ ಅತಿ ಹೆಚ್ಚಾಗಿದೆ. ಇಂತಹ ಸಮಾಜದ ಪರಿಸ್ಥಿತಿಯಲ್ಲಿ ವಾರಣಾಸಿಯ ಲೇಡಿ ಡಾ.ಶಿಪ್ರಾ ಧಾರ್ ಹೆಣ್ಣು ಮಕ್ಕಳ ಜನನವನ್ನು ಹೆಚ್ಚಿಸಲು, ತಮ್ಮ ನರ್ಸಿಂಗ್ ಹೋಂ ನಲ್ಲಿ ಹೆಣ್ಣು ಮಗು ಜನಿಸಿದರೆ ಶುಲ್ಕವನ್ನ ತೆಗೆದುಕೊಳ್ಳುವುದಿಲ್ಲ. ಅಷ್ಟೇ ಅಲ್ಲದೆ ಹೆಣ್ಣು ಮಗು ಜನಿಸಿದ ಕುಷಿಗೆ ಇಡೀ ನರ್ಸಿಂಗ್ ಹೋಂ ನಲ್ಲಿರುವ ಎಲ್ಲರಿಗೂ ಸಿಹಿಯನ್ನು ಹಂಚಿ ಸಂಭ್ರಮ ಪಡುತ್ತಾರೆ.

ಡಾ. ಶಿಪ್ರಾ ಧಾರ್ ಅವರು ವಾರಣಾಸಿಯಲ್ಲಿ ತಮ್ಮದೇ ಆದ ನರ್ಸಿಂಗ್ ಹೋಂ ಅನ್ನು ನಡೆಸುತ್ತಿದ್ದಾರೆ. ಇವರ ಈ ಕೆಲಸಕ್ಕೆ ಅವರ ಪತಿ ಡಾ.ಎಂ.ಕೆ ಶ್ರಿವಾಸ್ತವ ಅವರು ಕೂಡ ಬೆಂಬಲವನ್ನು ನೀಡುತ್ತಿದ್ದಾರೆ. ಈ ಇಬ್ಬರು ವೈದ್ಯ ದಂಪತಿಗಳು ಹೆಣ್ಣು ಮಗುವಿನ ಜನನ ಹೆಚ್ಚಿಸುವ ಕಾರ್ಯದಲ್ಲಿ ತಮ್ಮನ್ನು ತಾವು ತೋಡಗಿಸಿಕೊಂಡಿದ್ದಾರೆ

ಹೆಣ್ಣು ಗಂಡು ಎಂದು ತಾರತಮ್ಮ ಮಾಡುವವರಿಗೆ ಸೂಕ್ತ ಉತ್ತರವನ್ನು ನೀಡುತ್ತಾರೆ. ಹೆಣ್ಣು ಮಗು ಜನಿಸಿದಾಗ ಬಡತನ ಕುಟುಂಭ ಎಂಬ ಕಾರಣದಿಂದ ಹಲವು ಸಾರಿ ಜನರು ದುಃಖಪಡುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ಮಗುವನ್ನು ಸಂತೋಷವಾಗಿ ಸ್ವೀಕರಿಸಿ ನಾನು ಪೀಸ್ ವಿಧಿಸುವುದಿಲ್ಲವೆಂದು ಹೇಳುತ್ತಾರೆ.

ಕೆಲವು ಸಾರಿ ಇದರಿಂದ ಆಸ್ವತ್ರೆಯನ್ನು ನಡೆಸಲು ಆರ್ಥಿಕವಾಗಿ ತೋಂದರೆಯಾಗುತ್ತದೆ. ಹಣದ ಕೊರತೆ ಉಂಟಾಗುತ್ತದೆ. ಆದರೆ ಸಮಾಜಕ್ಕೆ ಏನಾದರೂ ಮಾಡುವಾಗ ತೊಂದರೆಗಳು ಸಾಮಾನ್ಯ ಅನುಭವಿಸಬೇಕಾಗುತ್ತದೆ ಎನ್ನುತ್ತಾರೆ ಈ ಡಾಕ್ಟರ್.

ಅಪೌಷ್ಟಿಕತೆಯ ಕಾರಣದಿಂದ ಮಕ್ಕಳು ಮತ್ತು ಕುಟುಂಭಗಳನ್ನು ರಕ್ಷಿಸಲು ಡಾ.ಶಿಪ್ರಾ ಅವರು ಧಾನ್ಯ ಬ್ಯಾಂಕ್ ಅನ್ನು ಸಹ ನಿರ್ವಹಿಸುತ್ತಿದ್ದು. ಪ್ರತಿ ತಿಂಗಳ ಮೊದಲನೆಯ ದಿನದಂದು 38 ಅಸಹಾಯಕ ಕುಟುಂಭಗಳಿಗೆ ಹಾಗೂ ಬಡ ವಿಧವೆಯರಿಗೆ ಆಹಾರ ಧಾನ್ಯಗಳನ್ನು ಒದಗಿಸುತ್ತಾರೆ. ಈಗ ನಗರದ ಇತರ ವೈದ್ಯರೂ ಕೂಡ ಈ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
DMCA.com Protection Status
error: Fuck you !!