ಜಿಲ್ಲಾ ಆಯುಷ್ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವು ಇಲ್ಲಿ ತಿಳಿಯೋಣ.

ಹುದ್ದೆಗಳು:ಹಾಸನ ಜಿಲ್ಲಾ ಪಂಚಾಯಿತಿ ನೇಮಕಾತಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅಲ್ಲಿಯ ಹುದ್ದೆಗಳು ಎಂದರೆ ತಜ್ಞವ್ಯೆದ್ಯರು, ಔಷಧಿ ವಿತರಕರು, ಮಸಾಜಿಸ್ಟ್, ಕ್ಷಾರಸೂತ್ರ ಅಟೆಂಡರ್, ಸ್ತ್ರೀ ರೋಗ ಅಟೆಂಡರ್ ಮತ್ತು ಮಲ್ಟಿಪರ್ಪಸ್ ವರ್ಕರ್. ಅಲ್ಲಿ ಇವೆಲ್ಲ ಹುದ್ದೆಗಳು ಖಾಲಿ ಇದೆ.

ಹುದ್ದೆಗಳ ಸಂಖ್ಯೆ:ಇಲ್ಲಿ ಒಟ್ಟು 20 ಹುದ್ದೆಗಳು ಇವೆ.
ಹುದ್ದೆಯ ಸ್ಥಳ:ಹಾಸನ ಜಿಲ್ಲೆಯಲ್ಲಿ ಉದ್ಯೋಗಕ್ಕೆ ಕರೆಯಲಾಗಿದೆ.

ವಿದ್ಯಾರ್ಹತೆ: 7 ನೇ ತರಗತಿ, 10ನೇ ತರಗತಿ, ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಹತೆಯನ್ನು ಅಭ್ಯರ್ಥಿಗಳು ಆಯಾ ಹುದ್ದೆಗಳಿಗೆ ಅನುಗುಣವಾಗಿ ಹೊಂದಿರಬೇಕು.

District-Ayush-Department

ವಯೋಮಿತಿ: ಕನಿಷ್ಠ 18ವರ್ಷ ಆಗಿರಬೇಕು. ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ ಕನಿಷ್ಠ 35ವರ್ಷ ಆಗಿರಬೇಕು.  ಪ್ರವರ್ಗ-2ಎ, 2ಬಿ,3ಎ, 3ಬಿ ವರ್ಗದ ಅಭ್ಯರ್ಥಿಗಳಿಗೆ  38ವರ್ಷ ಆಗಿರಬೇಕು. ಎಸ್ಸಿಎಸ್ಟಿ  ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ ಆಗಿರಬೇಕು.

ವೇತನ: ಇಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ರೂಪಾಯಿ10,300 ರಿಂದ 35,000ದ ವರೆಗೆ ವೇತನ ನೀಡಲಾಗುತ್ತದೆ.

ಆಯ್ಕೆ ವಿಧಾನ:ಅಭ್ಯರ್ಥಿಗಳು ವಿದ್ಯಾರ್ಹತೆಯಲ್ಲಿ ಪಡೆದಿರುವ ಎಲ್ಲಾ ಪರೀಕ್ಷೆಗಳ ಅಂಕಗಳನ್ನು ಒಗ್ಗೂಡಿಸಿ ಶೇಕಡಾವಾರು ಅಂಕಗಳಿಗೆ ಲೆಕ್ಕ ಮಾಡಿ ಮೆರಿಟ್, ಸಂದರ್ಶನ ಹಾಗೂ ಮೀಸಲಾತಿಯ ಅನ್ವಯ ಆಯ್ಕೆ ಮಾಡಲಾಗಿದೆ.

ಅರ್ಜಿ ಸಲ್ಲಿಸಲು ದಿನಾಂಕ: ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ- 9/10/2020 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 10/11/2020

ಅರ್ಜಿ ಸಲ್ಲಿಸುವ ವಿಧಾನ: ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್ಸೈಟ್ ವಿಳಾಸಕ್ಕೆ ಭೇಟಿ ನೀಡಿ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿ ನಂತರ ಅದನ್ನು ಭರ್ತಿ ಮಾಡಿ ಖುದ್ದಾಗಿ ಅಥವಾ ಅಂಚೆ ಮೂಲಕ ಕಛೇರಿ ವಿಳಾಸಕ್ಕೆ ಕಳುಹಿಸಬೇಕು. WWW.hassan.nic.in

ಅರ್ಜಿ ಸಲ್ಲಿಸುವ ವಿಳಾಸ:-ಆಯುಷ್ ಇಲಾಖೆ, ಜಿಲ್ಲಾ ಆಯುಷ್ ಅಧಿಕಾರಿಗಳ ಕಛೇರಿ,ಹೊಸಲೈನ್ ರಸ್ತೆ ಹಾಸನ ಅರ್ಜಿ ಶುಲ್ಕ: ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •