ಮದುವೆಯಾಗಿ 2-3 ತಿಂಗಳಲ್ಲಿದಾಂ’ ಪತ್ಯದಿಂದ ದೂರ ಸರಿಯುವ ಅಲೋಚನೆ ಆರಂಭವಾಗುತ್ತದೆ. ಹೀಗೆ ದಾಂ ‘ಪತ್ಯದಿಂದ ಹೊರ ಬರಬೇಕು ಎಂದು ಯೋಚಿಸಿದವರೆಲ್ಲ ವಿಚ್ಛೇದನ ಪಡೆಯುವುದಿಲ್ಲ. ಆದರೆ ಈ ಸಂಬಂಧ ಆಪ್ತ ಸಲಹೆಗಾರರನ್ನು, ನ್ಯಾಯವಾದಿಗಳ ನ್ನು ಭೇಟಿ ಮಾಡುವ ಪ್ರಕರಣಗಳು ಹೆಚ್ಚುತ್ತಿವೆ.

ಈ ಬಗ್ಗೆ ಕೌಟುಂ ಬಿಕ ಆಪ್ತ ಸಲಹೆಗಾರರು ಹಾಗೂ ನ್ಯಾಯವಾದಿಗಳು ಹೇಳುವ ಮಾತೇನು ಅಂದರೆ ‘ಪತಿ ಅಥವಾ ಪ ತ್ನಿ ಯದ್ದೇ ತಪ್ಪು ಅನ್ನುವ ದಂಪತಿ ಒಂದೆರಡು ಸುತ್ತಿನ ಆಪ್ತ ಸಲಹೆ ಮೂಲಕ ತಮ್ಮ ನಿರ್ಧಾರ ಬದಲಿಸಿಕೊಳ್ಳುವುದಿಲ್ಲ. ಆದರೂ ಸತತ ಪ್ರಯತ್ನದಿಂದ ಹೆಚ್ಚುತ್ತಿರುವ ವಿಚ್ಛೇ ದನ ಪ್ರಮಾಣವನ್ನು ಕಡಿಮೆ ಮಾಡಲು ಪ್ರಯತ್ನಿಸಲಾಗುತ್ತಿದೆ. ಏಕೆಂದರೆ ಈ ಹಂತದಲ್ಲೇ ಸಮಸ್ಯೆ ಪರಿಹಾರವಾಗಬಹುದು’ ಎನ್ನುತ್ತಾರೆ.

ವೈವಾ ಹಿಕ ಬದುಕಿಗೆ ಹೊಂದಿಕೊಳ್ಳಲು ಸಮಯ ಬೇಕು. ಆತುರದ ನಿರ್ಧಾರ ಬೇಡ.
ವಿವಾಹಪೂರ್ವದ ನಿರೀಕ್ಷೆ ಹುಸಿಯಾಗಿದ್ದರೆ ಬದಲಾವಣೆಗೆ ಹೊಂದಿಕೊಳ್ಳಿ. ತೀರ ಕಡಿಮೆ ಅವಧಿಯಲ್ಲಿ ನಿಮ್ಮ ನಿರೀಕ್ಷೆ ಹು ಸಿಯಾಗಿದ್ದರ ಬಗ್ಗೆ ಹತಾಷೆ ಬೇಡ. ಬದಲಾದ ಬದುಕಿಗೆ ಹೊಂದಿಕೊಳ್ಳಲು ನಿಮ್ಮ ಸಂ ಗಾತಿಗೂ ಸಮಯ ಬೇಕು.

ಪ ರಸ್ಪರ ಜತೆಗೆ ಸಮಯ ಕಳೆಯುವ ಮೂಲಕ ಒಬ್ಬರನ್ನೊಬ್ಬರು ಅರಿಯಬೇಕು. ಕುಟುಂಬದ ಸದಸ್ಯರ ಜತೆ ಬೆರೆಯಬೇಕು.ನವ ವ ಧುವರರಿಗೆ ಪೂರಕ ವಾತಾವರಣ ಕಲ್ಪಿಸಲು ಮನೆ ಮಂದಿಯೂ ನೆ ರವಾಗಬೇಕು. ಕೌಟುಂಬಿಕ ಸಮಸ್ಯೆಯನ್ನು ಕೇವಲ ನಿಮ್ಮ ದೃ ಷ್ಟಿಕೋನದಲ್ಲಿ ಮಾತ್ರ ನೋಡಬೇಡಿ. ವಾಸ್ತವದ ಸ್ಥಿತಿ ಅವಲೋಕಿಸಿ. ಸಂ ಗಾತಿ ಬಗ್ಗೆ ಇರುವ ಅನುಮಾನಗಳನ್ನು ತಕ್ಷಣ ಮಾತನಾಡಿ ಪರಿಹರಿಸಿಕೊಳ್ಳಿ. ಪರಸ್ಪರ ಕಾಳಜಿ, ಪ್ರೀತಿ ಜತೆ ಸಂಬಂಧದಲ್ಲೊಂದು ಪ್ರಾಮಾಣಿಕತೆ ಇರಲಿ.
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •