ಡಿಕೆ ಶಿವಕುಮಾರ್

ಸಿಹಿಸುದ್ದಿ ನೀಡಿದ ಐಶ್ವರ್ಯ ಅಮರ್ಥ್ಯ ದಂಪತಿ..ಡಿಕೆ ಶಿವಕುಮಾರ್ ಅವರು ಫುಲ್ ಖುಶ್..

Home

ಡಿ ಕೆ ಶಿವಕುಮಾರ್ ಕರ್ನಾಟಕ ರಾಜ್ಯದ ರಾಜಕೀಯ ಮುಖಂಡರೂ ಹಾಗೂ ಮಾಜಿ ಸಚಿವರೂ ಆಗಿರುವ ಡಿಕೆ ಶಿವಕುಮಾರ್ ಅವರ ಕುಟುಂಬದಿಂದ ಸಿಹಿ ಸುದ್ದಿಯೊಂದು ಹೊರ ಬಂದಿದೆ.. ಹೌದು ಕಳೆದ ಫೆಬ್ರವರಿ ತಿಂಗಳಿನಲ್ಲಿ ಮಗಳು ಐಶ್ವರ್ಯಾ ಅವರ ಮದುವೆಯನ್ನು ಅದ್ಧೂರಿಯಾಗಿ ನೆರವೇರಿಸಿದ್ದ ಡಿಕೆಶಿ ತಮ್ಮ ಸ್ನೇಹಿತ ಕಾಫಿ ಕಿಂಗ್ ಸಿದ್ಧಾರ್ಥ್ ಹೆಗ್ಡೆ ಅವರ ಪುತ್ರ ಹಾಗೂ ತಮ್ಮ ಗುರುಗಳಾದ ಎಸ್ ಎಂ ಕೃಷ್ಣ ಅವರ ಮೊಮ್ಮಗನೂ ಆಗಿರುವ ಅಮರ್ಥ್ಯ ಹೆಗ್ಡೆ ಅವರಿಗೆ ಮಗಳನ್ನು ಧಾರೆ ಎರೆದಿದ್ದರು.. ಸಿದ್ದಾರ್ಥ್ ಹೆಗ್ಡೆ ಅವರು ಅಗಲಿದ ಬಳಿಕ ವರ್ಷದ ಒಳಗೆ ಶುಭಕಾರ್ಯ ಮಾಡಬೇಕೆಂದು ಮಗಳಿಗೆ ಇನ್ನೂ ಇಪ್ಪತ್ತೆರೆಡು ವರ್ಷವಿದ್ದರೂ ಸಹ ಅಮರ್ಥ್ಯ ಅವರ ಜೊತೆಗೆ ಮದುವೆ ಸಮಾರಂಭ ನೆರವೇರಿಸಿದ್ದರು.. ಇದೀಗ ಡಿಕೆಶಿವಕುಮಾರ್ ಅವರ ಮಗಳು ಐಶ್ವರ್ಯಾ ಹಾಗೂ ಅಳಿಯ ಅಮರ್ಥ್ಯ ಅವರ ಕಡೆಯಿಂದ ಸಿಹಿ ಸುದ್ದಿಯೊಂದು ಬಂದಿದ್ದು ಡಿ ಕೆ ಶಿವಕುಮಾರ್ ಅವರು ಸಂತೋಷದಲ್ಲಿದ್ದಾರೆ..

DK Shivakumar Daughter Aishwarya & Amartya Hegde Wedding

ಹೌದು ಡಿಕೆ ಶಿವಕುಮಾರ್ ಕರ್ನಾಟಕ ರಾಜ್ಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದು ಸಧ್ಯ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದು ಮುಖ್ಯಮಂತ್ರಿಯಾಗುವ ಉದ್ದೇಶವನ್ನು ಇಟ್ಟುಕೊಂಡಿದ್ದಾರೆಂಬುದು ಎಲ್ಲರಿಗೂ ತಿಳಿದಿರುವ ವಿಚಾರ‌.. ಇನ್ನು ಸಧ್ಯ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಾಗಿ ಸಧ್ಯ ಸಿದ್ದರಾಮಯ್ಯನವರೂ ಸಹ ಇರುವುದು ಡಿಕೆ ಶಿವಕುಮಾರ್ ಅವರಿಗೆ ಕೊಂಚ ತಲೆ ನೋವೇ ಎನ್ನಬಹುದು.. ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನದ ರೇಸ್ ನಿಂದ ಹಿಂದೆ ಸರಿದಿದ್ದರೂ ಸಹ ಕೆಲ ದಿನಗಳಿಂದ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಿದ್ದರಾಮಯ್ಯ ಅವರೂ ಸಹ ಮುಖ್ಯಮಂತ್ರಿ ಸ್ಥಾನಕ್ಕೆ ಪ್ರಬಲ ಸ್ಪರ್ಧಿ ಎನ್ನಲಾಗುತ್ತಿದೆ.. ಇನ್ನು ಇತ್ತ ರಾಜಕೀಯದಲ್ಲಿ ತಮ್ಮ ಬಣವನ್ನು ಬಲಿಷ್ಟ ಮಾಡಿಕೊಳ್ಳುವತ್ತ ಗಮನ ಹರಿಸಿರುವ ಡಿ ಕೆ ಶಿವಕುಮಾರ್ ಅವರು ತಮ್ಮ ಕುಟುಂಬದಿಂದ ಮತ್ತೊಬ್ಬ ಅಭ್ಯರ್ಥಿಯನ್ನು ತಯಾರು ಮಾಡಿದ್ದಾರೆ..

ಹೌದು ಕಾಫಿ‌ ಕಿಂಗ್ ಸಿದ್ದಾರ್ಥ್ ಪುತ್ರ ಅಮರ್ಥ್ಯ ಹೆಗ್ಡೆ ರಾಜಕೀಯಕ್ಕೆ ಅಧಿಕೃತವಾಗಿ ಎಂಟ್ರಿ ನೀಡುತ್ತಿದ್ದು‌ ಮಾವನಿಗೆ ಶುಭ ಸುದ್ದಿ ನೀಡಿದ್ದಾರೆ.. ಹೌದು ಈ ಹಿಂದೆ ರಾಜಕೀಯಕ್ಕೆ ಅಳಿಯನನ್ನು ಕರೆತರುವ ಪ್ರಯತ್ನ ಮಾಡಿದ್ದರೂ ಸಹ ಅಮರ್ಥ್ಯ ಹೆಗ್ಡೆ ಅಷ್ಟು ಆಸಕ್ತಿ ವಹಿಸಿರಲಿಲ್ಲ.. ಆದರೀಗ ಮಗಳು ಐಶ್ವರ್ಯಾ ಹಾಗೂ ಅಮರ್ಥ್ಯ ಹೆಗ್ಡೆ ಇಬ್ಬರೂ ಸಹ ರಾಜಕೀಯಕ್ಕೆ ಎಂಟ್ರಿ ನೀಡಲು ಅಧಿಕೃತವಾಗಿ ಮಾವನಿಗೆ ಒಪ್ಪಿಗೆ ನೀಡಿದ್ದಾರೆ ಎಂದು ತಿಳಿದುಬಂದಿದ್ದು ಡಿ ಕೆ ಶಿವಕುಮಾರ್ ಅವರು ಅಳಿಯನ ನಿರ್ಧಾರದಿಂದ ಸಿಕ್ಕಾಪಟ್ಟೆ ಸಂತೋಷದಲ್ಲಿದ್ದಾರೆ..

DK Shivakumar Daughter Aishwarya Marriage Latest | Aishwarya Amartya Hegde  | Namma Kannada News - YouTube

ಹೌದು ಅದಾಗಲೇ ರಾಜ್ಯದ ಐದು ವಿಧಾಮ ಸಭಾ ಕ್ಷೇತ್ರದ ಅಭ್ಯರ್ಥಿಗಳ ಹೆಸರನ್ನು ಫೈನಲೈಸ್ ಮಾಡಿರುವ ಡಿ ಕೆ ಶಿವಕುಮಾರ್ ಅವರು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಿಂದ ಅಳಿಯ ಅಮರ್ಥ್ಯ ಹೆಗ್ಡೆ ಅವರ ಹೆಸರನ್ನು ಅಂತಿಮಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.. ಹೌದು ಚಿಕ್ಕಮಗಳೂರು ಭಾಗದಲ್ಲಿ ಸಿದ್ದಾರ್ಥ್ ಹೆಗ್ಡೆ ಅವರನ್ನು ದೇವರಂತೆ ನೋಡುವ ಜನರೂ ಸಹ ಇದ್ದು ಈಗ ಅವರ ಮಗ ಅಮರ್ಥ್ಯ ಹೆಗ್ಡೆ ಅದೇ ಭಾಗದಿಂದ ರಾಜಕೀಯಕ್ಕೆ ಎಂಟ್ರಿ ನೀಡುತ್ತಿದ್ದು ಗಟ್ಟಿಯಾಗಿ ರಾಜಕೀಯವಾಗಿ ನೆಲೆಯೂರುವ ಎಲ್ಲಾ ತಯಾರಿ ನಡೆಸುತ್ತಿದ್ದಾರೆ ಎನ್ನಬಹುದು..

ಇನ್ನು ಇತ್ತ ಎಸ್ ಎಂ ಕೃಷ್ಣ ಅವರ ಮೊಮ್ಮಗನೂ ಆಗಿರುವ ಅಮರ್ಥ್ಯ ಹೆಗ್ಡೆ ಅವರಿಗೆ ರಾಜಕಿಯ ಕಲೆಗಳನ್ನು ಕಲಿಯಲು ತಾತನ ಮಾರ್ಹದರ್ಶನ ಸಿಗಲಿದ್ದು ಒಟ್ಟಿ‌ನಲ್ಲಿ ಡಿಕೆ ಶಿವಕುಮಾರ್ ಕುಟುಂಬದುಂದ ಮತ್ತೊಬ್ಬ ಸದಸ್ಯ ರಾಜಕೀಯಕ್ಕೆ ಬರುವುದು ಖಚಿತವಾಗಿದೆ.. ಈ ಮೊದಲು ಮಂಡ್ಯ ಕ್ಷೇತ್ರದಿಂದ ಅಳಿಯನನ್ನು ಕಣಕ್ಕಿಳಿಸುವ ನಿರ್ಧಾರ ಮಾಡಿದ್ದರೂ ಸಹ ಎಸ್ ಎಂ ಕೃಷ್ಣ ಅವರು ಸಧ್ಯ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿರುವ ಕಾರಣ ಅವರು ಬಂದು ಮಂಡ್ಯದಲ್ಲಿ‌ ಪ್ರಚಾರ ಮಾಡಲು ಸಾಧ್ಯವಾಗದು.. ಈ ಕಾರಣಕ್ಕೆ ಚಿಕ್ಕಮಗಳೂರು ಕ್ಷೇತ್ರದಲ್ಲಿ ಸುಲಭವಾಗಿ ಜಯಗಳಿಸಬಹುದೆಂದು ಆ ಕ್ಷೇತ್ರದಿಂದಲೇ ಅಳಿಯನ ಸ್ಪರ್ಧೆಯನ್ನು ತೀರ್ಮಾನ ಮಾಡಿದ್ದಾರೆ..

In pics: DKS's daughter Aishwarya gets engaged to CCD founder Siddartha's  son Amartya | The News Minute

ಇನ್ನು ಇತ್ತ ಸಿದ್ದರ್ಥ್ ಹೆಗ್ಡೆ ಅವರು 2019 ರಲ್ಲಿ ನೇತ್ರಾವತಿ ನಡಿಯಲ್ಲಿ ಜೀವ ಕಳೆದುಕೊಂಡ ನಂತರ ಅವರ ಕಂಪನಿ ಅಕ್ಷರಶಃ ದಿಕ್ಕು ತೋಚದಂತಾಗಿತ್ತು.. ಆನಂತರ ಸಿದ್ದಾರ್ಥ್ ಹೆಗ್ಡೆ ಅವರ ಪತ್ನಿ ಹಾಗೂ ಮಗ ಅಮರ್ಥ್ಯ ಹೆಗ್ಡೆ ಉದ್ಯಮದ ಜವಾಬ್ದಾರಿ ಹೊತ್ತರು.. ವಿದೇಶದಲ್ಲಿ ವ್ಯಾಸಂಗ ಮುಗಿಸಿ ಬಂದಿದ್ದ ಅಮರ್ಥ್ಯ ಹೆಗ್ಡೆ ಅವರು ನಂತರ ಪೂರ್ಣ ಪ್ರಮಾಣದ ಉದ್ಯಮಿಯಾಗಿ ಗುರುತಿಸಿಕೊಂಡರು.. ಆನಂತರ ಐಶ್ವರ್ಯ ಅವರ ಕೈ ಹಿಡಿದ ಅಮರ್ಥ್ಯ ಅವರು ಇದೀಗ ಉದ್ಯಮದ ಜೊತೆ ರಾಜಕೀಯಕ್ಕೆ ಬರುತ್ತಿದ್ದು ಇತ್ತ ಐಶ್ವರ್ಯ ಶಿವಕುಮಾರ್ ಅವರೂ ಸಹ ಇದೀಗ ಗಂಡನ ಜೊತೆ ರಾಜಕೀಯಕ್ಕೆ ಎಂಟ್ರಿ ನೀಡಲಿದ್ದು ಅಪ್ಪನನ್ನು ನೋಡಿ ರಾಜಕೀಯದ ಅಂತರಾಳವನ್ನು ತಿಳಿದಿರುವ ಐಶ್ವರ್ಯಾ ಅಮರ್ಥ್ಯ ಅವರ ರಾಜಕೀಯ ಕೆಲಸಗಳಿಗೆ ನೆರವಾಗಲಿದ್ದಾರೆ‌‌ ಎಂದು ತಿಳಿದು ಬಂದಿದೆ..

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...